For Quick Alerts
  ALLOW NOTIFICATIONS  
  For Daily Alerts

  "ಹೊಕ್ಕಳ ಮೇಲೆ ಟ್ಯಾಟು..ಒಪ್ಪದೇ ಇದ್ದರೂ ಬಿಡಲಿಲ್ಲ": ಪ್ರಿಯಾಮಣಿ ಬೇಸರ!

  |

  ಬಹುಭಾಷಾ ನಟಿ ಪ್ರಿಯಾಮಣಿ ಮದುವೆ ನಂತರ ಕೂಡ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 'ಫ್ಯಾಮಿಲಿಮ್ಯಾನ್' ವೆಬ್ ಸೀರಿಸ್‌ನಲ್ಲೂ ನಟಿಸಿ ಗೆದ್ದ ಪ್ರಿಯಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಮಣಿ ಚಿತ್ರರಂಗದಲ್ಲಿ ನಟಿಯರು ಎದುರಿಸುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಹೀರೊಯಿನ್ ಅಂದರೆ ತೆರೆಮೇಲೆ ಕಾಣಿಸುವಷ್ಟು ಖುಷಿಯಾಗಿ ಇರುವುದಿಲ್ಲ. ಅವರ ಕಷ್ಟಗಳು ಅವರಿಗೆ ಮಾತ್ರ ಗೊತ್ತು ಎಂದಿದ್ದಾರೆ.

  ಪ್ರಿಯಾಮಣಿ ಈಗ 'ಮೈದಾನ್', 'ಜವಾನ್' ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. ಕನ್ನಡದಲ್ಲಿ 'ಡಾಕ್ಟರ್ 56' ಹಾಗೂ 'ಕೈಮರ' ಎನ್ನುವ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಕಿರುತೆರೆಯ ಡ್ಯಾನ್ಸ್ ಶೋಗಳಿಗೆ ತೀರ್ಪುಗಾರ್ತಿಯಾಗಿಯೂ ಈ ಬೆಂಗಳೂರು ಬೆಡಗಿ ಕಮಾಲ್ ಮಾಡ್ತಿದ್ದಾರೆ. ನಾಯಕಿಯಾಗಿ ನಟಿಸಲು ಶುರು ಮಾಡಿದ ಆರಂಭದ ದಿನಗಳಲ್ಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದ ಪ್ರಿಯಾ, ಮುಂದೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಪಂಚಭಾಷೆ ತಾರೆ ಎನಿಸಿಕೊಂಡರು. ಉದ್ಯಮಿ ಮುಸ್ತಾಫಾ ರಾಜಾ ಅವರನ್ನು ಪ್ರೀತಿಸಿ ಮದುವೆ ಆದ ಮೇಲೂ ಸಿನಿಮಾಗಳಲ್ಲಿ ನಟಿಸೋದನ್ನು ನಿಲ್ಲಿಸಿಲ್ಲ.

  ಮಕ್ಕಳಿಲ್ಲವೆಂದು ಪ್ರಿಯಾಮಣಿ ವಿಚ್ಛೇದನ: ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ!ಮಕ್ಕಳಿಲ್ಲವೆಂದು ಪ್ರಿಯಾಮಣಿ ವಿಚ್ಛೇದನ: ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ!

  ತೆಲುಗಿನ 'ಎವಡೇ ಅತಗಾಡು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಿಯಾಮಣಿ ಈ 19 ವರ್ಷಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಂದಾಸ್ ರೋಲ್‌ಗಳಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಆದರೆ ಇಷ್ಟ ಇಲ್ಲದಿದ್ದರೂ ಕೆಲವೊಮ್ಮೆ ಕೆಲವು ಪಾತ್ರಗಳನ್ನು ಮಾಡಬೇಕಾಗುತ್ತದೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

  ಹೊಕ್ಕಳ ಮೇಲೆ ಟ್ಯಾಟು ಇರಬೇಕು

  ಹೊಕ್ಕಳ ಮೇಲೆ ಟ್ಯಾಟು ಇರಬೇಕು

  ಒಮ್ಮೆ ಚಿತ್ರಕ್ಕೆ ಸಹಿ ಮಾಡಿದ ಮೇಲೆ ಮುಗಿದೇ ಹೋಯ್ತು. ನಿರ್ಮಾಪಕರು ನಿರ್ದೇಶಕರು ಹೇಳಿದಂತೆ ನಟ ನಟಿಯರು ಕೇಳಬೇಕಾಗುತ್ತದೆ. ಇದೇ ರೀತಿ ತಾವು ಅನುಭವಿಸಿದ ಕಹಿ ಅನುಭವವನ್ನು ನಟಿ ಪ್ರಿಯಾಮಣಿ ಹೇಳಿದ್ದಾರೆ. "ನಾನು ಒಮ್ಮೆ ಸಿನಿಮಾ ಮಾಡಲು ಮುಂದಾದಾಗ ಕಥೆಯನ್ನು ಕೇಳುತ್ತೇನೆ. ಅದರಲ್ಲಿ ಯಾವ ತರಹದ ಕಾಸ್ಟ್ಯೂಮ್ ಹಾಕಿಕೊಳ್ಳಬೇಕು, ಸ್ಕಿನ್ ಶೋ ಇರುತ್ತಾ ಅಂತೆಲ್ಲಾ ನೋಡುತ್ತೇನೆ. ಆದರೆ ಒಂದು ಸಿನಿಮಾ ಮಾಡುವಾಗ ನಿರ್ಮಾಪಕರು ಬಂದು, ಪ್ರಿಯಾಮಣಿ ಈ ರೊಮ್ಯಾಂಟಿಕ್ ದೃಶ್ಯದಲ್ಲಿ ನಿಮ್ಮ ಹೊಕ್ಕಳ ಮೇಲೆ ಒಂದು ಟ್ಯಾಟು ಇರಬೇಕು, ಆ ಟ್ಯಾಟು ಜೊತೆಗೆ ನಿನ್ನ ಹೊಕ್ಕಳನ್ನು ತೋರಿಸಬೇಕು ಎಂದರು."

  ಕೆಲವೊಮ್ಮೆ ಹೇಳಿದಂತೆ ಕೇಳದೇ ವಿಧಿಯಿಲ್ಲ

  ಕೆಲವೊಮ್ಮೆ ಹೇಳಿದಂತೆ ಕೇಳದೇ ವಿಧಿಯಿಲ್ಲ

  "ಕಥೆ ಹೇಳಿದಾಗ ಈ ರೀತಿ ಇರಲಿಲ್ಲ ಅಲ್ವಾ ಎಂದೆ. ಆದರೆ ಇಲ್ಲ ನೀನು ಕಂಡಿತ ಮಾಡಲೇಬೇಕು ಎಂದು ಒತ್ತಾಯಿಸಿದರು. ಆದರೆ ಸಂಭಾವನೆ ಪಡೆದ ಮೇಲೆ ಏನು ಮಾಡಲು ಸಾಧ್ಯವಿಲ್ಲ. ಮಾಡಲೇಬೇಕಾಗುತ್ತದೆ. ನಟಿಯರ ಲೈಫ್ ಬಹಳ ಚೆನ್ನಾಗಿರುತ್ತೆ ಅಂತ ಎಲ್ಲರು ಹೇಳುತ್ತಿರುತ್ತಾರೆ. ಆದರೆ ನಟಿಯರು ಬಹಳ ಸಲ ತಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಬೇಕಾಗುತ್ತದೆ" ಎಂದು ಪ್ರಿಯಾಮಣಿ ಹೇಳಿದ್ದಾರೆ.

  ಪ್ರಿಯಾಮಣಿ ಡೈವೋರ್ಸ್ ಗಾಸಿಪ್

  ಪ್ರಿಯಾಮಣಿ ಡೈವೋರ್ಸ್ ಗಾಸಿಪ್

  2017ರಲ್ಲಿ ನಟಿ ಪ್ರಿಯಾಮಣಿ ಉದ್ಯಮಿ ಮುಸ್ತಾಫಾ ರಾಜಾ ಜೊತೆ ಸಿಂಪಲ್ ಆಗಿ ಮದುವೆ ಆಗಿದ್ದರು. ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಜೋಡಿ ಆಪ್ತರಿಗಾಗಿ ರಿಸೆಪ್ಷನ್ ಪಾರ್ಟಿ ಏರ್ಪಡಿಸಿದ್ದರು. ಸದ್ಯ ಇಬ್ಬರು ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ನಟಿ ಪ್ರಿಯಾಮಣಿ ಡೈವೋರ್ಸ್‌ಗೆ ಮುಂದಾಗಿದ್ದಾರೆ ಅನ್ನುವ ಸುದ್ದಿಯೊಂದು ಭಾರಿ ಸದ್ದು ಮಾಡಿತ್ತು. ಆ ಇಂತಾದೊಂದು ಗಾಳಿಸುದ್ದಿ ತೇಲಿ ಬಿಟ್ಟರೋ ಗೊತ್ತಿಲ್ಲ. ಆದರೆ ಇದು ಸುಳ್ಳು ಎಂದು ನಂತರ ಗೊತ್ತಾಗಿತ್ತು.

  ಪ್ರಿಯಾಮಣಿ ಕನ್ನಡ ಚಿತ್ರಗಳು

  ಪ್ರಿಯಾಮಣಿ ಕನ್ನಡ ಚಿತ್ರಗಳು

  ಬೆಂಗಳೂರಿನಲ್ಲಿ ಪ್ರಿಯಾಮಣಿ ಹುಟ್ಟಿ ಬೆಳೆದರೂ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆ 'ರಾಮ್', 'ಅಣ್ಣಾ ಬಾಂಡ್' ಸಿನಿಮಾಗಳಲ್ಲಿ ನಟಿಸಿದ ಚೆಲುವೆ 'ಏನೋ ಒಂಥರಾ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್‌ ಗಣೇಶ್ ಜೋಡಿಯಾಗಿ ಮಿಂಚಿದ್ರು. 'ಅಂಬರೀಶ' ಚಿತ್ರದಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಪ್ರಿಯಾ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಚಿತ್ರದಲ್ಲಿ ದುನಿಯಾ ವಿಜಿಗೆ ಜೋಡಿಯಾಗಿದ್ದರು. 'ಕಲ್ಪನಾ- 2', 'ಇದೊಳ್ಳೆ ರಾಮಾಯಣ', 'ಧ್ವಜ', 'ನನ್ನಪ್ರಕಾರ' ಇತ್ತೀಚೆಗೆ ಪ್ರಿಯಾಮಣಿ ನಟಿಸಿದ ಕನ್ನಡ ಚಿತ್ರಗಳು.

  English summary
  Actress priyamani recalls her bad experience on shooting set. Know More
  Friday, September 23, 2022, 11:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X