Priyamani: ಥೂ.. ನಿನ್ನ ಕಾಮತೃಷೆಗಾಗಿ ನಾಯಿಯನ್ನು ಬಿಡಲಿಲ್ವಾ? ನಟಿ ಪ್ರಿಯಾಮಣಿ ಪೋಸ್ಟ್ ವೈರಲ್
ಪಾಟ್ನಾದಲ್ಲಿ ನಡೆದ ದುಷ್ಕೃತ್ಯದ ಬಗ್ಗೆ ಬಹುಭಾಷಾ ನಟಿ ಪ್ರಿಯಾಮಣಿ ಪ್ರತಿಕ್ರಿಯಿಸಿದ್ದಾರೆ. ವ್ಯಕ್ತಿಯೊಬ್ಬ ನಾಯಿಯೊಂದರ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಮಾರ್ಚ್ 8ರಂದು ಈ ಘಟನೆ ನಡೆದಿದ್ದು ಈ ಹೀನಕೃತ್ಯದ ವಿಡಿಯೋ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ನಟಿ ಪ್ರಿಯಾಮಣಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ವ್ಯಕ್ತಿಯೊಬ್ಬ ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲಿನ ಫುಲ್ವಾರಿ ಶರೀಫ್‌ನ ಫೈಸಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಕಾಲೋನಿಯಲ್ಲಿ ನಾಯಿಯೊಂದಿಗೆ ಅಸಹಜ ಕೃತ್ಯ ಎಸಗುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಎನ್‌ಜಿಒವೊಂದು ಫುಲ್ವಾರಿ ಪೊಲೀಸ್ ಠಾಣೆಯಲ್ಲಿ ಅರ್ಜಿ ನೀಡಿದೆ. ಈ ವಿಚಾರವನ್ನು ನಟಿ ಪ್ರಿಯಾಮಣಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದಾರೆ.

ಥೂ.. ಕಾಮತೃಷೆ ನಿನ್ನ ಕಾಮತೃಷೆಗೋಸ್ಕರ ನಾಯಿಯನ್ನು ಬಿಡಲ್ವಾ? ಎಂದು ಬಹುಭಾಷಾ ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ನಟಿ ಪ್ರಿಯಾಮಣಿ ಪೋಸ್ಟ್ ವೈರಲ್ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಎಲ್ಲಾ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಕಾಮುಕರಿಂದ ದೇಶದಲ್ಲಿ ಮಹಿಳೆಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ರಕ್ಷಣೆ ಇಲ್ಲದಂತಾಗಿದೆ ಎನ್ನುವ ಅರ್ಥದಲ್ಲಿ ಆಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟಿ ಪ್ರಿಯಾಮಣಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಸೌತ್ ಸಿನಿಮಾಗಳಲ್ಲಿ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಗೆದ್ದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಾಯಕಿ ಆಗಿ ಅಲ್ಲದಿದ್ದರೂ ಪೋಷಕ ನಟಿಯಾಗಿ ಒಳ್ಳೆ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಕಿರುತೆರೆ ಡ್ಯಾನ್ಸ್ ಶೋಗಳಲ್ಲಿ ತೀರ್ಪುಗಾರ್ತಿಯಾಗಿಯೂ ಕೆಲಸ ಮಾಡಿದ್ದಾರೆ. 2017ರಲ್ಲಿ ಉದ್ಯಮಿ ಮುಸ್ತಾಫಾ ರಾಜಾ ಅವರನ್ನು ಪ್ರಿಯಾಮಣಿ ಪ್ರೀತಿಸಿ ಮದುವೆ ಆಗಿದ್ದರು.
ಸದ್ಯ ಕನ್ನಡದ 'ಕೈಮರ', ತೆಲುಗಿನ 'ಕಸ್ಟಡಿ', ಬಾಲಿವುಡ್‌ನ 'ಮೈದಾನ್' ಹಾಗೂ 'ಜವಾನ್' ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ.


Click it and Unblock the Notifications











