ಆ ನಟನಿಗೆ ಮಾತ್ರ ನಾನು ತಾಯಿಯಾಗಿ ನಟಿಸಲ್ಲ, ಆತ ಅಂದ್ರೆ ಅಷ್ಟಿಷ್ಟ; ಪಟ್ಟುಹಿಡಿದ ನಟಿ ರಾಶಿ
ಚಿತ್ರರಂಗದಲ್ಲಿ ಎಲ್ಲವೂ ಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿರುತ್ತದೆ. ನಾಯಕಿಯಾಗಿ ನಟಿಸಿದ ನಟನಿಗೆ ತಾಯಿಯ ಪಾತ್ರದಲ್ಲಿ ನಟಿಸಿದ ನಟಿಯರು ಇದ್ದಾರೆ. ಬಾಲನಟಿಯಾಗಿ ಕಾಣಿಸಿಕೊಂಡವರು ಅದೇ ನಟನಿಗೆ ನಾಯಕಿಯಾಗಿ ನಟಿಸಿರುವ ಉದಾಹರಣೆ ಕೂಡ ಇದೆ. ನಟಿ ರಾಶಿ ಮಾತ್ರ ಆ ನಟನಿಗೆ ನಾನು ತಾಯಿಯಾಗಿ ನಟಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಆಂಧ್ರದ ಪಶ್ಚಿಮ ಗೋದಾವರಿ ಮೂಲಕ ನಟಿ ರಾಶಿ ಒಂದ್ಕಾಲದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಕನ್ನಡದಲ್ಲಿ ಕೂಡ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಶಿವಣ್ಣ, ವಿಷ್ಣುವರ್ಧನ್ ಜೊತೆಗೂ ತೆರೆ ಹಂಚಿಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಇದೆ. Visual talks ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಆಕೆ ಮಾತನಾಡಿದ್ದಾರೆ. ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

ಇದೇ ವೇಳೆ ನನಗೆ ಪ್ರಭಾಸ್ ಅಂದ್ರೆ ಬಹಳ ಇಷ್ಟ. ಆತನಿಗೆ ತಾಯಿಯಾಗಿ ಮಾತ್ರ ನಟಿಸುವುದಿಲ್ಲ. ಅಕ್ಕ, ಅತ್ತಿಗೆ ಪಾತ್ರ ಆದ್ರೂ ಮಾಡ್ತೀನಿ. ತಾಯಿಯಾಗಿ ನಟಿಸೋಕೆ ಸಾಧ್ಯವಿಲ್ಲ. ಅದನ್ನು ಊಹಿಸಿಕೊಳ್ಳಲು ಸಿದ್ಧಳಿಲ್ಲ. 'ಬಾಹುಬಲಿ' ಸಿನಿಮಾ ನೋಡಿದಾಗಲೇ ಆತನ ಬಗ್ಗೆ ಅಂತಹ ಇಮೇಜ್ ಬಂದುಬಿಡ್ತು. ಹಾಗಾಗಿ ಈ ನಿರ್ಧಾರ ಎಂದು ರಾಶಿ ಹೇಳಿರುವುದು ವೈರಲ್ ಆಗುತ್ತಿದೆ.
ನಟಿ ರಾಶಿ ಮಾತನಾಡಿ "ನಾನು ಪೋಷಕ ಪಾತ್ರಗಳಲ್ಲಿ ನಟಿಸೋಕೆ ಸಿದ್ಧ. ಆದರೆ ಪ್ರಭಾಸ್ ತಾಯಿ ಪಾತ್ರದಲ್ಲಿ ಮಾತ್ರ ನಟಿಸಲ್ಲ.. ಹೀರೊಯಿನ್ ಆಗಿ ಅವಕಾಶ ಸಿಗಲ್ಲ.. ಆ ಕನಸು ಹಾಗೆ ಇದ್ದು ಬಿಡ್ಲಿ.. ನಾನು ಈವರೆಗೆ ಪ್ರಭಾಸ್ ಭೇಟಿ ಕೂಡ ಮಾಡಿಲ್ಲ. 'ಮಿರ್ಚಿ' ಹಾಗೂ 'ರಾಧೆಶ್ಯಾಮ್' ಚಿತ್ರಗಳಲ್ಲಿ ನಾನು ಡಬ್ ಕೂಡ ಮಾಡಿದ್ದೀನಿ. ಆದರೆ ಭೇಟಿ ಮಾಡೋಕೆ ಅವಕಾಶ ಸಿಗಲಿಲ್ಲ. ಆದರೆ ಆರಂಭದ ದಿನಗಳಿಂದ ಪ್ರಭಾಸ್ ಅಂದ್ರೆ ಇಷ್ಟ. 'ಛತ್ರಪತಿ', 'ಬಾಹುಬಲಿ' ಸಿನಿಮಾಗಳನ್ನು ನೋಡಿದ್ದೀನಿ" ಎಂದಿದ್ದಾರೆ.
'ಈಶ್ವರ್' ಸಿನಿಮಾ ಟ್ರೈಲರ್ ನೋಡಿದಾಗಲೇ ಪ್ರಭಾಸ್ ಮುಂದೆ ದೊಡ್ಡ ಸ್ಟಾರ್ ಆಗ್ತಾರೆ ಅಂತ ನನ್ನ ಸಹೋದರನ ಬಳಿ ಹೇಳಿದ್ದೆ. ನಮಗೆ ಆ ಸೆನ್ಸ್ ಗೊತ್ತಾಗಿಬಿಡುತ್ತೆ ಎಂದು ರಾಶಿ ತಿಳಿಸಿದ್ದಾರೆ. "ಬಾಹುಬಲಿ ಸಿನಿಮಾ ನೋಡಿದ್ಮೇಲೆ. ಹಂಗೆ ಫಿಕ್ಸ್ ಆಗಿಬಿಟ್ಟೆ. ಒಂದು ವೇಳೆ ಅವಕಾಶ ಸಿಕ್ರೂ, ಅಕ್ಕ, ಅತ್ತಿಗೆ ಪಾತ್ರ ಆದ್ರು ಒಂದು ಹಂತಕ್ಕೆ ಓಕೆ. ಆದರೆ ಅಮ್ಮ ಎಂದು ಕರೆಯುವ ಪಾತ್ರ ಮಾತ್ರ ಬೇಡ. ಅದಕ್ಕೆ ವಯಸ್ಸು ಕೂಡ ಸರಿ ಹೋಗಲ್ಲ. ನಮ್ಮಿಬ್ಬರ ವಯಸ್ಸು ಹೆಚ್ಚುಕಮ್ಮಿ ಸೇಮ್ ಇದೆ" ಎಂದು ರಾಶಿ ವಿವರಿಸಿದ್ದಾರೆ.
9 ವರ್ಷದ ಹುಡುಗಿ ಆಗಿದ್ದಾಗಲೇ ಬಾಲನಟಿಯಾಗಿ ರಾಶಿ ಚಿತ್ರರಂಗ ಪ್ರವೇಶಿಸಿದ್ದರು. 1993ರಲ್ಲಿ 'ಪ್ರಿಯಂ' ಎಂಬ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ. ತೆಲುಗು, ತಮಿಳಿನ ಸ್ಟಾರ್ ನಟರ ಜೊತೆಗೆಲ್ಲಾ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಮಹೇಶ್ ಬಾಬು ನಟನೆಯ 'ನಿಜಂ' ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದು ಎಡವಟ್ಟಾಗಿತ್ತು. ಬಳಿಕ ನಾಯಕಿ ಪಾತ್ರಗಳು ಸಿಗಲಿಲ್ಲ. ಮುಂದೆ ಪೋಷಕ ಪಾತ್ರಗಳಿಗೆ ಬ್ರ್ಯಾಂಡ್ ಆಗಿಬಿಟ್ಟರು.
ಇವತ್ತಿಗೂ 'ನಿಜಂ' ಚಿತ್ರದಲ್ಲಿ ನಟಿಸಿದ ಬಗ್ಗೆ ನಟಿ ರಾಶಿಗೆ ಬೇಸರವಿದೆ. ಕಳೆದ ವರ್ಷ ತೆರೆಕಂಡ 'ಉಸುರೆ' ಎಂಬ ತಮಿಳು ಚಿತ್ರದಲ್ಲಿ ಆಕೆ ಕೊನೆಯದಾಗಿ ಬಣ್ಣ ಹಚ್ಚಿದ್ದರು. ನಾನು ಸಿನಿಮಾ ನಟಿ ಎಂದು ನನ್ನ ಮಗಳಿಗೆ ಗೊತ್ತಾಗದಂತೆ ಬೆಳೆಸಿದ್ದೇನೆ ಎಂದು ರಾಶಿ ಹೇಳಿದ್ದಾರೆ. 2004ರಲ್ಲಿ ಶ್ರಿಮುನಿ ಎಂಬುವವರನ್ನು ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗಳಿದ್ದಾಳೆ.


Click it and Unblock the Notifications











