ರಚಿತಾ ರಾಮ್ ತೆಲುಗು ಚಿತ್ರ ಫ್ಲಾಪ್: ರಚ್ಚು ಭಾರಿ ನಿರಾಸೆ!

ಕನ್ನಡದ ನಟಿ ರಚಿತಾ ರಾಮ್‌ ಸದ್ಯ ತೆಲುಗು ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಚಿತ್ರಗಳನ್ನು ಮಾಡಿದ ರಚಿತಾ ರಾಮ್ ಈಗ ತೆಲುಗು ಚಿತ್ರ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕನ್ನಡದಲ್ಲೂ ಕೂಡ ಅತ್ಯಂತ ಹೆಚ್ಚು ಚಿತ್ರಗಳನ್ನು ಮಾಡುತ್ತಿರುವ ನಟಿ ಅಂದರೆ ಅದು ರಚಿತಾ ರಾಮ್‌ ಮಾತ್ರ. ಸೂಪರ್ ಮಚ್ಚಿ ಚಿತ್ರದ ಮೂಲಕ ರಚಿತಾ ರಾಮ್ ತೆಲುಗು ಚಿತ್ರ ರಂಗಕ್ಕೆ ಪದಾರ್ಪಣೆ ಮಾಡಿದರು. ಆ ಚಿತ್ರದ ರಿಸಲ್ಟ್ ಈಗ ಹೊರ ಬಿದ್ದಿದೆ.

ರಚಿತಾ ರಾಮ್ ತಾವು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದರು. ಕನ್ನಡದ ಜೊತೆಗೆ ಪರ ಭಾಷೆ ಚಿತ್ರದಲ್ಲಿ ಬೇಡಿಕೆ ಇರುವ ಬಗ್ಗೆ ಈ ಹಿಂದೆ ಖುಷಿ ಹಂಚಿಕೊಂಡಿದ್ದರು. ರಚ್ಚು ಅಭಿಮಾನಿಗಳಲ್ಲೂ ಕೂಡ ಈ ವಿಚಾರ ಸಂತಸ ತಂದಿತ್ತು.

ಕನ್ನಡದ ಬಹುತೇಕ ನಟಿಯರು ತೆಲುಗಿನಲ್ಲಿ ಸಕ್ಸಸ್ ಕಂಡಿದ್ದಾರೆ. ಇನ್ನು ರಚಿತಾ ರಾಮ್‌ ಅವರು ಕನ್ನಡದಲ್ಲಿ ಲಕ್ಕಿ ಚಾರ್ಮ್ ಎಂದೇ ಹೆಸರುವಾಸಿ. ಹಾಗಾಗಿ ಸಹಜವಾಗಿಯೇ ಅವರ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಈಗ ಎಲ್ಲಾ ನಿರೀಕ್ಷೆಗಳನ್ನು ಕೂಡ ಈ ಚಿತ್ರ ಮಣ್ಣು ಪಾಲು ಮಾಡಿದೆ.

'ಸೂಪರ್ ಮಚ್ಚಿ' ಬಾಕ್ಸಾಫೀಸ್ ಕಲೆಕ್ಷನ್ ಸೊನ್ನೆ!

'ಸೂಪರ್ ಮಚ್ಚಿ' ಬಾಕ್ಸಾಫೀಸ್ ಕಲೆಕ್ಷನ್ ಸೊನ್ನೆ!

ಸೂಪರ್ ಮಚ್ಚಿ ಸಿನಿಮಾ ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್‌ ಅವರು ನಾಯಕ ನಟನಾಗಿ, ಕನ್ನಡದ ನಟಿ ರಚಿತಾ ರಾಮ್‌ ಅವರು ನಾಯಕ ನಟಿ ಆಗಿ ಅಭಿನಯಿಸಿರುವ ಸಿನಿಮಾ. ಈ ಚಿತ್ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಗೆ ಬಂದಿದೆ. ಜನವರಿ 14ರಂದು ರಿಲೀಸ್‌ ಆಗಿದೆ. ಆದರೆ ದುರಂತ ಎಂದರೆ ಚಿತ್ರ ಯಾವುದೇ ಕಲೆಕ್ಷನ್ ಮಾಡಿಲ್ಲ ಅಂತೆ. ಜೀರೋ ಕಲೆಕ್ಷನ್ ನೊಂದಿದೆ ಮೊದಲ ದಿನ ದೂಡಿದೆಯಂತೆ ಈ ಚಿತ್ರ. ಇದು ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ.

ಚಿತ್ರ ತಂಡದ ಬೇಜವಾಬ್ದಾರಿ ತನಕ್ಕೆ ಚಿತ್ರ ಬಲಿ!

ಚಿತ್ರ ತಂಡದ ಬೇಜವಾಬ್ದಾರಿ ತನಕ್ಕೆ ಚಿತ್ರ ಬಲಿ!

ಸೂಪರ್ ಮಚ್ಚಿ ಸಿನಿಮಾ ಸೆಟ್ಟೇರಿದಾಗ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇದೊಂದು ಸೂಪರ್‌ ಹಿಟ್ ಪ್ರೇಮ್ ಕಹಾನಿ ಆಗುತ್ತದೆ ಎನ್ನುವ ಸೂಚನೆಯನ್ನು ನೀಡಿತ್ತು. ಜೊತೆಗೆ ಚಿತ್ರದ ಹಾಡುಗಳು ಕೂಡ ಪ್ರೇಕ್ಷರಿಗೆ ಇಷ್ಟ ಆಗಿದ್ದವು. ನಟ ಕಲ್ಯಾಣ್ ದೇವ್ ಮತ್ತು ರಚಿತಾ ರಾಮ್‌ ಅವರ ಲುಕ್‌ ಕೂಡ ಸಿನಿ ಪ್ರಿಯರಿಗೆ ಇಷ್ಟ ಆಗಿತ್ತು. ಆದರೆ ಸಿನಿಮಾ ರಿಲೀಸ್‌ ವೇಳೆ ಚಿತ್ರ ತಂಡ ಬೇಜಾವಾಬ್ದಾರಿ ತನದಿಂದ ನಡೆದುಕೊಂಡಿದೆ. ಚಿತ್ರಕ್ಕಾಗಿ ಯಾವುದೇ ರೀತಿಯ ಪ್ರಚಾರ ಮಾಡಿಲ್ಲ. ಅಷ್ಟೇ ಯಾಕೆ ಸಿನಿಮಾ ಇಂಥಹ ದಿನ ರಿಲೀಸ್ ಎನ್ನುವುದನ್ನು ಕೂಡ ಹೇಳಿಕೊಂಡಿಲ್ಲ. ಕೇವಲ ಟ್ರೇಲರ್‌ ಅಂತ್ಯದಲ್ಲಿ ಮಾತ್ರ ರಿಲೀಸ್ ದಿನಾಂಕವನ್ನು ನಿಗದಿ ಮಾಡಲಾಗಿತ್ತು.

ರಚಿತಾ ರಾಮ್‌ ನಿರೀಕ್ಷೆ ಹುಸಿ ಮಾಡಿದ ಚಿತ್ರ ತಂಡ!

ರಚಿತಾ ರಾಮ್‌ ನಿರೀಕ್ಷೆ ಹುಸಿ ಮಾಡಿದ ಚಿತ್ರ ತಂಡ!

ಈ ಚಿತ್ರದ ಮೇಲೆ ನಟಿ ರಚಿತಾ ರಾಮ್‌ ಅವರು ಸಾಕಷ್ಟು ನಿರೀಕ್ಷೆಯನ್ನು ಇಟ್ಟು ಕೊಂಡಿದ್ದರು. ಮೊದಲ ತೆಲುಗು ಚಿತ್ರ ಆದ ಕಾರಣ ವಿಶೇಷ ಆಸಕ್ತಿ ವಹಿಸಿದ್ದರು. ಇನ್ನು ಮಾಧ್ಯಮಗಳಲ್ಲಿ ತಮ್ಮ ಪಾತ್ರದ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದರು. ಹಾಗಾಗಿ ರಚ್ಚು ಅಭಿಮಾನಿಗಳಲ್ಲೂ ಕೂಡ ಈ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಈಗ ಅದೆಲ್ಲದಕ್ಕೂ ಚಿತ್ರ ತಂಡ ತಣ್ಣೀರು ಎರಚಿದೆ. ಜೀರೋ ಕಲೆಕ್ಷನ್‌ನೊಂದಿಗೆ ಓಪನಿಂಗ್ ಪಡೆದ ಹಣೆ ಪಟ್ಟೆ ಚಿತ್ರಕ್ಕೆ ಅಂಟಿದೆ.

ಸಂಕ್ರಾಂತಿ ಪ್ರಯುಕ್ತ ರಿಲೀಸ್‌ ಆದ 'ಸೂಪರ್ ಮಚ್ಚಿ'!

ಸಂಕ್ರಾಂತಿ ಪ್ರಯುಕ್ತ ರಿಲೀಸ್‌ ಆದ 'ಸೂಪರ್ ಮಚ್ಚಿ'!

ನಟಿ ರಚಿತಾ ರಾಮ್ ಮೊದಲ ತೆಲುಗು ಸಿನಿಮಾ 'ಸೂಪರ್ ಮಚ್ಚಿ'. ಈ ಚಿತ್ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್‌ ಆಗಿದೆ. ಅಚ್ಚರಿ ಅಂದರೆ ಈ ಚಿತ್ರ ರಿಲೀಸ್‌ ಆಗಿದ್ದು ಯಾರಿಗೂ ಗೊತ್ತೆ ಇಲ್ಲ. ಯಾಕೆಂದರೆ ಚಿತ್ರದ ರಿಲೀಸ್‌ ಬಗ್ಗೆ ಯಾವುದೇ ಸುಳಿವು ನೀಡದೆ ಚಿತ್ರ ರಿಲೀಸ್‌ ಆಗಿದೆ. ಇದು ನಾಯಕ ಮೆಗಾ ಸ್ಟಾರ್‌ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರ 2ನೇ ಚಿತ್ರ. ಆದರೂ ಈ ಚಿತ್ರ ಯಾವುದೇ ಸುಳಿವು ನೀಡದೇ ಚಿತ್ರ ಮಂದಿರಕ್ಕೆ ಬಂದು ಬಿಟ್ಟಿದೆ. ಇನ್ನು ಕಿಕೆಟ್ ಬುಕ್ಕಿಂಗ್‌ಗೂ ಸರಿಯಾಗಿ ಅವಕಾಶ ಮಾಡಿ ಕೊಟ್ಟಿಲ್ಲ. ಚಿತ್ರ ಯಾವ ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ ಎನ್ನುವುದನ್ನೂ ಪ್ರಕಟ ಮಾಡಿಲ್ಲ ಚಿತ್ರ ತಂಡ. ಇದು ವೇ ಚಿತ್ರದ ಸೋಲಿಗೆ ಕಾರಣ ಆಗಿದೆ. ಜೀರೋ ಕಲೆಕ್ಷನ್ ಮಾಡಿದ ಚಿತ್ರ ಎಂದು ಎಲ್ಲೆಡೆ ಸುದ್ದಿ ಆಗಿದೆ.

More from Filmibeat

English summary
Actress Rachita Ram 1st Telugu Movie Super Machi Zero Collection At Box Office,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X