ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ನಟಿ ರಕುಲ್ ಪ್ರೀತ್ ಸಿಂಗ್
ಕೊರೊನಾ ವೈರಸ್‌ಗೆ ತುತ್ತಾಗಿದ್ದ ನಟಿ ರಕುಲ್ ಪ್ರೀತ್ ಸಿಂಗ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಖುದ್ದು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ನಟಿ ''ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಾನು ಈಗ ಆರೋಗ್ಯವಾಗಿದ್ದೇನೆ'' ಎಂದಿದ್ದಾರೆ.
''ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆಯ ಆರೋಗ್ಯ ಮತ್ತು ಸಕಾರಾತ್ಮಕವಾಗಿ 2021ರನ್ನು ಪ್ರಾರಂಭಿಸಲು ಕಾತುರದಿಂದ ಕಾಯುತ್ತಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ಕೊನೆಯಲ್ಲಿ ವಿಶೇಷ ಸೂಚನೆ ಎಂದು ತಿಳಿಸಿರುವ ನಟಿ ''ದಯವಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಿ, ಮಾಸ್ಕ್ ಧರಿಸಿ, ಎಲ್ಲ ರೀತಿಯ ಮುಂಜಾಗ್ರತೆ ಕ್ರಮವನ್ನು ಜರುಗಿಸಿ'' ಎಂದು ಮನವಿ ಮಾಡಿಕೊಂಡಿದ್ದಾರೆ.

ಅಂದ್ಹಾಗೆ, ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ 'ಮೇ ಡೇ' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ರಕುಲ್‌ಗೆ ಕೊರೊನಾ ಸೋಂಕು ತಗುಲಿತ್ತು.
ಆ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದ ನಟಿ ''ನಾನು ಕೊರೊನಾ ವೈರಸ್ ಪರೀಕ್ಷೆ ಮಾಡಿದ ವೇಳೆ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ ಎಂದು ತಿಳಿಸಲು ಬಯಸುತ್ತೇನೆ. ಸದ್ಯ ಕಾರಂಟೈನ್‌ಗೆ ಒಳಗೊಂಡಿದ್ದೇನೆ. ನಾನು ಚೆನ್ನಾಗಿಯೇ ಇದ್ದೇನೆ ಮತ್ತು ಚೆನ್ನಾಗಿ ವಿಶ್ರಾಂತಿ ಪಡೆಯುತ್ತೇನೆ. ಆದಷ್ಟೂ ಬೇಗ ಶೂಟ್‌ಗೆ ಮರಳಬಹುದು. ನನ್ನನ್ನು ಭೇಟಿಯಾದ ಎಲ್ಲರಿಗೂ ವಿನಂತಿಸಿರುವುದೇನಂದರೆ ನೀವೂ ಪರೀಕ್ಷೆಗೆ ಒಳಗಾಗಿ ಮತ್ತು ದಯವಿಟ್ಟು ಸುರಕ್ಷಿತವಾಗಿರಿ'' ಎಂದು ಬರೆದುಕೊಂಡಿದ್ದರು.
ಮೇ ಡೇ ಸಿನಿಮಾದ ಜೊತೆಗೆ ಜಾನ್ ಅಬ್ರಾಹಂ ಹಾಗೂ ಜಾಕ್‌ಲೀನ್ ಫರ್ನಾಂಡೀಸ್ ನಟನೆಯ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಕಪೂರ್ ಜೊತೆಯೂ ಒಂದು ಸಿನಿಮಾ ಮಾಡ್ತಿದ್ದಾರೆ.


Click it and Unblock the Notifications











