For Quick Alerts
  ALLOW NOTIFICATIONS  
  For Daily Alerts

  ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಕುಕ್ಕುತ್ತಿದೆ ರಕುಲ್ ಪ್ರೀತ್ ಬಿಕಿನಿ ಫೋಟೋ

  |

  ಡ್ರಗ್ಸ್ ವಿವಾದದಲ್ಲಿ ವಿಚಾರಣೆ ಎದುರಿಸಿದ ನಟಿ ರಕುಲ್ ಪ್ರೀತ್ ಸಿಂಗ್ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಹಾಲಿಡೇ ಎಂಜಾಯ್ ಮಾಡಲು ಮಾಲ್ಡೀವ್ಸ್‌ಗೆ ಹೋಗಿರುವ ನಟಿ ಇನ್ಸ್ಟಾದಲ್ಲಿ ಬಿಕಿನಿ ಫೋಟೋವೊಂದನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ.

  ಹಸಿರು ಬಣ್ಣದ ಬಿಕಿನಿ ತೊಟ್ಟಿರುವ ನಟಿ ಸಮುದ್ರದ ಕಿನಾರೆಯಲ್ಲಿ ನಿಂತು ಫೋಸ್ ನೀಡಿದ್ದಾರೆ. ಈ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿ ''ಸಮುದ್ರದ ವಾಸನೆ ಆನಂದಿಸಿ, ಆಕಾಶವನ್ನು ಅನುಭವಿಸಿ, ನಿಮ್ಮ ಆತ್ಮವನ್ನು ಹಾರಲು ಬಿಡಿ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.

  ಹಲವು ದೊಡ್ಡ ಚಿತ್ರಗಳಲ್ಲಿ ನಟಿಸುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಲಾಕ್‌ಡೌನ್ ಬಳಿಕ ಮತ್ತೆ ಶೂಟಿಂಗ್‌ಗೆ ಮರಳಲು ಸಜ್ಜಾಗಿದ್ದಾರೆ. ಕೆಲಸ ಆರಂಭಿಸುವುದಕ್ಕೂ ಮುಂಚೆ ಅಪ್ಪ-ಅಮ್ಮ ಹಾಗೂ ಸಹೋದರನ ಜೊತೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.

  ಇತ್ತೀಚಿಗಷ್ಟೆ ಮದುವೆಯಾದ ನಟಿ ಕಾಜಲ್ ಅಗರ್‌ವಾಲ್ ಸಹ ತಮ್ಮ ಪತಿ ಜೊತೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದರು. ಆ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  ಕಮಲ್ ಹಾಸನ್ ನಟನೆಯ ಇಂಡಿಯನ್ 2 ಚಿತ್ರದಲ್ಲಿ ರಕುಲ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ, ಕಾಜಲ್ ಅಗರ್‌ವಾಲ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾನ್‌ ಅಬ್ರಾಹಂ, ಅರ್ಜುನ್ ಕಪೂರ್, ಅದಿತಿ ರಾವ್ ಹೈದರಿ ನಟಿಸುತ್ತಿರುವ ಅಟ್ಯಾಕ್ ಚಿತ್ರದಲ್ಲೂ ರಕುಲ್ ನಟಿಸಲಿದ್ದಾರೆ.

  ಇದು ನನಗೆ ತುಂಬಾ ಹತ್ತಿರವಾದ ಸಿನಿಮಾ ಎಂದ ನಟಿ ಊರ್ವಶಿ ರೈ | Urvashi Rai | Filmibeat Kannada

  ಇನ್ನು ಅಜಯ್ ದೇವಗನ್, ಅಮಿತಾಭ್ ಬಚ್ಚನ್ ತೆರೆಹಂಚಿಕೊಳ್ಳುತ್ತಿರುವ 'ಮೇಡೇ' ಚಿತ್ರದಲ್ಲಿ ರಕುಲ್ ನಟಿಸುತ್ತಿದ್ದಾರೆ ಎಂದು ಅಧಿಕೃತವಾಗಿದೆ. ಇದರ ಜೊತೆಗೆ ತೆಲುಗಿನಲ್ಲಿ ಎರಡು ಸಿನಿಮಾ ಹಾಗೂ ತಮಿಳಿನಲ್ಲಿ ಎರಡು ಹೊಸ ಸಿನಿಮಾ ಮಾಡುತ್ತಿದ್ದಾರೆ.

  English summary
  Indian actress Rakul preet singh shared green bikini photos from maldives. its went to viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X