For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟಿ ರಮ್ಯಶ್ರೀ

  |

  ನಟ ಪವನ್ ಕಲ್ಯಾಣ್‌ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು. ಮೂರು ದಶಕಗಳಿಂದಲೂ ತೆಲುಗು ಸಿನಿ ಉದ್ಯಮದಲ್ಲಿರುವ ಪವನ್ ಕಲ್ಯಾಣ್ ಬಹಳ ಗೌರವಾನ್ವಿತ ನಟರು. ಆದರೆ ಅವರಿಗೆ ವಿರೋಧಿಗಳೂ ಸಹ ಇದ್ದಾರೆ.

  ಈಗಾಗಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಟಿ ಶ್ರೀರೆಡ್ಡಿ ಅವರುಗಳು ಪವನ್ ಕಲ್ಯಾಣ್ ವಿರುದ್ಧ ಚಿತ್ರ ವಿಚಿತ್ರ ಹೇಳಿಕೆಗಳು ಮಾನಹಾನಿ ಯತ್ನಗಳು ಮಾಡುತ್ತಲೇ ಬಂದಿದ್ದಾರೆ. ರಾಜಕೀಯದಲ್ಲಿ ಸಹ ಸಕ್ರಿಯವಾಗಿರುವ ಪವನ್ ಕಲ್ಯಾಣ್ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ.

  ಇದೀಗ ನಟಿ ರಮ್ಯಶ್ರೀ ಪವನ್ ಕಲ್ಯಾಣ್ ಬಗ್ಗೆ ಅನವಶ್ಯಕ ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದಾರೆ. ಗ್ಲಾಮರಸ್ ತಾರೆ ಎಂದೇ ತೆಲುಗು ಸಿನಿಮಾ ರಂಗದಲ್ಲಿ ಖ್ಯಾತವಾಗಿರುವ ರಮ್ಯಾಶ್ರೀ ಚಿತ್ರರಂಗದಿಂದ ದೂರವಾಗಿದ್ದರು. ಆದರೆ ಈಗ ಪವನ್ ಕಲ್ಯಾಣ್ ಕುರಿತ ಹೇಳಿಕೆ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.

  ಚಿತ್ರರಂಗದಿಂದ ದೂರವಾಗಿರುವ ರಮ್ಯಶ್ರೀ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡಿದ್ದು, ಆಂಧ್ರ ಪ್ರದೇಶದಲ್ಲಿ ಅಧಿಕಾರಸ್ಥ ಪಾರ್ಟಿ ವೈಎಸ್‌ಆರ್ ಕಾಂಗ್ರೆಸ್‌ನ ಸದಸ್ಯೆ. ಪಕ್ಷದ ಪರವಾಗಿ ಚುನಾವಣೆ ಪ್ರಚಾರಗಳಲ್ಲಿ ಪಾಲ್ಗೊಂಡಿದ್ದ ನಟಿ ಇದೀಗ ಪಕ್ಷದ ವಕ್ತಾರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ನಟಿ ರಮ್ಯಶ್ರೀ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪವನ್ ಕಲ್ಯಾಣ್ ಬಗ್ಗೆ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.

  ಪವನ್‌ನಿಂದಾಗಿ ತೆಲುಗುದೇಸಂ ಪಕ್ಷ ಸೋತಿತು: ರಮ್ಯಶ್ರೀ

  ಪವನ್‌ನಿಂದಾಗಿ ತೆಲುಗುದೇಸಂ ಪಕ್ಷ ಸೋತಿತು: ರಮ್ಯಶ್ರೀ

  ''ಪವನ್ ಕಲ್ಯಾಣ್‌ ರಾಜಕೀಯದಲ್ಲಿ ಒಬ್ಬಂಟಿಯಾಗಿ ಹೋರಾಟ ಮಾಡುತ್ತಿದ್ದಾರೆ'' ಎಂಬ ಸಂದರ್ಶಕನ ಮಾತಿಗೆ ವಿರೋಧ ವ್ಯಕ್ತಪಡಿಸಿರುವ ರಮ್ಯಶ್ರೀ, ''ಪವನ್ ಕಲ್ಯಾಣ್ ಮೊದಲು ತೆಲುಗು ದೇಶಂ ಪಕ್ಷಕ್ಕೆ ಬೆಂಬಲ ನೀಡಿದರು. ಅದರಿಂದಾಗಿ ತೆಲುಗು ದೇಶಂ ಪಕ್ಷ ಹೀನಾಯವಾಗಿ ಸೋತಿತು. ಸ್ವತಃ ತೆಲುಗು ದೇಶಂ ಪಕ್ಷದ ಮುಖಂಡರೇ ಪವನ್ ಕಲ್ಯಾಣ್ ಅನ್ನು ಬೈದುಕೊಳ್ಳಲು ಆರಂಭಿಸಿದರು. ಆಗ ಸ್ವಂತ ಪಕ್ಷ ಕಟ್ಟಿ ರಾಜಕೀಯ ಮೇಲಾಟ ಆರಂಭಿಸಿದ್ದಾರೆ ಪವನ್ ಕಲ್ಯಾಣ್'' ಎಂದಿದ್ದಾರೆ ನಟಿ ರಮ್ಯಶ್ರೀ.

  ಪವನ್‌ ಕಲ್ಯಾಣ್‌ಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ: ರಮ್ಯಶ್ರೀ

  ಪವನ್‌ ಕಲ್ಯಾಣ್‌ಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ: ರಮ್ಯಶ್ರೀ

  ''ಪವನ್‌ ಕಲ್ಯಾಣ್‌ಗೆ ರಾಜಕೀಯದಲ್ಲಿ ಭವಿಷ್ಯ ಇಲ್ಲ ಎಂದಿರುವ ರಮ್ಯಶ್ರೀ ಪವನ್ ಕಲ್ಯಾಣ್‌ ಶಿಸ್ತಿನ ಮನುಷ್ಯನಲ್ಲ. ಅವರಿಗೆ ಮೂಡ್ ಇದ್ದ ಹಾಗೆ ಅವರು ವರ್ತಿಸುತ್ತಾರೆ. ಒಮ್ಮೆ ಸರ್ಕಾರವನ್ನು ವಿಪರೀತ ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರತಿಭಟನೆ ಮಾಡುತ್ತೇನೆ ಎನ್ನುತ್ತಾರೆ ಆ ನಂತರ ಬ್ರೇಕ್ ತೆಗೆದುಕೊಳ್ಳುತ್ತಾರೆ. ಅವರೊಬ್ಬ ಸೀಸನಲ್ ರಾಜಕಾರಣಿ. ಅವರು ಹೆಚ್ಚು ಕಾಲ ರಾಜಕೀಯದಲ್ಲಿ ಇರುವುದಿಲ್ಲ'' ಎಂದು ಭವಿಷ್ಯ ನುಡಿದಿದ್ದಾರೆ ರಮ್ಯಶ್ರೀ.

  ಪವನ್ ಕಲ್ಯಾಣ್ ಪ್ರಭಾವ ಪೂರ್ಣವಾಗಿ ತಗ್ಗಲಿದೆ

  ಪವನ್ ಕಲ್ಯಾಣ್ ಪ್ರಭಾವ ಪೂರ್ಣವಾಗಿ ತಗ್ಗಲಿದೆ

  ಮುಂದಿನ ಚುನಾವಣೆ ವೇಳೆಗೆ ಪವನ್ ಕಲ್ಯಾಣ್ ಪ್ರಭಾವ ಪೂರ್ಣವಾಗಿ ಇಲ್ಲವಾಗಿರುತ್ತದೆ. ಈ ಬಾರಿಯಂತೆ ಮುಂದಿನ ಚುನಾವಣೆಯಲ್ಲಿ ಸಹ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವೇ ಬಹುಮತ ಸಾಧಿಸಲಿದ್ದು ಜಗನ್ ಮೋಹನ್ ರೆಡ್ಡಿ ಭಾರಿ ಅಂತರದ ಜಯ ಸಾಧಿಸಲಿದ್ದಾರೆ ಎಂದಿದ್ದಾರೆ. ಪಕ್ಷಕ್ಕೆ ದುಡಿದ ತಮಗೆ ಪಕ್ಷವು ಯಾವುದಾದರೂ ಒಂದು ಜವಾಬ್ದಾರಿಯನ್ನು ಖಂಡಿತ ನೀಡಲಿದೆ ಎಂದಿರುವ ರಮ್ಯಶ್ರೀ, ನನಗೆ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಆಸಕ್ತಿ ಹಾಗಾಗಿ ಆ ಇಲಾಖೆಯ ಮಂಡಳಿಯ ಅಧ್ಯಕ್ಷ ಸ್ಥಾನ ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ'' ಎಂದಿದ್ದಾರೆ.

  ಪವನ್ ಕಲ್ಯಾಣ್ ರಾಜಕೀಯ ಪಯಣ

  ಪವನ್ ಕಲ್ಯಾಣ್ ರಾಜಕೀಯ ಪಯಣ

  ನಟ ಪವನ್ ಕಲ್ಯಾಣ್‌ರ ಅಣ್ಣ ನಟ ಚಿರಂಜೀವಿ ಸ್ಥಾಪಿಸಿದ್ದ ಪ್ರಜಾರಾಜ್ಯಂ ಪಕ್ಷದಲ್ಲಿ ಯುವರಾಜ್ಯಂ ವಿಭಾಗದ ಅಧ್ಯಕ್ಷನಾಗಿ ಪವನ್ ಕಲ್ಯಾಣ್ ರಾಜಕೀಯ ಆರಂಭಿಸಿದರು. ಚುನಾವಣೆ ಪ್ರಚಾರದಲ್ಲಿ ಬಿರುಸಿನಿಂದ ಓಡಾಡಿದ ಪವನ್ ಕಲ್ಯಾಣ್ ನಂತರ ಚಿರಂಜೀವಿ ತಮ್ಮ ಪಕ್ಷವನ್ನು ಕಾಂಗ್ರೆಸ್‌ ಜೊತೆಗೆ ವಿಲೀನ ಮಾಡಿದ ಬಳಿಕ ರಾಜಕೀಯದಿಂದ ದೂರಾದರು. ನಂತರ 2014ರಲ್ಲಿ ತಮ್ಮದೇ ಆದ 'ಜನಸೇನಾ' ಪಕ್ಷವನ್ನು ಪವನ್ ಕಲ್ಯಾಣ್ ಸ್ಥಾಪಿಸಿದರು. ಹಲವು ಪ್ರತಿಭಟನೆಗಳನ್ನು ಆಡಳಿತ ಸರ್ಕಾರದ ವಿರುದ್ಧ ಮಾಡಿದರು. 2019ರಲ್ಲಿ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ 140 ಕ್ಷೇತ್ರಗಳಿಂದ ಪವನ್ ಕಲ್ಯಾಣ್ ಪಕ್ಷ ಅಭ್ಯರ್ಥಿಗಳು ಸ್ಪರ್ಧಿಸಿದರು ಸ್ವತಃ ಪವನ್ ಕಲ್ಯಾಣ್ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರು ಆದರೆ ಸೋತರು. ಪವನ್ ಕಲ್ಯಾಣ್ ಪಕ್ಷದ ಒಬ್ಬ ಅಭ್ಯರ್ಥಿ ಮಾತ್ರವೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ.

  English summary
  Actress and politician Ramyasree talks about future of Pawan Kalyan's political career. She said Pawan Kalyan craze will soon end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X