ರಂಜಿತಾ ಮಾತ್ರವಲ್ಲ, ಆಕೆಯ ಅಕ್ಕ ನಿರ್ಮಲಾ ಕೂಡ ನಿತ್ಯಾನಂದನ ಮಾಯೆಯಲ್ಲಿ ಬಿದ್ದಿದ್ಹೇಗೆ?

ದಶಕದ ಹಿಂದೆ ನಿತ್ಯಾನಂದ ರಾಸಲೀಲೆ ಪ್ರಕರಣ ಭಾರೀ ಸದ್ದು ಮಾಡಿತ್ತು. ನಿತ್ಯಾನಂದ ಹಾಗೂ ನಟಿ ರಂಜಿತಾ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ಸಿಡಿಯೊಂದು ಕೋಲಾಹಲ ಸೃಷ್ಟಿಸಿತ್ತು. ಅದರ ಸತ್ಯಾಸತ್ಯಾತೆ ಬಗ್ಗೆ ಭಾರೀ ತನಿಖೆ ಕೂಡ ನಡೀತು. ದೂರು ಪ್ರತಿದೂರು ದಾಖಲಾಗಿ ಬಹಳ ದಿನಗಳ ಕಾಲ ತನಿಖೆ ನಡೆಯಿತು. ನಿತ್ಯಾನಂದ ಸ್ವಾಮಿ ಜೈಲುವಾಸ ಕೂಡ ಅನುಭವಿಸಬೇಕಾಯಿತು.

ಆಶ್ರಮ ಕಟ್ಟಿಕೊಂಡು ನಿತ್ಯಾನಂದ ಸ್ವಾಮಿ ದೇಶ ವಿದೇಶದ ಭಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ. ಇದರಲ್ಲಿ ಸಿನಿಮಾ ತಾರೆಯರು ಕೂಡ ಇದ್ದಾರೆ. ತಮಿಳಿನ ಖ್ಯಾತ ನಟಿ ರಂಜಿತಾ ಕೂಡ ಈತನ ಮಾಯೆಯಲ್ಲಿ ಬಿದ್ದಿದ್ದು ಗೊತ್ತೇಯಿದೆ. ಇವತ್ತಿಗೂ ಆಕೆ ನಿತ್ಯಾನಂದನ ಆಶ್ರಮದಲ್ಲೇ ಇರುವುದಾಗಿ ತಂದೆ ಹಿರಿಯ ನಟ ಅಶೋಕ್ ಕುಮಾರ್ ಹೇಳಿದ್ದಾರೆ. ಇಬ್ಬರು ಮಕ್ಕಳಿಂದಲೇ ನಾನು ಜೀವನದಲ್ಲಿ ಸಾಕಷ್ಟು ನೋವು ಅನುಭವಿಸುವಂತಾಯಿತು ಎಂದಿದ್ದಾರೆ.

Actress Ranjithas sister Nirmala also joined Nithyananda ashram as a devotee

ರಂಜಿತಾ ಹೇಗೆ ನಿತ್ಯಾನಂದನಗ ಆಶ್ರಮಕ್ಕೆ ಹತ್ತಿರವಾದಳು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬರೀ ನಿತ್ಯಾನಂದ ಮಾತ್ರವಲ್ಲ ಆಕೆಯ ಸಹೋದರಿ ನಿರ್ಮಲಾ ಕೂಡ ಗಂಡನಿಗೆ ಡಿವೋರ್ಸ್ ಕೊಟ್ಟು ಆತನ ಆಶ್ರಮದಲ್ಲಿ ಇದ್ದಾಳೆ ಎಂದು ಅಶೋಕ್ ಕುಮಾರ್ ತಿಳಿಸಿದ್ದಾರೆ. ತೆಲುಗಿನ ಸುಮನ್ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ರಂಜಿತಾ ಲವ್ ಮ್ಯಾರೇಜ್

"ದೊಡ್ಡ ಮಗಳು ನಿರ್ಮಲಾಗೆ ಸೋದರಳಿಯನ ಜೊತೆ ಮದುವೆ ಮಾಡಿ ಕೊಟ್ಟಿದ್ದೆ. ಇಬ್ಬರು ಅಮೆರಿಕಾದಲ್ಲಿ ಸೆಟ್ಲ್ ಆಗಿದ್ದರು. ರಂಜಿತಾ ಲವ್ ಮ್ಯಾರೇಜ್ ಆಗಿದ್ದಳು. ಆರ್ಮಿ ಆಫೀಸರ್ ಜೊತೆ ರಾಜಸ್ಥಾನದಲ್ಲಿ ವಾಸಿಸುತ್ತಿದ್ದರು. ನಂತರ ಗಂಡನಿಗೆ ಡಿವೋರ್ಸ್ ಕೊಟ್ಟು ಸಿನಿಮಾಗಳಲ್ಲಿ ಮತ್ತೆ ನಟಿಸಲು ಆರಂಭಿಸಿದ್ದಳು. ಅಲ್ಲಿಯವರೆಗೂ ರಂಜಿತಾಗೆ ದೇವರ ಮೇಲೆ ಭಕ್ತಿ ಇರಲಿಲ್ಲ."

Actress Ranjithas sister Nirmala also joined Nithyananda ashram as a devotee

ಅಕ್ಕನ ಜೊತೆ ಆಶ್ರಮಕ್ಕೆ ರಂಜಿತಾ

"ರಂಜಿತಾ ಗರ್ಭಿಣಿಯಾಗಿದ್ದಾಗ ಸರಿಯಾದ ಚಿಕಿತ್ಸೆ ಸಿಗದೇ ಗರ್ಭಕೋಶವನ್ನೆ ತೆಗೆದು ಹಾಕಿದರು. ಅದಕ್ಕೂ ಮುನ್ನ ದೇವಸ್ಥಾನಕ್ಕೂ ಹೋಗದ ರಂಜಿತಾಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿತ್ತು. ಇದೇ ಸಮಯದಲ್ಲಿ ಅಮೆರಿಕಾದಲ್ಲಿದ್ದ ಸಹೋದರಿಯನ್ನು ನೋಡಲು ರಂಜಿತಾ ಹೋಗುತ್ತಿದ್ದಳು. ಅದಾಗಲೇ ನಿರ್ಮಲಾ ಅಮೆರಿಕಾದಲ್ಲಿ ನಿತ್ಯಾನಂದನ ಪ್ರವಚನ ಕೇಳಲು ಹೋಗುತ್ತಿದ್ದಳು. ಆಕೆಯ ಜೊತೆ ರಂಜಿತಾ ಕೂಡ ಹೋಗಲು ಆರಂಭಿಸಿದ್ದಳು"

ನಿರ್ಮಲಾ ಕೂಡ ಆಶ್ರಮ ಸೇರಿದಳು

"ಇದೇ ರೀತಿ ನಿತ್ಯಾನಂದನ ಆಶ್ರಮಕ್ಕೆ ಹೋಗುತ್ತಿದ್ದಾಗಲೇ ರಂಜಿತಾ ಕೂಡ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಳು. ಈ ಡಿವೋರ್ಸ್‌ಗೆ ನಿತ್ಯಾನಂದ ಕೂಡ ಒಂದು ಅರ್ಥದಲ್ಲಿ ಕಾರಣ ಎಂದು ಹೇಳಬಹುದು. ಖ್ಯಾತ ನಟಿ, ಗುಡ್‌ವಿಲ್ ಎನ್ನುವ ಕಾರಣಕ್ಕೆ ಆಕೆಯನ್ನು ನಿತ್ಯಾನಂದ ಕೈವಶ ಮಾಡಿಕೊಂಡಿರುವ ಸಾಧ್ಯತೆ ಕೂಡ ಇದೆ. ಮತ್ತೊಂದು ಕಡೆ ನನ್ನ ದೊಡ್ಡ ಮಗಳು ನಿರ್ಮಲಾ ಸಹ ಗಂಡನಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿಕೊಂಡಿದ್ದಳು"

Actress Ranjithas sister Nirmala also joined Nithyananda ashram as a devotee

ಬಂದ್ರೆ ಕರ್ಕೊಂಡ್ ಹೋಗಿ ಎಂದ

"ನಾನು ಒಮ್ಮೆ ಆಶ್ರಮಕ್ಕೆ ಹೋಗಿದ್ದೆ. ರಂಜಿತಾ- ನಿರ್ಮಲಾ ಇಬ್ಬರು ಅಲ್ಲೇ ಇದ್ದರು. ಅಶೋಕ್‌ ಕುಮಾರ್ ಅವರನ್ನು ನೋಡುತ್ತಿದ್ದಂತೆ ನಿತ್ಯಾನಂದ "ಬನ್ನಿ ಬನ್ನಿ. ನನಗೆ ತುಂಬಾ ಖುಷಿ ಆಗುತ್ತಿದೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದ. ನಾನು ಆಗ "ನನಗೆ ನಿನ್ನ ಬಗ್ಗೆ ಹೆಮ್ಮೆ ಇಲ್ಲ, ನಿನ್ನ ಬಗ್ಗೆ ನಾಚಿಕೆ ಆಗುತ್ತಿದೆ ಎಂದೆ. ನಮ್ಮ ಇಬ್ಬರು ಹೆಣ್ಣ ಮಕ್ಕಳನ್ನು ಯಾಕೆ ಇಲ್ಲಿ ಸೇರಿಸಿಕೊಂಡಿದ್ದೀಯಾ, ವಾಪಸ್ ಕಳಿಸು ಎಂದೆ. ಅದಕ್ಕೆ ಆತ " ಬೇಕಿದ್ದರೆ ಕರೆದುಕೊಂಡು ಹೋಗಿ, ನನ್ನದ್ದೇನು ಅಭ್ಯಂತರ ಇಲ್ಲ ಎಂದ"

ನಮಗೆ ಮೋಕ್ಷ ಸಿಕ್ಕಿದೆ ಎಂದರು

ರಂಜಿತಾ ಮಾತ್ರವಲ್ಲ, ನನ್ನ ಮಗಳು ನಿರ್ಮಲಾ ಕೂಡ ಅಲ್ಲೇ ಇದ್ದಳು. ಅವಳು ಗಂಡನಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿದ್ದಳು. ನಾನು ಬನ್ನಿ ಎಂದೆ ಬರಲಿಲ್ಲ. "ನಮಗೆ ಮೋಕ್ಷ ಸಿಕ್ಕಿದೆ. ನಾನು ಈಗ ಇಲ್ಲಿ ಆನಂದದಿಂದ ಇದ್ದೇವೆ. ಬಹಳ ಸಂತೋಷವಾಗಿ ಇದ್ದೇವೆ ಅಂದ್ರು. ಎಷ್ಟೆ ಕರೆದ್ರು ಬರಲಿಲ್ಲ. ಆಮೇಲೆ ಚೆನ್ನೈನಲ್ಲಿ ನನ್ನ ಅಳಿಯ ರಂಜಿತಾ ಗಂಡ ನಮ್ಮ ಮನೆಯಲ್ಲೇ ಇರು ಎಂದ ನಾನು ಇರಲಿಲ್ಲ. ಬಿಡದಿ ಆಶ್ರಮದಲ್ಲಿದ್ದಾಗ ಫೋನ್ ಮಾಡುತ್ತಿದ್ದರು. ದೇಶ ಬಿಟ್ಟು ಹೋದಮೇಲೆ ಫೋನ್ ಕೂಡ ಇಲ್ಲ. ನನ್ನ 3ನೇ ಮಗಳು ಜ್ಯೋತಿಗೆ ಆಗಾಗ ಮೆಸೇಜ್ ಮಾಡುತ್ತಾರಂತೆ. ನನ್ನನ್ನು ಜ್ಯೋತಿ ನೋಡಿಕೊಳ್ಳುತ್ತಾಳೆ" ಎಂದು ಸಂದರ್ಶನದಲ್ಲಿ ಅಶೋಕ್‌ ಕುಮಾರ್ ಹೇಳಿದ್ದಾರೆ.

More from Filmibeat

English summary
Actress Ranjitha's sister Nirmala also joined Nithyananda ashram as a devotee. Veteran Actor Ashok kumar Talks about his daughters Life. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X