ನನ್ನ ಕಾಮ್ರೆಡ್ ದೇವರಕೊಂಡ ಗೆ ಹುಟ್ಟುಹಬ್ಬದ ಶುಭಾಶಯ: ರಶ್ಮಿಕಾ ಮಂದಣ್ಣ ಹಾರೈಕೆ
ಕೆಲವೇ ತಿಂಗಳುಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್ ದೇವರಕೊಂಡ ಬಗ್ಗೆ ಚರ್ಚೆಗಳು ಜೋರಾಗಿದ್ದವು. ಆದರೆ ಈಗ ಕಡಿಮೆ ಆಗಿವೆ.
Recommended Video
ಈ ಇಬ್ಬರೂ ಒಂದರಹಿಂದೊಂದರಂತೆ ಎರಡು ಚಿತ್ರಗಳಲ್ಲಿ ನಟಿಸಿದ್ದು, ಮತ್ತು ಇಬ್ಬರ ಆತ್ಮೀಯತೆ ಕಂಡು ಹಲವರು ಹಲವು ರೀತಿಯಲ್ಲಿ ಮಾತನಾಡಿದ್ದರು.
ಆದರೆ ನಮ್ಮ ನಡುವೆ ಹಾಗೇನೂ ಇಲ್ಲ, ನಾವಿಬ್ಬರು ಗೆಳೆಯರೆಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸ್ಪಷ್ಟಪಡಿಸಿದ್ದರು.
ಈಗ ಮತ್ತೆ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರನ್ನು ನೆನಪಿಸಿಕೊಂಡಿದ್ದು, ಸಹೋದ್ಯೋಗಿ ನಟನಿಗೆ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.

'ಡಿಯರ್ ಕಾಮ್ರೆಡ್ ವಿಜಯ್ ದೇವರಕೊಂಡಗೆ ಶುಭಾಶಯ'
'ನನ್ನ ಡಿಯರ್ ಕಾಮ್ರೆಡ್ ವಿಜಯ್ ದೇವರಕೊಂಡ ಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಶುಭಕೋರಿದ್ದಾರೆ ರಶ್ಮಿಕಾ ಮಂದಣ್ಣ. ಇಬ್ಬರೂ ಜೊತೆಯಾಗಿ 'ಡಿಯರ್ ಕಾಮ್ರೆಡ್' ಸಿನಿಮಾದಲ್ಲಿ ನಟಿಸಿದ್ದರು, ಹಾಗಾಗಿ ಕಾಮ್ರೆಡ್ ಎಂದು ವಿಜಯ್ ದೇವರಕೊಂಡ ಅವರನ್ನು ಸಂಭೋದಿಸಿದ್ದಾರೆ.

ಮೋಡಿ ಮಾಡಿದ್ದ ರಶ್ಮಿಕಾ-ದೇವರಕೊಂಡ ಕೆಮಿಸ್ಟ್ರಿ
ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕೆಮಿಸ್ಟ್ರಿ ತೆಲುಗು ಸಿನಿ ಪ್ರೇಕ್ಷಕರನ್ನು ಸೆಳೆದಿತ್ತು. ಸಂದರ್ಶನಗಳಲ್ಲಿ ಅವರು ತೋರುತ್ತಿದ್ದ ಆತ್ಮೀಯತೆ, 'ಇಬ್ಬರೂ ಪ್ರೇಮದಲ್ಲಿದ್ದಾರೆ ಎನ್ನಲು ಸಾಕ್ಷ್ಯ ಒದಗಿಸಿತ್ತು' ಆದರೆ ಹಾಗೇನಿಲ್ಲವೆಂದು ಇಬ್ಬರೂ ಖಚಿತಪಡಿಸಿದರು.

ಹಲವು ನಟ-ನಟಿಯರಿಂದ ಶುಭಾಶಯ
ರಶ್ಮಿಕಾ ಮಂದಣ್ಣ ಹೊರತುಪಡಿಸಿ ಇನ್ನೂ ಅನೇಕ ಸ್ಟಾರ್ ನಟ-ನಟಿಯರು ವಿಜಯ್ ದೇವರಕೊಂಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಅಭಿಮಾನಿಗಳು ಸಹ ಶುಭಾಶಯ ಕೋರಿದ್ದಾರೆ

ನಟಿ ಸಾಯಿ ಪಲ್ಲವಿ ಹುಟ್ಟುಹಬ್ಬ ಸಹ
ಇಂದು ನಟಿ ಸಾಯಿ ಪಲ್ಲವಿ ಹುಟ್ಟುಹಬ್ಬ ಸಹ ಆಗಿದ್ದು, ಅವರಿಗೂ ಸಹ ಸ್ಟಾರ್ ನಟ-ನಟಿಯರು. ಸೇರಿದಂತೆ ತೆಲುಗು-ತಮಿಳು-ಮಲೆಯಾಳಂ ಸಿನಿ ಪ್ರೇಕ್ಷಕರು ಹುಟ್ಟುಹಬ್ಬ ಶುಭಾಶಯಗಳನ್ನು ಕೋರಿದ್ದಾರೆ.


Click it and Unblock the Notifications











