For Quick Alerts
  ALLOW NOTIFICATIONS  
  For Daily Alerts

  ಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ನಟಿಯರು: ಸಮಂತಾ, ಅನುಷ್ಕಾಳನ್ನು ಮೀರಿಸಿದ ರಶ್ಮಿಕಾ!

  |

  ಕರುನಾಡ ಕುವರಿ ನಟಿ ರಶ್ಮಿಕಾ ಮಂದಣ್ಣ ಈಗ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಇಟ್ಟಿದ್ದು. ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ. ಸಕ್ಸಸ್‌ ಹಾದಿಯನ್ನು ಹಿಡಿದಿರುವ ನಟಿ ರಶ್ಮಿಕಾ ಇಲ್ಲಿ ತನಕ ಹಿಂದಿರುಗಿ ನೋಡಿಲ್ಲ. ಸಿನಿಮಾದಿಂದ ಸಿನಿಮಾಕ್ಕೆ ಯಶಸ್ವಿ ಪಯಣ ಬೆಳೆಸುತ್ತಿದ್ದಾರೆ.

  ಕನ್ನಡದಲ್ಲಿ ಅತಿ ಕಡಿಮೆ ಸಮಯದಲ್ಲಿ ಸ್ಟಾರ್‌ ನಟರುಗಳ ಜೊತೆಗೆ ನಟಿಸಿ ಸ್ಟಾರ್‌ ನಟಿ ಪಟ್ಟಕ್ಕೇರಿದಾಕೆ ರಶ್ಮಿಕಾ. ಅಂತೆಯೇ ರಶ್ಮಿಕಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅಲ್ಲಿ ಕೂಡ ಸಕ್ಸಸ್‌ ಹಾದಿಯನ್ನೇ ತುಳಿದಿದ್ದಾರೆ. ತೆಲುಗಿನಲ್ಲಿ ರಶ್ಮಿಕಾ ತಮ್ಮ ಪ್ರತೀ ಚಿತ್ರದ ಮೂಲಕ ಹೆಚ್ಚೆಚ್ಚು ಜನ ಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

  ಅಷ್ಟಕ್ಕೇ ರಶ್ಮಿಕಾ ಸೀಮಿತ ಆಗಿಲ್ಲ. ಆಕೆ ಅಲ್ಲಿನ ಟಾಪ್‌ ಸ್ಟಾರ್‌ ನಟಿಯರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್‌ ನಟಿಯರಾದ ಅನುಷ್ಕಾ, ಸಮಂತಾ, ಕೀರ್ತಿ ಸುರೇಶ್‌ ಅವರನ್ನು ಬೀಟ್ ಮಾಡಿ ಮುಂದೆ ಸಾಗಿದ್ದಾರೆ. ಹಾಗಿದ್ದರೆ ಯಾವ ವಿಚಾರದಲ್ಲಿ ರಶ್ಮಿಕಾ ಇವರೆಲ್ಲರನ್ನು ಮೀರಿಸಿದ್ದಾರೆ ಎನ್ನುವುದನ್ನು ಮುಂದೆ ಓದಿ...

  ಅತಿ ಹೆಚ್ಚು ಸಂಭಾನವೆ ಪಡೆಯುವ ಟಾಪ್‌ ನಟಿಯರ ಪಟ್ಟಿ!

  ಅತಿ ಹೆಚ್ಚು ಸಂಭಾನವೆ ಪಡೆಯುವ ಟಾಪ್‌ ನಟಿಯರ ಪಟ್ಟಿ!

  ಸೌತ್‌ ಚಿತ್ರರಂಗದಲ್ಲಿ, ಅದರಲ್ಲೂ ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಟಾಪ್‌ ನಟಿಯರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ಕೀರ್ತಿ ಸುರೇಶ್, ಸಮಂತಾ ಹೆಸರುಗಳಿವೆ. ಈ ಐದು ಮಂದಿ ಕೂಡ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಇದ್ದು ಹಿಟ್‌ ಚಿತ್ರಗಳನ್ನು ಕೊಡುತ್ತಾ ಬಂದಿದ್ದಾರೆ. ಆದರೆ ಇವರಲ್ಲಿ ಮೊದಲು ಯಾರು, ಕೊನೆಯಲ್ಲಿ ಇರುವುದು ಯಾರು ಎನ್ನುವ ವಿವರ ಇಲ್ಲಿದೆ.

  ನಟಿ ಪೂಜಾ ಹೆಗ್ಡೆಗೆ ನಂಬರ್‌ 1 ಸ್ಥಾನ!

  ನಟಿ ಪೂಜಾ ಹೆಗ್ಡೆಗೆ ನಂಬರ್‌ 1 ಸ್ಥಾನ!

  ನಟಿ ಪೂಜಾ ಹೆಗ್ಡೆ ಸೌತ್‌ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ. ಸ್ಟಾರ್‌ ನಟರ ಸಿನಿಮಾಗಳು ಅಂತ ಬಂದರೆ ಮೊದಲು ಪೂಜಾ ಹೆಗ್ಡೆ ಹೆಸರು ಮುನ್ನೆಲೆಗೆ ಬರುತ್ತೆ. ಅಷ್ಟರ ಮಟ್ಟಿಗೆ ಪೂಜಾಗೆ ತೆಲುಗು ಚಿತ್ರರಂಗಲ್ಲಿ ಬೇಡಿಕೆ ಇದೆ. ಹಾಗಾಗಿ ನಟಿ ಪೂಜಾ ಹೆಗ್ಡೆ ಸದ್ಯ ಅತಿ ಹೆಚ್ಚು ಸಂಭಾವನೆ ಪಡೆದು ಮೊದಲ ಸ್ಥಾನದಲ್ಲಿ ಇದ್ದಾರೆ. ಮಾಹಿತಿ ಪ್ರಕಾರ ಪೂಜಾ ಹೆಗ್ಡೆ ಸದ್ಯ ಪಡೆದುಕೊಳ್ಳುತ್ತಿರುವ ಸಂಭಾವನೆ 3.5 ಕೋಟಿ. ಈ ಮೂಲಕ ಪೂಜಾ ಹೆಗ್ಡೆ ನಂಬರ್‌ 1 ಸ್ಥಾನದಲ್ಲಿ ಇದ್ದಾರೆ.

  ಎರಡನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ!

  ಎರಡನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ!

  ಇದು ಕೊಂಚ ಅಚ್ಚರಿ ವಿಚಾರನೆ ರಶ್ಮಿಕಾ ತೆಲುಗಿನಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳನ್ನು ಮಾತ್ರ ಮಾಡಿದ್ದಾರೆ. ಇಷ್ಟು ಬೇಗ ದೊಡ್ಡ ನಟಿಯರನ್ನೆಲ್ಲಾ ದಾಟಿ ಎರಡನೇ ಸ್ಥಾನಕ್ಕೆ ಬಂದು ಬಿಟ್ಟರಾ ಎಂದು ಆಶ್ಚರ್ಯ ಆಗಬಹುದು. ಆದರೆ ರಶ್ಮಿಕಾ ಮಾಡಿರುವ ಚಿತ್ರಗಳು ಎಲ್ಲವೂ ಬಹುತೇಕ ಸೂಪರ್ ಹಿಟ್‌ ಆಗಿವೆ. ಹಾಗಾಗಿ ರಶ್ಮಿಕಾ ಎರಡನೇ ಸ್ಥಾನದಲ್ಲಿ ಇದ್ದಾರೆ. ನಂಬರ್‌ 1 ಸ್ಥಾನಕ್ಕೆ ಬರಲು ರಶ್ಮಿಕಾಗೆ ಇನ್ನು ಹೆಚ್ಚು ಸಮಯ ಬೇಕಾಗಿಲ್ಲ. ರಶ್ಮಿಕಾ ಪಡೆಯುತ್ತಿರವ ಸಂಭಾವನೆ 3 ಕೋಟಿ ರೂ. ಒಂದು ಚಿತ್ರಕ್ಕೆ ಮೊದಲು ರಶ್ಮಿಕಾ 2 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಪುಷ್ಪ ಚಿತ್ರದ ಸಕ್ಸಸ್‌ ಬಳಿಕ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು 3 ಕೋಟಿಗೆ ಏರಿಸಿಕೊಂಡಿದ್ದಾರೆ. ಈ ಮೂಲಕ ಎರಡನೇ ಸ್ಥಾನಕ್ಕೆ ಬಂದಿದ್ದಾರೆ.

  ಒಂದೇ ಗ್ರಾಫ್‌ನಲ್ಲಿ ಸಮಂತಾ, ಅನುಷ್ಕಾ, ಕೀರ್ತಿ ಸುರೇಶ್!

  ಒಂದೇ ಗ್ರಾಫ್‌ನಲ್ಲಿ ಸಮಂತಾ, ಅನುಷ್ಕಾ, ಕೀರ್ತಿ ಸುರೇಶ್!

  ಇನ್ನು ನಟಿ ಸಮಂತಾ ಮೂರನೇ ಸ್ಥಾನದಲ್ಲಿ ಇದ್ದಾರೆ. ಸಮಂತಾ ಮದುವೆ ಸಮಯದಲ್ಲಿ ಅಷ್ಟಾಗಿ ಸಿನಿಮಾಗಳಲ್ಲಿ ಸಕ್ರಿಯವಾಗಿ ಇರಲಿಲ್ಲ. ಕೊನೆಯದಾಗಿ 'ರಂಗಸ್ಥಳಂ' ಚಿತ್ರಕ್ಕೆ ಸಮಂತಾ ಪಡೆದ ಸಂಭಾವನೆ 2 ಕೋಟಿ. ಇನ್ನು ಸಮಂತಾ ಬಳಿಕ ಅನುಷ್ಕಾ ಶೆಟ್ಟಿ ನಾಲ್ಕನೇ ಸ್ಥಾನದಲ್ಲಿ ಇದ್ದಾರೆ. ಅನುಷ್ಕಾ ಶೆಟ್ಟಿ ಕೂಡ ಬಾಹುಬಲಿ ಚಿತ್ರ ಸರಣಿಯ ಬಳಿಕ ಅಷ್ಟಾಗಿ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಕೊನೆಯಾದಾಗಿ 'ಬಾಹುಬಲಿ' ಚಿತ್ರಕ್ಕಾಗಿ ಅನುಷ್ಕಾ ಶೆಟ್ಟಿ ಪಡೆದ ಸಂಭಾವನೆ 2 ಕೋಟಿ. ಐದನೇ ಸ್ಥಾನದಲ್ಲಿ ಇದ್ದಾರೆ ನಟಿ ಕೀರ್ತಿ ಸುರೇಶ್‌. ಈಕೆಯ ಸಂಭಾವನೆ ಕೂಡ 2 ಕೋಟಿ. 'ಮಹಾನಟಿ' ಚಿತ್ರಕ್ಕಾಗಿ ಕೀರ್ತಿ ಸುರೇಶ್ 2 ಕೋಟಿ ಸಂಭಾವನೆ ಪಡೆದುಕೊಂಡಿರುವುದು ವರದಿ ಆಗಿದೆ.

  ರಶ್ಮಿಕಾ ಪೂಜಾ ಹೆಗ್ಡೆ ನಡುವೆ ಪೈಪೋಟಿ!

  ರಶ್ಮಿಕಾ ಪೂಜಾ ಹೆಗ್ಡೆ ನಡುವೆ ಪೈಪೋಟಿ!

  ನಟಿ ಪೂಜಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವೆ ಸದ್ಯ ಪೈಪೋಟಿ ಇದೆ. ಇಬ್ಬರೂ ಕೂಡ ಸ್ಟಾರ್‌ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಚಿತ್ರ, ಅಲ್ಲು ಅರ್ಜುನ್ ಜೊತೆಗೆ ಪೂಜಾ ಹೆಗ್ಡೆ ನಟಿಸಿದ್ದ 'ಅಲಾ ವೈಕುಂಟ ಪುರಮುಲೋ' ಚಿತ್ರದ ದಾಖಲೆಯನ್ನು ಪುಡಿ ಮಾಡಿದೆ. ಹಾಗಾಗಿ ರಶ್ಮಿಕಾ ಗ್ರಾಫ್‌ ಮತ್ತಷ್ಟು ಹೆಚ್ಚಾಗಿದೆ. ಪೂಜಾ ಹೆಗ್ಡೆಗಿಂತಲೂ ರಶ್ಮಿಕಾ ಒಂದು ಹೆಜ್ಜೆ ಮಾತ್ರ ಹಿಂದೆ ಇದ್ದಾರೆ. ಇನ್ನೊಂದು ಸೂಪರ್‌ ಹಿಟ್ ಕೊಟ್ಟರೆ ರಶ್ಮಿಕಾ ನಂಬರ್ 1 ಆಗುವುದರಲ್ಲಿ ಅನುಮಾನವೇ ಇಲ್ಲ.

  English summary
  Actress Rashmika Mandanna Hikes Fees, Beats Samantha, Anushka Shetty:Check Out 5 Highest Paid Actresses Of Tollywood,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X