ಮಹೇಶ್ ಬಾಬು, ಅಲ್ಲು ಅರ್ಜುನ್ ನಂತರ ತೆಲುಗಿನ ಮತ್ತೊಬ್ಬ ಸ್ಟಾರ್ ಸಿನಿಮಾದಲ್ಲಿ ರಶ್ಮಿಕಾ?
ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಾಲು-ಸಾಲು ಸಿನಿಮಾಗಳು ಅವರನ್ನು ಅರಸಿ ಬರುತ್ತಿವೆ.
Recommended Video
ನನ್ನ ಅಭಿಮಾನಿಗಳು ಎಷ್ಟು ಸುಂದರ ಅಲ್ವಾ ಎಂದ ರಶ್ಮಿಕಾ | Filmibeat Kannada
ಕನ್ನಡ ಸಿನಿಮಾದಿಂದ ನಟನೆ ಪ್ರಾರಂಭಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ತೆಲುಗಿನಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ, ಹಲವು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ, ನಾನಿ, ಮಹೇಶ್ ಬಾಬು, ನಿತಿನ್, ಅಲ್ಲು ಅರ್ಜುನ್ ಅವರೊಟ್ಟಿಗೆ ನಾಯಕಿಯಾಗಿ ನಟಿಸಿರುವ, ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ಜೂ.ಎನ್‌ಟಿಆರ್ ಮುಂದಿನ ಸಿನಿಮಾದಲ್ಲಿಯೂ ನಾಯಕಿ ಆಗುವ ಸಂಭವ ಇದೆ.

ತ್ರಿವಿಕ್ರಮ್ ನಿರ್ದೇಶಿಸುತ್ತಿರುವ ಜೂ.ಎನ್‌ಟಿಆರ್ ಅವರ ಮುಂದಿನ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿ ಆಗುವ ಸಾಧ್ಯತೆ ಇದೆ.
ಚಿತ್ರತಂಡವು, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಯೋಜನೆಯಲ್ಲಿದೆ. ಕಿಯಾರಾ ಈಗಾಗಲೇ ಬಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದು, ರಶ್ಮಿಕಾ ಅವರಿಗೇ ಈ ಅವಕಾಶ ದೊರಕುವ ಸಾಧ್ಯತೆ ಇದೆ.
More from Filmibeat
English summary
Actress Rashmika Mandanna may act in Jr.NTR's next movie. Trivikram directing the movie.


Click it and Unblock the Notifications











