For Quick Alerts
  ALLOW NOTIFICATIONS  
  For Daily Alerts

  'ಭರವಸೆ ಹಂಚುವ' ಕೆಲಸದಲ್ಲಿ ತೊಡಗಿದ ರಶ್ಮಿಕಾ ಮಂದಣ್ಣ

  |

  ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ಹಲವಾರು ನಟರು ಬೀದಿಗೆ ಇಳಿದು ಜನರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಬೆರಳೆಣಿಕೆ ಸಂಖ್ಯೆಯ ನಟಿಯರೂ ಸಹ ಜನರ ಸಂಕಷ್ಟಕ್ಕೆ ಅಗತ್ಯ ನೆರವು ನೀಡುತ್ತಿದ್ದಾರೆ.

  ಹಲವು ನಟಿಯರು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ(?!). ಕೆಲವರು ಕೋವಿಡ್‌ ಕೇರ್‌ ಸಂಖ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೆಂಟಲ್ ಹೆಲ್ತ್ ನಂಬರ್ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ನೆರವು ನೀಡುವಂತೆ ಬಂದ ಮನವಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೆರವು ಕೊಡಿಸುವ ಯತ್ನ ಮಾಡುತ್ತಿದ್ದಾರೆ ಇತ್ಯಾದಿ.

  ನಟಿ ರಶ್ಮಿಕಾ ಮಂದಣ್ಣ ಸಹ ಇದೇ ಹಾದಿಯಲ್ಲಿದ್ದಾರೆ. ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣದಲ್ಲಿ ಹೊಸದಾಗಿ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನದ ಹೆಸರು 'ಸ್ಪ್ರೆಡ್ ಹೋಪ್'. ಈ ಅಭಿಯಾನದ ಮೂಲಕ ಪ್ರಧಾನಿ ಮೋದಿ ಹೇಳಿದ್ದ ಮಾತು ಪಾಲಿಸುತ್ತಿದ್ದಾರೆ ನಟಿ!

  ಮೋದಿ ಮಾತು ಪಾಲಿಸುತ್ತಿರುವ ರಶ್ಮಿಕಾ!

  ಮೋದಿ ಮಾತು ಪಾಲಿಸುತ್ತಿರುವ ರಶ್ಮಿಕಾ!

  ದೇಶದಾದ್ಯಂತ ಕೊರೊನಾ ವಿರುದ್ಧ ಹೋರಾಟಕ್ಕೆ ನರವಾಗುತ್ತಿರುವ ಕೊರೊನಾ ಯೋಧರ ಮಾಹಿತಿಯನ್ನು, ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ ರಶ್ಮಿಕಾ. ಆ ಮೂಲಕ ಪಾಸಿಟಿವ್ ಸುದ್ದಿಗಳನ್ನು ಜನರಿಗೆ ತಲುಪಿಸುವ ಯತ್ನ ಮಾಡುತ್ತಿದ್ದಾರೆ. ಪಾಸಿಟಿವ್ ಸುದ್ದಿಯನ್ನು ಹರಡುವಂತೆ ಇತ್ತೀಚಿನ 'ಮನ್‌ ಕೀ ಬಾತ್‌' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿದ್ದರು.

  ಪಾಸಿಟಿವ್ ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವ ನಟಿ

  ಪಾಸಿಟಿವ್ ಸುದ್ದಿಗಳನ್ನು ಹಂಚಿಕೊಳ್ಳುತ್ತಿರುವ ನಟಿ

  ಉಚಿತವಾಗಿ ಆಹಾರ ವಿತರಿಸುತ್ತಿರುವ ಯುವಕ. ಕೋವಿಡ್ ಸಮಯದಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುತ್ತಿರುವವರು. ಕೋವಿಡ್‌ ರೋಗಿಗಳಿಗಾಗಿ ಆಹಾರ ತಯಾರಿಸುತ್ತಿರುವ ಜಮ್ಮು ಕಾಶ್ಮೀರದ ಕುಟುಂಬ. ಹೀಗೆ ಹಲವು ರಾಜ್ಯಗಳ ಕೋವಿಡ್ ಯೋಧರ ಚಿತ್ರ, ಮಾಹಿತಿಯನ್ನು ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪಾಸಿಟಿವ್ ಸುದ್ದಿ ನೀಡುತ್ತಿರುವ ಪತ್ರಕರ್ತೆಯ ವಿಡಿಯೋ ಸಹ ಹಂಚಿಕೊಂಡಿದ್ದಾರೆ.

  ಹಲವು ನಟಿಯರು ಅಗತ್ಯ ಸೇವೆ ಮಾಡುತ್ತಿದ್ದಾರೆ

  ಹಲವು ನಟಿಯರು ಅಗತ್ಯ ಸೇವೆ ಮಾಡುತ್ತಿದ್ದಾರೆ

  ನಟಿ ರವೀನಾ ಟಂಡನ್ ಉಚಿತವಾಗಿ ಆಮ್ಲಜನಕ ವಿತರಣೆ ಮಾಡುತ್ತಿದ್ದಾರೆ. ನಟಿ ಸನ್ನಿ ಲಿಯೋನ್ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಕನ್ನಡದ ನಟಿ ನೀತು ಶೆಟ್ಟಿ ಉಚಿತ ಆಮ್ಲಜನಕ ನೀಡುತ್ತಿರುವ 'ಉಸಿರು' ಜೊತೆಗೆ ನಿಂತಿದ್ದಾರೆ. ಹರ್ಷಿಕಾ ಪೂಣಚ್ಚ, ರಾಗಿಣಿ, ಸಂಜನಾ ಗಲ್ರಾನಿ ಇನ್ನೂ ಹಲವಾರು ನಟಿಯರು ಕೊರೊನಾ ಸಂಕಷ್ಟದ ಸಮಯದಲ್ಲಿ 'ಸಾಮಾಜಿಕ ಜಾಲತಾಣ ಮೂಲಕ ಕಾಳಜಿ' ತೋರುವ ಬದಲಿಗೆ ಅಗತ್ಯ ನೆರವು ನೀಡುತ್ತಿದ್ದಾರೆ.

  ಸಮಾಜ ಸೇವೆ ಹೆಸರಲ್ಲಿ ಉಪೇಂದ್ರ ಜಾತಿ ಪ್ರೀತಿ ಮೆರೆದಿದ್ದಾರೆ ಅಂದ್ರು ಚೇತನ್ | Filmibeat Kannada
  ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು

  ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು

  ಇನ್ನು ರಶ್ಮಿಕಾ ಮಂದಣ್ಣ ಸಿನಿಮಾಗಳ ವಿಷಯ ಗಮನಿಸುವುದಾದರೆ ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿಯೇ ನೆಲೆ ನಿಲ್ಲುವ ಯೋಚನೆ ರಶ್ಮಿಕಾಗೆ ಇದ್ದಂತಿದೆ.

  English summary
  Actress Rashmika Mandanna, Positive news about COVID 19 situation, Spread hope

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X