For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಈ ಸ್ಟಾರ್ ನಟನಿಗೆ ಬಾಡಿಗಾರ್ಡ್ ಆಗಲು ಕಷ್ಟಪಟ್ಟು ವರ್ಕೌಟ್ ಮಾಡುತ್ತಿದ್ದಾರಂತೆ ರಶ್ಮಿಕಾ

  |

  ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಬಾಡಿಗಾರ್ಡ್ ಆಗುವ ಬಗ್ಗೆ ಮಾತನಾಡಿದ್ದಾರೆ. ತೆಲುಗಿನ ಸ್ಟಾರ್ ನಟನಿಗೆ ಬಾಡಿಗಾರ್ಡ್ ಆಗಿ ನೇಮಕ ಆಗುವ ಬಗ್ಗೆ ಹೇಳಿದ್ದಲ್ಲದೆ, ಅದಕ್ಕಾಗೆ ಇಷ್ಟು ಕಷ್ಟಪಟ್ಟು ವರ್ಕೌಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

  ಬಾಡಿಗಾರ್ಡ್ ಆಗಲು ಸಖತ್ ವರ್ಕ್ಔಟ್ ಮಾಡ್ತಿದ್ದಾರೆ ಕಿರಿಕ್ ಬೆಡಗಿ | Filmibeat Kannada

  ಅಷ್ಟಕ್ಕು ರಶ್ಮಿಕಾ ಬಾಡಿಗಾರ್ಡ್ ಆಗಲು ಹೊರಟಿರುವುದು ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಅವರಿಗೆ. ರಶ್ಮಿಕಾ ಇತ್ತೀಚಿಗೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  ಮುಂಬೈನಲ್ಲಿ ಭೇಟಿಯಾದ ಜೋಡಿ: ರಶ್ಮಿಕಾ ಉಡುಪಿನ ಮೇಲೇಕೆ ನೆಟ್ಟಿಗರ ಕಣ್ಣು?ಮುಂಬೈನಲ್ಲಿ ಭೇಟಿಯಾದ ಜೋಡಿ: ರಶ್ಮಿಕಾ ಉಡುಪಿನ ಮೇಲೇಕೆ ನೆಟ್ಟಿಗರ ಕಣ್ಣು?

  ರಶ್ಮಿಕಾ ವರ್ಕೌಟ್ ವಿಡಿಯೋಗೆ ನಟ ನಾಗಾರ್ಜುನ್ ಕೂಡ ಪ್ರತಿಕ್ರಿಯೆ ನೀಡಿ, 'ವಾವ್ ರಶ್ಮಿಕಾ' ಎಂದು ಹೇಳಿದ್ದಾರೆ. ನಾಗಾರ್ಜುನ್ ಮಾತಿಗೆ ಫುಲ್ ಖುಷ್ ಆಗಿರುವ ರಶ್ಮಿಕಾ, 'ಸರ್..ನೋಡಿ ಇನ್ನೂ ಕಷ್ಟಪಟ್ಟು ವರ್ಕೌಟ್ ಮಾಡುತ್ತಿದ್ದೇನೆ. ಒಂದಿನ ನಾನು ನಿಮ್ಮ ಬಾಡಿಗಾರ್ಡ್ ಆಗಿ ನೇಮಕ ಆಗುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ ಅವರ ತಮಾಷೆಯ ಪ್ರತಿಕ್ರಿಯೆಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.

  ನಾಗಾರ್ಜುನ್ ನಟನೆಯ ವೈಲ್ಡ್ ಡಾಗ್ ಸಿನಿಮಾ ಏಪ್ರಿಲ್ 2ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಒಂದು ಚಾಲೆಂಜ್ ನೀಡಿತ್ತು. ಅದೇ #WildGogPushUpChallenge. ಈ ಚಾಲೆಂಜ್ ಸ್ವೀಕರಿಸಿದ ರಶ್ಮಿಕಾ ಪುಷ್ ಅಪ್ ಮಾಡುವ ವಿಡಿಯೋ ಮಾಡಿ, ವೈಲ್ಡ್ ಡಾಗ್ ನಿರ್ಮಾಣ ಮಾಡುತ್ತಿರುವ ಮ್ಯಾಟಿನಿ ಎಂಟರ್ ಟೇನ್ ಮೆಂಟ್ ಕಂಪನಿಗೆ ಟ್ಯಾಗ್ ಮಾಡಿದ್ದರು. ರಶ್ಮಿಕಾ ವಿಡಿಯೋ ನೋಡಿ ಸಂತಸ ಪಟ್ಟ ನಾಗಾರ್ಜುನ್ ವಾವ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ರಶ್ಮಿಕಾ ಸದ್ಯ ಹಿಂದಿಯ ಮಿಷನ್ ಮಜ್ನು ಸಿನಿಮಾದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿರುವ ರಶ್ಮಿಕಾ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ರಶ್ಮಿಕಾ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಮಿತಾಬ್ ಬಚ್ಚನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಬಗ್ಗೆ ರಶ್ಮಿಕಾ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

  English summary
  Actress Rashmika Mandanna turns bodyguard for Akkineni Nagarjuna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X