For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಗಣಪನ ದರ್ಶನ ಪಡೆದ ರಶ್ಮಿಕಾ ಮಂದಣ್ಣ!

  |

  ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದಲ್ಲೇ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕೇವಲ ದಕ್ಷಿಣ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಬಾಲಿವುಡ್‌ ಅಂಗಳಕ್ಕೂ ಈ ನ್ಯಾಶನಲ್ ಸುಂದರಿ ಕಾಲಿಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಗಾಧ ಪ್ರಮಾಣದ ಸಾಧನೆ ಮಾಡಿ ಎಲ್ಲರ ಮನ ಗೆಲ್ಲುವಲ್ಲಿ ರಶ್ಮಿಕಾ ಯಶಸ್ವಿಯಾಗಿದ್ದಾರೆ.

  ಆಗಾಗ ನಟಿ ರಶ್ಮಿಕಾ ಹೆಸರು ಟ್ರೋಲ್ ಅಥವಾ ಗಾಸಿಪ್‌ಗಳಿಂದ ಕೇಳಿ ಬರುತ್ತಿರುತ್ತದೆ. ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ರಶ್ಮಿಕಾ ಸದಾ ಸುದ್ದಿಯಲ್ಲಿರುತ್ತಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ.

  ಹೆಸರು ಬದಲಿಸಿಕೊಂಡ ರಶ್ಮಿಕಾ ಮಂದಣ್ಣ, ಇನ್ಮುಂದೆ ಏನಂತಾ ಕರೀಬೆಕು ಗೊತ್ತಾ?ಹೆಸರು ಬದಲಿಸಿಕೊಂಡ ರಶ್ಮಿಕಾ ಮಂದಣ್ಣ, ಇನ್ಮುಂದೆ ಏನಂತಾ ಕರೀಬೆಕು ಗೊತ್ತಾ?

  ಸದ್ಯ ನಟಿ ರಶ್ಮಿಕಾ ಬೆಂಗಳೂರಿಗೆ ಬಂದಿದ್ದು, ತಮ್ಮ ನಿತ್ಯ ಅಭ್ಯಾಸದಂತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ನೆಚ್ಚಿನ ದೇವರು ಗಣೇಶನ ದೇವಸ್ಥಾನಕ್ಕೆ ನಟಿ ರಶ್ಮಿಕಾ ಭೇಟಿ ನೀಡಿದ್ದಾರೆ. ಸಾಂಪ್ರದಾಯಿಕ ಉಡುಗೆ ಧರಿಸಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಪೋಸ್ಟ್ ಶೇರ್ ಮಾಡಿದ್ದಾರೆ.

   ಸೀರೆ ಉಟ್ಟು ಗಣಪನ ದರ್ಶನ ಪಡೆದ ಕಿರಿಕ್ ಬೆಡಗಿ

  ಸೀರೆ ಉಟ್ಟು ಗಣಪನ ದರ್ಶನ ಪಡೆದ ಕಿರಿಕ್ ಬೆಡಗಿ

  ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಬೆಂಗಳೂರಿಗೆ ಆಗಮಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರು ಪ್ರತಿ ಬಾರಿ ಬೆಂಗಳೂರಿಗೆ ಆಗಮಿಸಿದಾಗ ಮೊದಲು ಗಣಪನ ದೇಗುಲ ಹೋಗಿ ಪ್ರಾರ್ಥನೆ ಸಲ್ಲಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಬಾರಿಯು ಕೂಡ ತಪ್ಪದೇ ವಿಘ್ನೇಶ್ವರನ ದೇಗುಲಕ್ಕೆ ಆಗಮಿಸಿದ್ದಾರೆ. ಪಿಂಕ್ ಕಲರ್ ಸಿಲ್ಕ್ ಸ್ಯಾರಿ ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ಗಣಪನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ವಾಪಾಸ್ ಆಗಿದ್ದಾರೆ. ಸದ್ಯ ಈ ಪೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಶ್ಮಿಕಾ ಶೇರ್ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ ನನ್ನ ಪಯಣವು ಯಾವಾಗಲೂ ಗಣಪನ ಪ್ರಾರ್ಥನೆ ಮಾಡುವ ಮೂಲಕ ಪ್ರಾರಂಭವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

  ರಶ್ಮಿಕಾ, ವಿಜಯ್‌ಗೆ ವಿಶ್ ಮಾಡದೇ ಇರಲು ಕಾರಣ ಅನನ್ಯಾ ಪಾಂಡೆ ಅಂತೆ!ರಶ್ಮಿಕಾ, ವಿಜಯ್‌ಗೆ ವಿಶ್ ಮಾಡದೇ ಇರಲು ಕಾರಣ ಅನನ್ಯಾ ಪಾಂಡೆ ಅಂತೆ!

   ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ

  ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ

  ನಟಿ ರಶ್ಮಿಕಾ ಬೆಂಗಳೂರಿಗೆ ಆಗಮಿಸಿದ್ದು, ಗಣೇಶ್ ದೇಗುಲಕ್ಕೆ ಸಾಂಪ್ರದಾಯಿಕ ಉಡುಗೆ ಧರಿಸಿ ಹೋಗಿದ್ದಾರೆ. ಸದ್ಯ ಈ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿ ಗುಲಾಬಿ ಬಣ್ಣದ ಸಿಲ್ಕ್ ಸ್ಯಾರಿ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಪೋಟೋವನ್ನು ನೋಡಿದ ಅಭಿಮಾನಿಗಳು ಬಗೆ ಬಗೆಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಒಂದಲ್ಲಾ ಒಂದು ರೀತಿ ಸುದ್ದಿಯಲ್ಲಿರುತ್ತಾರೆ.

   ಬಾಲಿವುಡ್‌ ಸಿನಿಮಾದಲ್ಲೂ ರಶ್ಮಿಕಾ ನಟನೆ

  ಬಾಲಿವುಡ್‌ ಸಿನಿಮಾದಲ್ಲೂ ರಶ್ಮಿಕಾ ನಟನೆ

  ನಟಿ ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ನಟಿಯಾಗಿದ್ದಾರೆ. ಹೀಗಾಗಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಬಿಗ್ ಸ್ಟಾರ್‌ಗಳ ಸಿನಿಮಾದಲ್ಲಿ ನಟಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಮುಹೂರ್ತಗೊಂಡ ತಮಿಳಿನ 'ದಳಪತಿ 66' ಸಿನಿಮಾದಲ್ಲಿ ವಿಜಯ್ ಜೊತೆ ರಶ್ಮಿಕಾ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಇದರ ಜೊತೆಗೆ ದುಲ್ಕಾರ್ ಸಲ್ಮಾನ್ ಅವರ 'ಸೀತಾ ರಾಮ್' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲದರ ಜೊತೆಗೆ ಬಾಲಿವುಡ್‌ಗೂ ರಶ್ಮಿಕಾ ಪಾದರ್ಪಣೆ ಮಾಡಿದ್ದು, 'ಮಿಷನ್ ಮಜ್ನು' ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರ ಅವರ ಜೊತೆ ನಟಿಸಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶನದ 'ಗುಡ್ ಬೈ' ಹಾಗೂ ಅಮಿತಾಭ್ ಬಚ್ಚನ್‌ ಚಿತ್ರದಲ್ಲೂ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣ್‌ಬೀರ್ ಕಪೂರ ಜೊತೆ 'ಎನಿಮಲ್' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ನೆಚ್ಚಿನ ಗೆಳೆಯನ ಹುಟ್ಟುಹಬ್ಬಕ್ಕೆ ವಿಶ್ ಮಾಡಿಲಿಲ್ಲ ರಶ್ಮಿಕಾ: ತಲೆ ಕೆಡಿಸಿಕೊಂಡ ಫ್ಯಾನ್ಸ್‌ನೆಚ್ಚಿನ ಗೆಳೆಯನ ಹುಟ್ಟುಹಬ್ಬಕ್ಕೆ ವಿಶ್ ಮಾಡಿಲಿಲ್ಲ ರಶ್ಮಿಕಾ: ತಲೆ ಕೆಡಿಸಿಕೊಂಡ ಫ್ಯಾನ್ಸ್‌

   'ಪುಷ್ಪ 2' ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟಿರುವ ರಶ್ಮಿಕಾ

  'ಪುಷ್ಪ 2' ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟಿರುವ ರಶ್ಮಿಕಾ

  ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ 'ಪುಷ್ಪ 2' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಪುಷ್ಪ 1'ರಲ್ಲಿ ಶ್ರೀವಲ್ಲಿಯಾಗಿ ಮಿಂಚಿದ್ದ ನಟಿ 'ಪುಷ್ಪ 2' ನಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು 'ಪುಷ್ಪ 2' ಕುರಿತು ಮಾತನಾಡಿರುವ ನಟಿ ರಶ್ಮಿಕಾ 'ಪುಷ್ಪ' ಸಿನಿಮಾದ ಡೈಲಾಗ್‌ಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ತಲುಪುತ್ತದೆ ಎಂದು ನಾನು ಊಹಿಸಿರಲಿಲ್ಲ. ಈ ಸಿನಿಮಾದ ಬಹುತೇಕ ಡೈಲಾಗ್‌ಗಳನ್ನು ಜನರು ತುಂಬಾ ಮೆಚ್ಚಿಕೊಂಡಿದ್ದಾರೆ. ಹೀಗಾಗಿ 'ಪುಷ್ಪ 2' ಸಿನಿಮಾ ಮೇಲೆ ಜನರಿಗೂ ಹೆಚ್ಚಿನ ನಿರೀಕ್ಷೆ ಇರುತ್ತದೆ. ಆ ನಿರೀಕ್ಷೆಗೆ ತಕ್ಕಂತೆ ಹೆಚ್ಚಿನ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಈ ಸಿನಿಮಾವೂ ಕೂಡ 'ಪುಷ್ಪ 1'ಗಿಂತ ಹೆಚ್ಚಿನ ಸಕ್ಸಸ್ ಕಾಣಲಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

  English summary
  Actress Rashmika Mandanna Visit Ganesha Temple In Bengaluru.
  Thursday, May 26, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X