For Quick Alerts
  ALLOW NOTIFICATIONS  
  For Daily Alerts

  "ಮ್ಯಾಗಿ ತರ ಎರಡೇ ನಿಮಿಷ": ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ನಟಿ ರೆಗಿನಾ ಹಸಿ ಜೋಕ್!

  |

  ಸಾಮಾನ್ಯವಾಗಿ ನಟಿಯರು ಕ್ಯಾಮರಾ ಮುಂದೆ ಮಾತನಾಡುವಾಗ ಎಚ್ಚರದಿಂದ ಇರುತ್ತಾರೆ. ಏನೋ ಮಾತನಾಡಿ, ಅದು ಮತ್ತೇನೋ ಆಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿಬಿಟ್ಟರೆ ಕಷ್ಟ ಅಂತ ಯೋಚಿಸ್ತಾರೆ. ಆದರೆ ಬಹುಭಾಷಾ ನಟಿ ರೆಜಿನಾ ಕಸೆಂದ್ರ ಇದಕ್ಕೆ ತದ್ವಿರುದ್ಧ. ಈ ಹಿಂದೆ ಕೂಡ ಈಕೆ ಇದೇ ರೀತಿ ಬೋಲ್ಡ್ ಆಗಿ ಮಾತನಾಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರೆಜಿನಾ ಹುಡುಗರ ಲೈಂಗಿಕ ಸಾಮರ್ಥ್ಯ ಬಗ್ಗೆ ಹಸಿ ಜೋಕ್ ಹೇಳಿ ಶಾಕ್ ಕೊಟ್ಟಿದ್ದಾರೆ.

  ರೆಜಿನಾ ಕಸೆಂದ್ರ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. 'ಆ ದಿನಗಳು' ಚೇತನ್ ನಟನೆಯ 'ಸೂರ್ಯಕಾಂತಿ' ಚಿತ್ರದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದರು. ಸದ್ಯ ಈಕೆ ನಿವೇತಾ ಥಾಮಸ್ ಜೊತೆ 'ಶಾಕಿನಿ ಡಾಕಿನಿ' ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ಇಬ್ಬರು ಸಿನಿಮಾ ಪ್ರಮೋಷನ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಇಬ್ಬರು ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

  ಮಗುವನ್ನು ಪತಿಯಿಂದ ಬೇರೆ ಮಾಡಲ್ಲ: ಮಾಜಿ ಪತಿ ಬಗ್ಗೆ ಮಹಾಲಕ್ಷ್ಮಿಮಗುವನ್ನು ಪತಿಯಿಂದ ಬೇರೆ ಮಾಡಲ್ಲ: ಮಾಜಿ ಪತಿ ಬಗ್ಗೆ ಮಹಾಲಕ್ಷ್ಮಿ

  ಸುಧೀರ್ ವರ್ಮಾ 'ಶಾಕಿನಿ ಡಾಕಿನಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸೆಪ್ಟೆಂಬರ್ 16ರಂದು ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರೆಜಿನಾ ಮತ್ತು ನಿವೇದಾ ಥಾಮಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸುರೇಶ್ ಬಾಬು ಡಿ, ಸುನಿತಾ ಮತ್ತು ಥಾಮಸ್ ಕಿನ್ ಚಿತ್ರವನ್ನು ನಿರ್ಮಿಸಿದ್ದಾರೆ. ಮಿಕ್ಕಿ ಜೆ ಮೇಯರ್ ಸಂಗೀತ ಸಂಯೋಜಿಸಿದ್ದಾರೆ.

   2 ನಿಮಿಷದ ಜೋಕ್ ಬೇಡ ಎಂದುಕೊಂಡ ರೆಜಿನಾ

  2 ನಿಮಿಷದ ಜೋಕ್ ಬೇಡ ಎಂದುಕೊಂಡ ರೆಜಿನಾ

  ಫುಡ್‌ ಯೂಟ್ಯೂಬ್‌ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಊಟ ಮಾಡುತ್ತಾ ಮಾತನಾಡಿದ್ದಾರೆ. ಈ ನಡುವೆ ಮ್ಯಾಗಿ ನೂಡಲ್ಸ್ ಬಗ್ಗೆ ಮಾತು ಬಂದಿದೆ. ಪುರುಷ ಆಂಕರ್ "ಮ್ಯಾಗಿ ಬಗ್ಗೆ ಒಂದು ಜೋಕ್ ಇದೆ ಏನಂದ್ರೆ, ಮ್ಯಾಗಿ 2 ನಿಮಿಷದಲ್ಲಿ ರೆಡಿ ಆಗುತ್ತೆ. ಆದರೆ ಹುಡುಗಿಯರು 2 ನಿಮಿಷಕ್ಕೆ ಮೇಕಪ್ ಹಾಕಿಕೊಂಡು ರೆಡಿ ಆಗುವುದಿಲ್ಲ" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೆಜಿನಾ "ನನಗೂ ಕೂಡ ಇದರ ಬಗ್ಗೆ ಒಂದು ಜೋಕ್ ಗೊತ್ತು. ಆದರೆ ಈಗ ಹೇಳಬಹುದೋ ಬೇಡವೋ ಗೊತ್ತಿಲ್ಲ" ಎಂದು ಜೋಕ್ ಹೇಳುವುದನ್ನು ತಡೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗಿದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತಿತ್ತು.

   ಹುಡುಗ್ರು ಮತ್ತು ಮ್ಯಾಗಿ ಒಂದೇ.. 2 ನಿಮಿಷ

  ಹುಡುಗ್ರು ಮತ್ತು ಮ್ಯಾಗಿ ಒಂದೇ.. 2 ನಿಮಿಷ

  ರೆಜಿನಾ ಅಷ್ಟು ಹೇಳುತ್ತಿದ್ದಂತೆ ಆಂಕರ್ ಸುಮ್ಮನಾಗಿದ್ದರೆ ಚೆನ್ನಾಗಿತ್ತು. ಆದರೆ ಆತ ಹುಡುಗರ ಮೇಲೆ ಬೇಡ, ನನಗೆ ಹೇಳಿ ಎಂದಿದ್ದಾನೆ. ಕೂಡಲೇ ರೆಜಿನಾ "ಹುಡುಗರು, ಮ್ಯಾಗಿ ಎರಡೂ ಒಂದೇ.. 2 ನಿಮಿಷದಲ್ಲಿ ಮುಗಿದು ಹೋಗುತ್ತೆ" ಎಂದುಬಿಟ್ಟಿದ್ದಾರೆ. ಅದರ ಅರ್ಥ ಆಂಕರ್‌ಗೆ ಮೊದಲಿಗೆ ಗೊತ್ತಾಗಲಿಲ್ಲ. ಅದನ್ನು ಗಮನಿಸಿದ ರೆಜಿನಾ, ನಿನಗೆ ನನ್ನ ಜೋಕ್ ಅರ್ಥ ಆಗಿಲ್ಲ ಅನ್ನಿಸ್ತಿದೆ ಎಂದಿದ್ದಾರೆ. ಅಷ್ಟೊತ್ತಿಗೆ ಏನೋ ಹೊಳೆದಂತೆ ಆಂಕರ್ ಹೂಂ ನನಗೂ ಅರ್ಥ ಆಯ್ತು, ಸಾಕು ಇಲ್ಲಿಗೆ ಬಿಡಿ ಎಂದು ತಲೆ ಮೇಲೆ ಕೈ ಇಟ್ಟುಕೊಂಡಿದ್ದಾನೆ.

   ರೆಜಿನಾ ಜೋಕ್ ಕೇಳಿ ನಗುತ್ತಿದ್ದ ನಿವೇದಾ

  ರೆಜಿನಾ ಜೋಕ್ ಕೇಳಿ ನಗುತ್ತಿದ್ದ ನಿವೇದಾ

  ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ರೆಜಿನಾ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ ಎಂದು ನೆಟ್ಟಿಗರು ಅಂದುಕೊಂಡಿದ್ದಾರೆ. ಇಂತಹ ಹಸಿ ಜೋಕ್ ರೆಜಿನಾ ಬಹಿರಂಗವಾಗಿ ಹೇಳಿದ್ದು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಇನ್ನು ರೆಜಿನಾ ಜೋಕ್ ಹೇಳುವಾಗ ಮತ್ತೊಬ್ಬ ನಾಯಕಿ ನಿವೇತಾ ಥಾಮಸ್ ಕೂಡ ಇದ್ದರು. ಆಕೆ ಮಾತ್ರ ಬಿರಿಯಾನಿ ತಿನ್ನುತ್ತಾ ತಲೆ ತಗ್ಗಿಸಿ ಬಿದ್ದು ಬಿದ್ದು ನಕ್ಕಿದ್ದಾರೆ.

   ಆಕೆ ಹೇಳಿದ ಜೋಕ್ ಅರ್ಥ ಅದಲ್ವಾ?

  ಆಕೆ ಹೇಳಿದ ಜೋಕ್ ಅರ್ಥ ಅದಲ್ವಾ?

  ಕೆಲವರು ಮಾತ್ರ ರೆಜಿನಾ ಜೋಕ್‌ಗೆ ಏನೇನೋ ಅರ್ಥ ಕಲ್ಪಿಸಬೇಡಿ. ಆಕೆ ಹೇಳಿದ್ದು 2 ನಿಮಿಷದಲ್ಲಿ ಹುಡುಗಿಯರನ್ನು ನೋಡಿ ಹುಡುಗರು ಪ್ರೀತಿ ಬೀಳ್ತಾರೆ ಅಂತ ಎನ್ನುತ್ತಿದ್ದಾರೆ. ಆದರೆ ಬಹುತೇಕ ರೆಜಿನಾ ಹೇಳಿದ್ದು ಅದೇ ಅರ್ಥದಲ್ಲಿ ಎಂದು ವಾದ ಮಾಡುತ್ತಿದ್ದಾರೆ. ಒಟ್ನಲ್ಲಿ ರೆಜಿನಾ ಹೇಳಿದ ಒಂದೇ ಒಂದು ಜೋಕ್‌ನಿಂದ 'ಶಾಕಿನಿ ಡಾಕಿನಿ' ಚಿತ್ರಕ್ಕೆ ಒಳ್ಳೆ ಪ್ರಚಾರ ಸಿಕ್ಕಂತಾಗಿದೆ. ಈ ಸಿನಿಮಾ ಬರುತ್ತಿರುವುದೇ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ಆದರೆ ಈ ಜೋಕ್‌ನಿಂದ ಕೆಲವರಿಗಂತೂ ಗೊತ್ತಾದಂತಾಗಿದೆ.

  English summary
  Actress Regina cassandra Bold Joke on boys Love Making capacity Goes Viral. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X