For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್, ಅಲ್ಲು, ಮಹೇಶ್ ಗೆ ತಾಯಿಯಾಗಿ ನಟಿಸಲು ಸಿದ್ಧ: ಪವನ್ ಕಲ್ಯಾಣ್ ಮಾಜಿ ಪತ್ನಿ

  |

  ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿ ರೇಣು ದೇಸಾಯಿ ಸದ್ಯ ಅಭಿನಯದ ದಿಂದ ದೂರ ಉಳಿದಿದ್ದಾರೆ. ತೆಲುಗಿನಲ್ಲಿ ಮೂರು ಸಿನಿಮಾಗಳನ್ನು ಮಾಡಿರುವ ರೇಣು ಆನಂತರ ಮತ್ಯಾವ ಸಿನಿಮಾಗಳಲ್ಲಿಯೂ ಅಭಿನಯಿಸಿಲ್ಲ.

  ನಮ್ಮ ಮಕ್ಕಳಿಗಾಗಿ ಕೊರೊನ ವಿರುದ್ಧ ಹೊರಡೋಣ ಅಂತಾರೆ ನಿರ್ದೇಶಕ ಮಹೇಶ್ | Mahesh | Beatcorona | Awareness

  ಅಭಿನಯದಿಂದ ದೂರ ಉಳಿದ ನಂತರ ರೇಣು ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸದ್ಯ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದು, ಅದೂ ಪೋಷಕ ಪಾತ್ರಗಳಿಗೆ. ಹೌದು, ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲು ರೆಡಿಯಾಗಿರುವ ರೇಣು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಸ್ಟಾರ್ ನಟರಿಗೆ ತಾಯಿಯಾಗಿ ನಟಿಸಲು ಸಿದ್ಧ ಎಂದು ಹೇಳಿದ್ದಾರೆ. ಮುಂದೆ ಓದಿ..

  2ನೇ ಇನ್ನಿಂಗ್ಸ್ ಪ್ರಾರಂಬಿಸಲು ಪವನ್ ಮಾಜಿ ಪತ್ನಿ ಸಿದ್ಧ

  2ನೇ ಇನ್ನಿಂಗ್ಸ್ ಪ್ರಾರಂಬಿಸಲು ಪವನ್ ಮಾಜಿ ಪತ್ನಿ ಸಿದ್ಧ

  ಪವನ್ ಕುಮಾರ್ ಮಾಜಿ ಪತ್ನಿ ರೇಣು ದೇಸಾಯಿ ಮತ್ತೆ ಬಣ್ಣ ಹಚ್ಚಲು ತಯಾರಾಗಿದ್ದಾರೆ. ಅನೇಕ ವರ್ಷಗಳ ಬಳಿಕ ರೇಣು ನಟನೆ ಮಾಡಲು ಮನಸು ಮಾಡಿರುವುದು ಅಚ್ಚರಿ ಮೂಡಿಸಿದೆ. ಉತ್ತರ ಭಾರತದ ರೇಣು ದೇಸಾಯಿ ಖ್ಯಾತಿಗಳಿಸಿದ್ದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ. ನಂತರ ಪವನ್ ಕಲ್ಯಾಣ್ ಮದುವೆಯಾಗಿ ತೆಲುಗು ಚಿತ್ರರಂಗದಲ್ಲಿಯೆ ಗಟ್ಟಿಯಾಗಿ ಬೇರುರಿದ್ದಾರೆ.

  2003ರ ನಂತರ ಸಿನಿಮಾ ಮಾಡಿಲ್ಲ ರೇಣು

  2003ರ ನಂತರ ಸಿನಿಮಾ ಮಾಡಿಲ್ಲ ರೇಣು

  ನಟಿ ಮತ್ತು ಮಾಡೆಲ್ ರೇಣು ದೇಸಾಯಿ ಕೊನೆಯದಾಗಿ ಬಣ್ಣಹಚ್ಚಿದ್ದು, ಜಾನಿ ಸಿನಿಮಾದಲ್ಲಿ. 2003ರಲ್ಲಿ ರಿಲೀಸ್ ಆಗಿದ್ದ ಜಾನಿ ಚಿತ್ರದಲ್ಲಿ ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ರೇಣು ಮೊದಲ ಬಾರಿಗೆ ಅಭಿನಯಿಸಿದ್ದು ಸಹ ಪವನ್ ಕಲ್ಯಾಣ್ ಸಿನಿಮಾದಲ್ಲಿ. ಭದ್ರಿ ಸಿನಿಮಾದಲ್ಲಿ ಪವನ್ ಗೆ ನಾಯಕಿಯಾಗಿ ಕಾಣಸಿಕೊಳ್ಳುವ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

  ಗುಜರಾತಿ ಸುಂದರಿ ರೇಣು ದೇಸಾಯಿ

  ಗುಜರಾತಿ ಸುಂದರಿ ರೇಣು ದೇಸಾಯಿ

  ರೇಣು ದೇಸಾಯಿ ಮೂಲತಹ ಗುಜರಾತಿಯವರು. ಮಾಡಲಿಂಗ್ ಮೂಲಕ ಬಣ್ಣದ ಗೀಳು ಬೆಳೆಸಿಕೊಂಡಿದ್ದ ರೇಣು ನಂತರ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಭದ್ರಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಡುತ್ತಾರೆ. ಪವನ್ ಕಲ್ಯಾಣ್ ಜೊತೆ ಎರಡು ಸಿನಿಮಾ ಮತ್ತು ತಮಿಳಿನಲ್ಲಿ ಒಂದು ಸಿನಿಮಾ ಮಾಡಿದ್ದಾರೆ.

  2009ರಲ್ಲಿ ಪವನ್ ಕಲ್ಯಾಣ್ ಜೊತೆ ಮದುವೆ

  2009ರಲ್ಲಿ ಪವನ್ ಕಲ್ಯಾಣ್ ಜೊತೆ ಮದುವೆ

  ಸಿನಿಮಾದಲ್ಲಿ ಆಕ್ವೀಟ್ ಆಗಿದ್ದ ರೇಣು ಜಾನಿ ಸಿನಿಮಾದ ನಂತರ ಮತ್ತೆ ಬಣ್ಣ ಹಚ್ಚಿಲ್ಲ. ಆ ನಂತರ ನಿರ್ಮಾಪಕಿಯಾಗಿ ಕಾಣಿಸಿಕೊಂಡರು. ಐದಾರು ಸಿನಿಮಾಗಳಿಗೆ ಬಂಡವಾಳ ಹೂಡಿದ ದೇಸಾಯಿ ಆ ನಂತರ 2009ರಲ್ಲಿ ಪವನ್ ಕಲ್ಯಾಣ್ ಜೊತೆ ಮದುವೆಯಾಗುತ್ತಾರೆ. ಆಗಲೆ ಪವನ್ ಗೆ ಮದುವೆಯಾಗಿತ್ತು. ರೇಣು ಎರಡನೆ ಪತ್ನಿಯಾಗಿ ಪವನ್ ಜೊತೆ ಹಸೆಮಣೆ ಏರುತ್ತಾರೆ.

  2012ರಲ್ಲಿ ವಿಚ್ಛೇದನ

  2012ರಲ್ಲಿ ವಿಚ್ಛೇದನ

  ಮದುವೆಯಾಗಿ ಕೇವಲ 3 ವರ್ಷದಲ್ಲೇ ಪವನ್ ಕಲ್ಯಾಣ್ ಯಿಂದ ದೂರ ಆಗುತ್ತಾರೆ. 2012ರಲ್ಲಿ ರೇಣು ಮತ್ತು ಪವನ್ ಕಲ್ಯಾಣ್ ಇಬ್ಬರು ವಿಚ್ಛೇದನ ಪಡೆದು ದೂರ ದೂರ ಆಗುತ್ತಾರೆ. ಪವನ್ ಮತ್ತು ರೇಣುಗೆ ಇಬ್ಬರು ಮಕ್ಕಳಿದ್ದಾರೆ. ಅನೇಕ ವರ್ಷಗಳಿಂದ ಸಿನಿಮಾದಿಂದ ದೂರ ಇದ್ದ ರೇಣು, 2014ರಲ್ಲಿ "ಇಷ್ಕ್ ವಾಲಾ ಲವ್' ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಮತ್ತೆ ವಾಪಸ್ ಆಗಿದ್ದಾರೆ.

  ಮತ್ತೆ ಬಣ್ಣಹಚ್ಚಲು ಸಿದ್ಧತೆ

  ಮತ್ತೆ ಬಣ್ಣಹಚ್ಚಲು ಸಿದ್ಧತೆ

  ನಟಿ ರೇಣು ದೇಸಾಯಿ ಸದ್ಯ ಮತ್ತೆ ಬಣ್ಣಹಚ್ಚಲು ಸಿದ್ಧರಾಗಿದ್ದಾರೆ. ಅದೂ ಪೊಷಕ ನಟಿಯಾಗಿ. "ಪಾತ್ರ ಸ್ಟ್ರಾಂಗ್ ಆಗಿದ್ದರೆ ಒಂದು ಸಿನಿಮಾ ಅಥವಾ ಒಂದು ಗಂಟೆಯ ಪಾತ್ರವಾದರು ಮಾಡುತ್ತೇನೆ. ಮತ್ತು ಸಿನಿಮಾ ಸಹಿ ಮಾಡುವ ಮೊದಲು ನಿರ್ದೇಶಕರ ಜೊತೆ ಕಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತೆ" ಎಂದು ಹೇಳಿದ್ದಾರೆ

  ಸ್ಟಾರ್ ನಟರ ತಾಯಿ ಪಾತ್ರ ಮಾಡುತ್ತೀರಾ?

  ಸ್ಟಾರ್ ನಟರ ತಾಯಿ ಪಾತ್ರ ಮಾಡುತ್ತೀರಾ?

  ಸ್ಟಾರ್ ನಟರಿಗೆ ತಾಯಿಯ ಪಾತ್ರ ಮಾಡುತ್ತೀರಾ ಅಂತ ಕೇಳಿದ ಪ್ರಶ್ನೆಗೆ ರೇಣು, " ಮಹೇಶ್ ಬಾಬು, ಪ್ರಭಾಸ್, ಮತ್ತು ಅಲ್ಲು ಅರ್ಜುನ್ ಅವರ ಬಾಲ್ಯದ ತಾಯಿಯಾಗಿ ನಟಿಸಲು ಸಿದ್ಧ. ಕೊನೆಯದಾಗಿ ನಾವೆಲ್ಲರೂ ಕಲಾವಿದರು. ಯಾವ ಪಾತ್ರ ಮಾಡಬೇಕು ಎನ್ನುವುದು ನಿರ್ದೇಶಕ ದೃಷ್ಟಿಯಾಗಿದ್ದರೆ, ನಾನು ಖಂಡಿತ ಆ ಪಾತ್ರ ಮಾಡುತ್ತೇನೆ. ನಾನು ಎಲ್ಲರಿಗೂ ಸಾರ್ವತ್ರಿಕ ತಾಯಿಯಾಗುತ್ತೇನೆ. ಆಗ ಎಲ್ಲರೂ ನನ್ನನ್ನು "ರೇಣು ಅಮ್ಮಗಾರು" ಎಂದು ಕರೆಯುತ್ತಾರೆ" ಎಂದು ರೇಣು ಹೇಳಿದ್ದಾರೆ.

  ರಶ್ಮಿಕಾ ಮಂದಣ್ಣ ರೇಣು ನೆಚ್ಚಿನ ನಟಿ

  ರಶ್ಮಿಕಾ ಮಂದಣ್ಣ ರೇಣು ನೆಚ್ಚಿನ ನಟಿ

  ರೇಣು ದೇಸಾಯಿ ಅವರಿಗೆ ನಿರ್ದೇಶದಲ್ಲಿಯೂ ಹೆಚ್ಚು ಆಸಕ್ತಿ ಇದೆ. ಒಂದು ವೇಳೆ ನಿರ್ದೇಶನ ಮಾಡುವುದಾದರೆ ನಟಿ ರಶ್ಮಿಕಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡುತ್ತಾರೆ. ರಶ್ಮಿಕಾ ಅಂದರೆ ತುಂಬ ಇಷ್ಟವಂತೆ. ಸದ್ಯ ರೇಣು ದೇಸಾಯಿ ಬಣ್ಣಹಚ್ಚುತ್ತಾರೆ ಎನ್ನುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ರೇಣು ಯಾವ ಪಾತ್ರ ಮಾಡುತ್ತಾರೆ ಎಂದು ಕಾದು ನೋಡಬೇಕು.

  English summary
  Actor Pawan Kalyan ex wife Renu Desai will ready to play childhoodmother role Mahesh babu, Prabhas and Allu Arjun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X