Rithu Chowdary: ನಾಗ ಚೈತನ್ಯರನ್ನು ಮದುವೆಯಾಗುವುದೇ ತನ್ನ ಟಾರ್ಗೆಟ್ ಎಂದ ನಟಿ!
ತೆಲುಗು ಚಿತ್ರರಂಗದ ಜನಪ್ರಿಯ ನಟರಲ್ಲಿ ನಾಗ ಚೈತನ್ಯ ಕೂಡ ಒಬ್ಬರು. ನಟಿ ಸಮಂತಾ ಅವರ ಮಾಜಿ ಪತಿಯಾಗಿರುವ ಅವರ ಮದುವೆ ಸುದ್ದಿಯೇ ಇತ್ತೀಚೆಗೆ ಭಾರೀ ಚರ್ಚೆಯಲ್ಲಿದೆ. ಎರಡನೇ ಮದುವೆಗೆ ನಾಗ ಚೈತನ್ಯ ರೆಡಿಯಾಗುತ್ತಿದ್ದಾರೆ ಎಂದು ಕೆಲ ದಿನಗಳ ಹಿಮದಷ್ಟೇ ವರದಿಯಾಗಿತ್ತು.
ನಟ ನಾಗ ಚೈತನ್ಯ 2021 ರಲ್ಲಿ ನಟಿ ಸಮಂತಾ ರುತ್ ಪ್ರಭು ಅವರಿಂದ ವಿಚ್ಛೇದನ ಪಡೆದ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ಸ್ಟಾಪ್ ಇಟ್ಟಿದ್ದರು. ಇದಾದ ನಂತರ ಅವರು ಮತ್ತೆ ಒಂದಾಗುತ್ತಾರೆ ಎಂಬ ಗುಸು ಗುಸು ಕೂಡ ಕೇಳಿಬರುತ್ತಿತ್ತು. ಇದೆ ನಡುವೆಯೇ ನಟಿ ಸೋಭಿತಾ ಧುಲಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಈ ವದಂತಿಯ ಬೆನ್ನಲ್ಲೆ ಉದ್ಯಮಿಯೊಬ್ಬರ ಮಗಳನ್ನು ಮದುವೆಯಾಗಿತ್ತಾರೆ ಎಂಬ ವರದಿ ಕಳೆದ ವಾರವಷ್ಟೇ ಚರ್ಚೆಗೆ ಬಂದಿತ್ತು. ಒಟ್ಟಾರೆ ನಾಗ ಚೈತನ್ಯ ಸಮಂತಾ ಅವರಿಂದ ಬೇರೆಯಾದಾಗಿನಿಂದ ಮದುವೆ, ರಿಲೇಷನ್‌ಶಿಪ್ ವಿಷಯಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಈಗ ನಟಿಯೊಬ್ಬರು ನಾಗ ಚೈತನ್ಯರನ್ನು ಮದುವೆಯಾಗುವುದೇ ತನ್ನ ಟಾರ್ಗೆಟ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ನಾಗ ಚೈತನ್ಯರನ್ನು ಮದುವೆಯಾಗುವುದೇ ತನ್ನ ಟಾರ್ಗೆಟ್ !
ನಟಿ ರಿತು ಚೌಧರಿ ಕೂಡ ನಾಗ ಚೈತನ್ಯ ಜೊತೆ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತಾನು ಚೈತನ್ಯರನ್ನು ಇಷ್ಟಪಡುವುದಾಗಿಯು, ಅವರನ್ನು ಮದುವೆಯಾಗುವುದು ತನ್ನ ಗುರಿಯಾಗಿದೆ ಎಂದು ಹೇಳಿ ತೆಲುಗು ಸಿನಿರಂಗದಲ್ಲಿ ಮತ್ತೊಂದು ಅಚ್ಚರಿಗೆ ಕಾರಣವಾಗಿದ್ದಾರೆ.

ಅವರ ಈ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಜೊತೆಗೆ ಹಲವು ಮಂದಿ ಕಾಮೆಂಟ್ ಮೂಲಕ ಆಕೆಯನ್ನು ಪ್ರಶ್ನಿಸುತ್ತಿದ್ದಾರೆ. ನೆಟ್ಟಿಗರಲ್ಲಿ ಒಬ್ಬರು ವಿಚ್ಛೇದಿತ ವ್ಯಕ್ತಿಯನ್ನು ಮದುವೆಯಾಗಲು ನೀವು ಭಯಪಡುವುದಿಲ್ಲವೇ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಿತು ಚೌಧರಿ ತನಗೆ ಯಾವುದೇ ಹಿಂಜರಿಕೆ ಇಲ್ಲ, ಅವರನ್ನು ಮದುವೆಯಾಗುವುದು ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ನಾಗ ಚೈತನ್ಯ ಇನ್ನೂ ಪ್ರತಿಕ್ರಿಯಿಸಿಲ್ಲ.
ಗೊರಿಂಟಾಕು ಧಾರಾವಾಹಿ ಮತ್ತು ಜಬರ್ದಸ್ತ್ ಧಾರಾವಾಹಿಯಲ್ಲಿನ ಅಭಿನಯದ ಮೂಲಕ ರಿತು ಚೌಧರಿ ಖ್ಯಾತಿ ಗಳಿಸಿದ್ದಾರೆ. ಗೊರಿಂಟಾಕು ಧಾರಾವಾಹಿಯಲ್ಲಿ ರಿತು ಗಾಯತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ.
ನಾಗ ಚೈತನ್ಯ
ಲಾಲ್ ಸಿಂಗ್ ಚಡ್ಡಾ ಪ್ರಚಾರದ ಸಮಯದಲ್ಲಿ ನಾಗ ಚೈತನ್ಯ ಅವರು ಸೋಭಿತಾ ಧುಲಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಡಿತ್ತಿ. ಈ ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ಮಾತನಾಡಿ, ಇಂತಹ ವಿಷಯಗಳಿಗೆ ನಕ್ಕು ಸುಮ್ಮನಾಗುತ್ತೇನೆ ಎಂದಿದ್ದರು.
ಸಮಂತಾರಿಂದ ವಿಚ್ಛೇದನ ಪಡೆದ ಬಗ್ಗೆ ಮಾತನಾಡುತ್ತಾ, "ನಮ್ಮ ವಿಷಯದಲ್ಲಿ, ಸಮಂತಾ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ. ನಾನು ಕೂಡ ಮುಂದುವರೆದಿದ್ದೇನೆ. ಅದರ ಬಗ್ಗೆ ಜಗತ್ತಿಗೆ ತಿಳಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ." ಎಂದಿದ್ದರು. ಇನ್ನು, ಚೈತನ್ಯ ಉದ್ಯಮಿ ಒಬ್ಬರ ಮಗಳನ್ನು ಎರಡನೇ ಬಾರಿಗೆ ಮದುವೆಯಾಗಿದ್ದಾರೆ ಎಂಬ ವರದಿಗಳನ್ನು ಸಹ ತಳ್ಳಿಹಾಕಲಾಗಿದೆ.
ಚೈತನ್ಯ ಕೊನೆಯದಾಗಿ ವೆಂಕಟ್ ಪ್ರಭು ನಿರ್ದೇಶನದ ಕಸ್ಟಡಿ ಚಿತ್ರದಲ್ಲಿ ನಟಿಸಿದ್ದರು. ಇದು ಉತ್ತಮ ವಿಮರ್ಶೆ ಪಡೆಯಲಿಲ್ಲ. ಪೊಲೀಸ್ ಕಸ್ಟಡಿಯಿಂದ ನ್ಯಾಯಾಲಯದ ಕೋಣೆಗೆ ಸಾಕ್ಷಿಯನ್ನು ಬೆಂಗಾವಲು ಮಾಡಲು ನಿಯೋಜಿಸಲಾದ ಕಾನ್‌ಸ್ಟೆಬಲ್ ಶಿವನ ಸುತ್ತ ಕಸ್ಟಡಿ ಸಿನಿಮಾ ಸುತ್ತುತ್ತದೆ. ಈಗ ಲವ್ ಸ್ಟೋರಿ ಸಿನಿಮಾದಲ್ಲಿ ಜೋಡಿಯಾಗಿದ್ದ ನಟಿ ಸಾಯಿ ಪಲ್ಲವಿ ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











