ಬ್ಲೂ ಫಿಲಂನಲ್ಲಿ ನಟಿಸಿದ್ದಾಳೆ ಎಂದೆ, ಈಗ ಅನುಭವಿಸು: ಮಾಜಿ ಸಿಎಂ ಬಗ್ಗೆ ರೋಜಾ ಆಕ್ರೋಶ

ಆಂಧ್ರಪ್ರದೇಶದಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅಂತರ ಬಹಳ ಕಡಿಮೆ. ಆಂಧ್ರ ರಾಜ್ಯ ಹಲವು ವರ್ಷಗಳ ಕಾಲ ಸಿನಿಮಾ ಮಂದಿಯ ಆಡಳಿತದಲ್ಲೇ ಇತ್ತು. ಈಗಲೂ ಅಲ್ಲಿನ ಪ್ರಮುಖ ರಾಜಕಾರಣಿಗಳಲ್ಲಿ ಹಲವರು ಸಿನಿಮಾ ಮಂದಿಯೇ.

ಆಂಧ್ರ ರಾಜಕೀಯ ಸಹ ಸಿನಿಮಾ ಕತೆಗಳ ರೀತಿ ಬಹಳ ನಾಟಕೀಯ. ನಟರಾಗಿದ್ದ ಎನ್‌ಟಿಆರ್ ಪಕ್ಷ ಕಟ್ಟಿ 75 ದಿನಗಳಲ್ಲಿ ಸಿಎಂ ಆಗಿದ್ದು, ನಂತರ ಅವರದ್ದೇ ಪಕ್ಷದಿಂದ ಅವರನ್ನು ಹೊರಗೆ ಕಳಿಸಿದ್ದು, ಬಹಿರಂಗವಾಗಿ ಅವರ ಮೇಲೆ ಚಪ್ಪಲಿ ಎಸೆದಿದ್ದು. ಪಾದಯಾತ್ರೆ ಮೂಲಕ ರಾಜಶೇಖರ ರೆಡ್ಡಿ ಅಧಿಕಾರಕ್ಕೆ ಬಂದದ್ದು, ಅವರ ಅಕಾಲಿಕ ಸಾವು ಹಾಗೂ ಆ ನಂತರ ಜಗನ್ ಮೋಹನ್‌ರೆಡ್ಡಿ ಜೈಲು ಪಾಲಾಗಿ ಬಳಿಕ ಭಾರಿ ಬಹುಮತದೊಂದಿಗೆ ಸಿಎಂ ಆಗಿದ್ದು ಎಲ್ಲವೂ ಒಂದು ರೀತಿ ಸಿನಿಮೀಯವಾಗಿಯೇ ಕಾಣುತ್ತವೆ. ಆಂಧ್ರದಲ್ಲಿ ರಾಜಕೀಯ ಕೊಲೆಗಳ ದೊಡ್ಡ ಇತಿಹಾಸವೇ ಇದೆ. ಆಂಧ್ರದ ಸಿನಿಮಾಗಳು ರಾಜಕೀಯದಿಂದ ಪ್ರೇರಣೆ ಪಡೆದರೆ ರಾಜಕೀಯ ಸಿನಿಮಾದಿಂದ ಪ್ರೇರಣೆ ಪಡೆಯುತ್ತದೆ.

ಪ್ರಸ್ತುತ ಈಗ ಆಂಧ್ರ ರಾಜಕೀಯದಲ್ಲಿ ಬಹಳ ಚರ್ಚೆಗೆ ಕಾರಣವಾಗಿರುವುದು ಚಂದ್ರಬಾಬು ನಾಯ್ಡು ಕಣ್ಣೀರು. ಮಾಧ್ಯಮಗಳ ಮುಂದೆ ಚಂದ್ರಬಾಬು ನಾಯ್ಡು ಬಿಕ್ಕಿ-ಬಿಕ್ಕಿ ಅತ್ತದ್ದನ್ನು ಹಲವು ಪಕ್ಷಗಳ ಮುಖಂಡರು ಹಲವರು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಈ ನಡುವೆ ಆಡಳಿತ ಪಕ್ಷದ ಸದಸ್ಯರು ಮಾತ್ರ ಚಂದ್ರಬಾಬು ನಾಯ್ಡು ಅತ್ತಿದ್ದನ್ನು ಮೊಸಳೆ ಕಣ್ಣೀರೆಂದು ಟೀಕಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರ ಮಾಜಿ ಆಪ್ತೆ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ರೋಜಾ ಸಹ ಅವರಲ್ಲಿ ಒಬ್ಬರು.

ಚಂದ್ರಬಾಬು ನಾಯ್ಡು ಪಕ್ಷದಲ್ಲಿ ಸುಮಾರು ಹತ್ತು ವರ್ಷ ಇದ್ದ ರೋಜಾ ಇದೀಗ ಜಗನ್ ಮೋಹನ್ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್‌ನ ಶಾಸಕಿ. ಚಂದ್ರಬಾಬು ನಾಯ್ಡು ಬಹಿರಂಗವಾಗಿ ಕಣ್ಣೀರು ಹಾಕಿದ್ದು ನೋಡಿ ಬಹಳ ಖುಷಿಯಾಗಿರುವ ರೋಜಾ. ''ಇದು ನಿನ್ನದೇ ಪಾಪದ ಫಲ, ಆ ದೇವರು ನೀಡಿದ ಶಿಕ್ಷೆ ಅನುಭವಿಸು'' ಎಂದಿದ್ದಾರೆ.

ಎನ್‌ಟಿಆರ್‌ಗೆ ಕಣ್ಣೀರು ಹಾಕಿಸಿದ್ದೆ, ಈಗ ನೀನು ಅಳು: ರೋಜಾ

ಎನ್‌ಟಿಆರ್‌ಗೆ ಕಣ್ಣೀರು ಹಾಕಿಸಿದ್ದೆ, ಈಗ ನೀನು ಅಳು: ರೋಜಾ

ವಿಡಿಯೋ ಒಂದನ್ನು ಪ್ರಕಟಿಸಿರುವ ರೋಜಾ, ''ಕಾಲ ಎಂಬುದೇ ಹೀಗೆ ಎಲ್ಲರಿಗೂ ಪಾಠ ಕಲಿಸುತ್ತದೆ. 72 ವರ್ಷದ ಎನ್‌ಟಿಆರ್ ಕಣ್ಣಲ್ಲಿ ನೀರು ಹಾಕಿಸಿದ್ದೆ ನೀನು. ಈಗ ನಿನಗೆ 71 ವರ್ಷ ವಯಸ್ಸು ಕಾಲ ಈಗ ನಿನ್ನ ಕಣ್ಣಲ್ಲಿ ನೀರು ಹಾಕಿಸುತ್ತಿದೆ. ಇದನ್ನೇ ವಿಧಿ ಎನ್ನುವುದು ನೀನು ಏನು ಮಾಡುತ್ತೀಯೋ ಅದೇ ನಿನಗೆ ಆಗುತ್ತದೆ'' ಎಂದು ಏಕವಚನದ ವಾಗ್ದಾಳಿ ಮಾಡಿದ್ದಾರೆ ರೋಜಾ.

''ಬ್ಲೂ ಫಿಲಂನಲ್ಲಿ ನಟಿಸಿದ್ದಾಳೆ ಎಂದಿದ್ದೆಯಲ್ಲ ಮರೆತುಹೋಯಿತಾ?''

''ಬ್ಲೂ ಫಿಲಂನಲ್ಲಿ ನಟಿಸಿದ್ದಾಳೆ ಎಂದಿದ್ದೆಯಲ್ಲ ಮರೆತುಹೋಯಿತಾ?''

''ಈಗ ನಿನ್ನ ಹೆಂಡತಿಯನ್ನು ಏನೋ ಅಂದುಬಿಟ್ಟರು ಎಂದು ಅಳುತ್ತಿದ್ದೀಯಲ್ಲ, ಅಂದು ಹೈದರಾಬಾದ್ ಅಸೆಂಬ್ಲಿಯಲ್ಲಿ ರೋಜಾ ನೀಲಿ ಚಿತ್ರಗಳಲ್ಲಿ ನಟಿಸುತ್ತಾಳೆ ಎಂದಿದ್ದು ಮರೆತುಬಿಟ್ಟೆಯ. ಪೀತಲ ಸುಜಾತಾ ಜೊತೆ ಸೇರಿಕೊಂಡು ಮಾಧ್ಯಮಗಳ ಮುಂದೆ ಸಿಡಿ ಬಿಡುಗಡೆ ಮಾಡಿದ್ದನ್ನು ಮರೆತುಬಿಟ್ಟೆಯಾ? ನನಗೆ ಕುಟುಂಬ ಇರಲಿಲ್ಲವಾ? ನನಗೆ ಮಕ್ಕಳು ಇರಲಿಲ್ಲವಾ? ಅಧಿಕಾರಲ್ಲಿದ್ದಾಗ ಎಲ್ಲರಿಗೂ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದೆಯಲ್ಲ ಅದೆಲ್ಲ ಮರೆತು ಹೋಯಿತಾ?'' ಎಂದು ಪ್ರಶ್ನೆ ಮಾಡಿದ್ದಾರೆ ರೋಜಾ.

ಮೋದಿಯನ್ನೂ ಬಿಟ್ಟಿಲ್ಲ ನೀನು: ರೋಜಾ

ಮೋದಿಯನ್ನೂ ಬಿಟ್ಟಿಲ್ಲ ನೀನು: ರೋಜಾ

''ಇಂದು ನಿನ್ನ ಈ ಮೊಸಳೆ ಕಣ್ಣೀರನ್ನು ಯಾರೂ ಸಹ ನಂಬುವುದಿಲ್ಲ. ಯಾರೂ ಕನಿಕರ ಸಹ ತೋರುವುದಿಲ್ಲ. ನೀನು ಅಧಿಕಾರದಲ್ಲಿದ್ದಾಗ ಪ್ರಧಾನಿ ಮೋದಿ ಸೇರಿದಂತೆ ಎಲ್ಲ ದೊಡ್ಡ ವ್ಯಕ್ತಿಗಳ ಬಗ್ಗೆ ಎಷ್ಟು ಮಾತನಾಡಿದ್ದೀಯ. ಸಾಮಾಜಿಕ ಜಾಲತಾಣದ ಮೂಲಕ ಎಷ್ಟು ವಿಷ ಕಾರಿದ್ದೀಯ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಂಡಿದ್ದಾರೆ'' ಎಂದಿದ್ದಾರೆ ರೋಜಾ.

ನನಗೆ ನೀನು ಕೊಟ್ಟಿದ್ದ ಕಾಟ ಮರೆತಿಲ್ಲ: ರೋಜಾ

ನನಗೆ ನೀನು ಕೊಟ್ಟಿದ್ದ ಕಾಟ ಮರೆತಿಲ್ಲ: ರೋಜಾ

''ಒಬ್ಬ ಮಹಿಳೆಯಾಗಿ ಇಂದು ನಾನು ಬಹಳ ಖುಷಿಯಾಗಿದ್ದೇನೆ. ಏಕೆಂದರೆ ಮಹಿಳೆ ಎಂಬುದನ್ನು ಸಹ ನೋಡದೆ. ನಿನಗಾಗಿ ಹತ್ತು ವರ್ಷ ಕೆಲಸ ಮಾಡಿದ ನಾಯಕಿ ಎಂದು ನನ್ನನ್ನು ನೋಡದೆ, ನನ್ನ ನಡತೆಯ ಬಗ್ಗೆ ಕೆಟ್ಟ ಸುದ್ದಿಗಳನ್ನು ಹಬ್ಬಿಸಿದೆ, ನಿಯಮಕ್ಕೆ ವಿರುದ್ಧವಾಗಿ ನನ್ನನ್ನು ಒಂದು ವರ್ಷ ಅಮಾನತ್ತು ಮಾಡಿದೆ. ಮಹಿಳಾ ಪಾರ್ಲಿಮೆಂಟ್‌ಗೆ ನನ್ನನ್ನು ಕರೆಸಿ ಅಲ್ಲಿ ನನ್ನನ್ನು ವಶಕ್ಕೆ ಪಡೆದು 24 ಗಂಟೆ ನಾನು ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿದೆ. ಇದರ ದಾಖಲೆಗಳು ಈಗಲೂ ಇವೆ, ಇದನ್ಯಾರೂ ಮರೆತಿಲ್ಲ'' ಎಂದು ಹಳೆಯ ವಿಷಯ ನೆನಪು ಮಾಡಿಕೊಂಡಿದ್ದಾರೆ ರೋಜಾ.

ಶಾಪದಿಂದಲೇ ನಿನಗೆ ಈ ಗತಿ ಬಂದಿದೆ: ರೋಜಾ

ಶಾಪದಿಂದಲೇ ನಿನಗೆ ಈ ಗತಿ ಬಂದಿದೆ: ರೋಜಾ

''ನೀನು ಕಣ್ಣೀರು ಹಾಕಿಸಿದ ವ್ಯಕ್ತಿಗಳ ಶಾಪವೆಲ್ಲ ತಟ್ಟಿ ನೀನು ಇಂದು ಹೀಗೆ ಆಗಿದ್ದೀಯ. ನನ್ನನ್ನು ನಿಯಮ ಬಾಹಿರವಾಗಿ ಒಂದು ವರ್ಷ ಅಮಾನತು ಮಾಡಿದೆ. ಆದರೆ ಆ ದೇವರು ನಿನ್ನನ್ನು ಕಳೆದ ಎರಡೂ ವರೆ ವರ್ಷದಿಂದ ಅಧಿಕಾರಕ್ಕೆ ದೂರವೇ ಇಟ್ಟಿದ್ದಾನೆ. ನಿನ್ನ ಜೀವ ಇರುವವರೆಗೆ ನೀನು ಅಧಿಕಾರಕ್ಕೆ ಬರುವುದಿಲ್ಲ. ಈ ಜನ್ಮದಲ್ಲಿ ನೀನು ಅಸೆಂಬ್ಲಿಗೆ ಕಾಲಿಡಲು ನಿನ್ನಂದ ಆಗುವುದಿಲ್ಲ, ಬೈ ಬೈ ಬಾಬು'' ಎಂದು ವ್ಯಂಗ್ಯವಾಗಿ ನಗುತ್ತಾ ಮಾತು ಮುಗಿಸಿದ್ದಾರೆ ರೋಜಾ.

ಪತ್ನಿಯನ್ನು ಬೈದರೆಂದು ಕಣ್ಣೀರು ಹಾಕಿದ ಮಾಜಿ ಸಿಎಂ

ಪತ್ನಿಯನ್ನು ಬೈದರೆಂದು ಕಣ್ಣೀರು ಹಾಕಿದ ಮಾಜಿ ಸಿಎಂ

ಅಸೆಂಬ್ಲಿಯಲ್ಲಿ ಆಡಳಿತ ಪಕ್ಷದೊಂದಿಗೆ ಜೋರು ವಾಗ್ವಾದ ನಡೆಸಿದ ಚಂದ್ರಬಾಬು ನಾಯ್ಡು ಮುಖಂಡತ್ವದ ಟಿಡಿಪಿ ಪಕ್ಷದ ಸದಸ್ಯರು ಆಡಳಿತ ಪಕ್ಷದವರ ವಾಗ್ದಾಳಿ ಜೋರಾದ ಬೆನ್ನಲ್ಲೆ ಸಭಾತ್ಯಾಗ ಮಾಡಿದರು. ಆ ನಂತರ ಸುದ್ದಿಗೋಷ್ಠಿ ನಡೆಸಿದ ಬಾಬು, ಆಡಳಿತ ಪಕ್ಷದ ಸದಸ್ಯರ ಬಗ್ಗೆ ದೂರುಗಳನ್ನು ಹೇಳುತ್ತಾ ಅವರೆಲ್ಲ ರೌಡಿಗಳಂತೆ ವರ್ತಿಸುತ್ತಿದ್ದಾರೆ ಎಂದು, ನನ್ನ ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದರು' ಎನ್ನುತ್ತಾ ಅಳಲು ಆರಂಭಿಸಿದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.

More from Filmibeat

English summary
Actress Roja lambasted on former CM Chandrababu Naidu. She said due to his wrong doings only he is in bad situation now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X