For Quick Alerts
  ALLOW NOTIFICATIONS  
  For Daily Alerts

  'ಇನ್ನು ಯಾರನ್ನೂ ಪ್ರೀತಿಸುವುದಿಲ್ಲ': ಮಾಧವನ್ ನಟಿ ಸದಾ ಅಫೇರ್ ಅಸಲಿ ವಿಷಯವೇನು?

  |

  ಮೂಲ ಮಹಾರಾಷ್ಟ್ರ ಆಗಿದ್ದರೂ, ನಟಿ ಸದಾ ಜನಪ್ರಿಯತೆ ಗಳಿಸಿದ್ದು ದಕ್ಷಿಣ ಭಾರತದಲ್ಲಿ. ನಟ ನಿತಿನ್ ಜೊತೆ ನಟಿಸಿದ 'ಜಯಂ' ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತ್ತು. ಇಲ್ಲಿಂದ ಸದಾ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ.

  ಒಂದು ಕಾಲದಲ್ಲಿ ಸದಾ ಒಪ್ಪಿದ ಸಿನಿಮಾಗಳೆಲ್ಲಾ ಹಿಟ್ ಲಿಸ್ಟ್ ಸೇರುತ್ತಿತ್ತು. ದಕ್ಷಿಣ ಭಾರತದ ಫಿಲ್ಮ್ ಮೇಕರ್‌ಗಳಿಗೆ ಈಕೆ ಲಕ್ಕಿ ಚಾರ್ಮ್ ಆಗಿದ್ದರು. ಅಷ್ಟೇ ಅಲ್ಲ ಹುಡುಗರ ಫೇವರಿಟ್ ನಟಿಯಾಗಿದ್ದರು. 'ಅನ್ನಿಯನ್', 'ಜಯಂ', ಅಂತ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರೋ ಸದಾ ಕನ್ನಡದಲ್ಲೂ ನಾಲ್ಕೈದು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಆಮೀರ್ ಖಾನ್ ಬಳಿಕ ನಟ ಮಾಧವನ್ ಗೆ ಕೊರೊನಾ; '3 ಈಡಿಯಟ್ಸ್' ಪೋಸ್ಟರ್ ಹಂಚಿಕೊಂಡ ನಟಆಮೀರ್ ಖಾನ್ ಬಳಿಕ ನಟ ಮಾಧವನ್ ಗೆ ಕೊರೊನಾ; '3 ಈಡಿಯಟ್ಸ್' ಪೋಸ್ಟರ್ ಹಂಚಿಕೊಂಡ ನಟ

  ಸೌಂದರ್ಯ ಹಾಗೂ ನಟನೆ ಯಾವುದರಲ್ಲೂ ಕಮ್ಮಿಯಿರದ ಈ ನಟಿ ಇನ್ನೂ ಮದುವೆ ಆಗಿಲ್ಲ. ಸಕ್ಸಸ್‌ಪುಲ್ ನಟಿ ಸದಾ ಇನ್ನೂ ಯಾಕೆ ಮದುವೆ ಆಗಿಲ್ಲ? ಅಫೇರ್ ಬಗ್ಗೆ ಏನು ಹೇಳಿದ್ದರು ಅನ್ನೋದನ್ನು ಇತ್ತೀಚೆಗೆ ಬಹುಭಾಷಾ ನಟಿ ಸದಾ ರಿವೀಲ್ ಮಾಡಿದ್ದಾರೆ.

  ಸದಾ ದಕ್ಷಿಣ ಭಾರತ ಫೇವರಿಟ್ ನಟಿ

  ಸದಾ ದಕ್ಷಿಣ ಭಾರತ ಫೇವರಿಟ್ ನಟಿ

  ತೆಲುಗು ಸಿನಿಮಾ 'ಜಯಂ' ಹಿಟ್ ಆಗುತ್ತಿದ್ದಂತೆ ಸದಾ ದಕ್ಷಿಣ ಭಾರತದ ಬಹುದು ಬೇಡಿಕೆ ನಟಿಯಾಗಿದ್ದರು. ಇಲ್ಲಿಂದ ಸದಾ ನಟಿಸಿದ ಸಿನಿಮಾಗಳು ಹಿಟ್ ಲಿಸ್ಟ್ ಸೇರಲು ಆರಂಭಿಸಿದ್ದವು. ತೆಲುಗು, ತೆಲುಗು ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಲು ಆರಂಭಿಸಿದ್ದರು. ತೆಲುಗು ತಮಿಳು ಅಷ್ಟ ಕನ್ನಡ ಸಿನಿಮಾಗಳಲ್ಲೂ ಸದಾ ನಟಿಸಿದ್ದರು. ದಕ್ಷಿಣ ಭಾರತದ ಟಾಪ್ ಡೈರೆಕ್ಟರ್‌ಗಳಾದ ಶಂಕರ್, ಕೆ.ಎಸ್ ರವಿಕುಮಾರ್, ಪ್ರಭುದೇವ ಅಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಸಕ್ಸಸ್ ಸಿಕ್ಕಿದ್ದರೂ, ಸದಾ ಇನ್ನೂ ಮದುವೆಯಾಗಿಲ್ಲ.

  ನಟ ಮಾಧವನ್ ವಿಭಿನ್ನ ಅವತಾರಗಳ ಫೋಟೋ ವೈರಲ್; ಗಮನ ಸೆಳೆಯುತ್ತಿದೆ ಶಿವಾಜಿ ಲುಕ್ನಟ ಮಾಧವನ್ ವಿಭಿನ್ನ ಅವತಾರಗಳ ಫೋಟೋ ವೈರಲ್; ಗಮನ ಸೆಳೆಯುತ್ತಿದೆ ಶಿವಾಜಿ ಲುಕ್

  ಸದಾ ಇನ್ನೂ ಮದುವೆಯಾಗಿಲ್ಲ!

  ಸದಾ ಇನ್ನೂ ಮದುವೆಯಾಗಿಲ್ಲ!

  ಬಹುಭಾಷಾ ನಟಿ 40 ರ ಆಸು-ಪಾಸಿನಲ್ಲಿದ್ದಾರೆ. ಆದರೂ ಇನ್ನೂ ಮದುವೆಯಾಗಿಲ್ಲ. ಈ ಬಗ್ಗೆ ಸದಾ ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತಾಡುವಾಗ ಮದುವೆ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ.

  ಮುಂದೆ ಮದುವೆ ಆಗುತ್ತೇನೋ ಇಲ್ಲವೋ ಅನ್ನೋದನ್ನೂ ಹೇಳಿದ್ದಾರೆ. " ನಾನು ಲೈಫ್‌ನಲ್ಲಿ ಖುಷಿಯಾಗಿರಬೇಕು. ಖುಷಿಯಾಗಿರೋ ಬದುಕು ಸಾಗಿಸಬೇಕು. ಯಾರಾದರೂ ಮದುವೆ ಆಗ್ಬೇಕು ಅಂತ ಬಯಸಿದರೆ, ಒಬ್ಬರನ್ನೊಬ್ಬರು ಅವಲಂಬಿಸಿದ್ದರೆ, ಅವರು ಖುಷಿಯಾಗಿರಲು ಸಾಧ್ಯವಿಲ್ಲ. ಸದ್ಯ ನನಗೆ ಮದುವೆ ಯೋಚನೆ ಇಲ್ಲ. ಇನ್ನು ಯಾರನ್ನೂ ಪ್ರೀತಿಸುವುದಿಲ್ಲ. ನನಗೆ ಇಷ್ಟ ಆಗುವ ಹುಡುಗ ಸಿಕ್ಕಿದರೆ ಕಂಡಿತಾ ಮದುವೆಯಾಗುತ್ತೇನೆ." ಎಂದಿದ್ದಾರೆ ಅನ್ನಿಯನ್ ನಟಿ ಸದಾ.

  ಮಾಧವನ್ ಜೊತೆ ಅಫೇರ್?

  ಮಾಧವನ್ ಜೊತೆ ಅಫೇರ್?

  ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾವನ್ನು ಮಾಡಿರೋ ಸದಾ ಮಾಧವನ್ ಜೊತೆನೂ ನಟಿಸಿದ್ದರು. 'ಏತಿರೀ', 'ಪ್ರಿಯಸಖಿ' ಸಿನಿಮಾಗಳಲ್ಲಿ ಇಬ್ಬರೂ ನಟಿಸಿದ್ದಾರೆ. ಈ ವೇಳೆ ಆಗಲೇ ಮದುವೆ ಆಗಿದ್ದ ಮಾಧವನ್‌ ಜೊತೆ ಸದಾ ಅಫೇರ್ ಇಟ್ಟುಕೊಂಡಿದ್ದಾರೆ. ಅಲ್ಲದೆ ಮದುವೆ ಕೂಡ ಆಗಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದು ಸದಾಗೆ ತುಂಬಾನೇ ಬೇಸರ ತರಿಸಿತ್ತಂತೆ. ಆ ವೇಳೆನೂ ಸದಾ ಪ್ರತಿಕ್ರಿಯೆ ನೀಡಿದ್ದರು." ಮಾಧವನ್ ಹಾಗೂ ನಾನು ಇಬ್ಬರೂ ತುಂಬಾ ಒಳ್ಳೆ ಸ್ನೇಹಿತರು. ಅಷ್ಟೇ ಯಾಕೆ ಅವರ ಪತ್ನಿ ಮತ್ತು ನಾನೂ ಇಬ್ಬರೂ ಸ್ನೇಹಿತರು. ನಾವು ಆಗಾಗ ಭೇಟಿ ಮಾಡುತ್ತಿರುತ್ತೇವೆ. ನಾವ್ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ." ಎಂದು ಸದಾ ಹೇಳಿದ್ದರು.

  ಸದಾ ನಟಿಸಿದ ಕನ್ನಡ ಸಿನಿಮಾ

  ಸದಾ ನಟಿಸಿದ ಕನ್ನಡ ಸಿನಿಮಾ

  ಸದಾ ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಕನ್ನಡಕ್ಕೂ ಬಂದಿದ್ದರು. ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದ 'ಮೋನಾಲಿಸಾ' ಸಿನಿಮಾದಲ್ಲಿ ಧ್ಯಾನ್ ಜೊತೆ ನಟಿಸಿದ್ದರು. ಆ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ 'ಮೋಹನಿ', ಶಿವಣ್ಣ ನಟಿಸಿದ 'ಮೈಲಾರಿ', ವಿ ರವಿಚಂದ್ರನ್ ಸಿನಿಮಾ 'ಮಲ್ಲಿಕಾರ್ಜುನಾ'. ಉಪೇಂದ್ರ ನಟಿಸಿದ 'ಆರಕ್ಷಕ'ದಲ್ಲಿ ನಟಿಸಿದ್ದಾರೆ.

  English summary
  Actress Sadha Reaction About Her Marriage And Rumours Marriage With Madhavan, Know More.
  Sunday, August 28, 2022, 11:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X