For Quick Alerts
  ALLOW NOTIFICATIONS  
  For Daily Alerts

  ಲವ್ ಲೆಟರ್ ಬರೆದು ಅಮ್ಮ, ಅಪ್ಪನ ಕೈಯಲ್ಲಿ ಒದೆ ತಿಂದಿದ್ದ ಸಾಯಿ ಪಲ್ಲವಿ!

  |

  ನಟಿ ಸಾಯಿ ಪಲ್ಲವಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿ ಸುದ್ದಿ ಆಗಿದ್ದರು. ಇದೇ ಬೆನ್ನಲ್ಲಿ ಸಾಯಿ ಪಲ್ಲವಿ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿ ಆಗಿದ್ದಾರೆ. ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಸಾಯಿ ಪಲ್ಲವಿ, ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿ ಆಗುತ್ತಿದ್ದಾರೆ. 'ಗಾರ್ಗಿ' ಮೂಲಕ ಸದ್ದು ಮಾಡಿದ್ದ ಸಾಯಿ ಪಲ್ಲವಿ, ಈ ಹಿಂದೆ 'ವಿರಾಟ ಪರ್ವಂ' ಸಿನಿಮಾ ರಿಲೀಸ್ ಆಗಿತ್ತು.

  ಸಾಯಿ ಪಲ್ಲವಿ ಮನವಿ ತಿರಸ್ಕರಿಸಿದ ಕೋರ್ಟ್: ವಿಚಾರಣೆಗೆ ಹಾಜರಾಗಲು ಸೂಚನೆ!ಸಾಯಿ ಪಲ್ಲವಿ ಮನವಿ ತಿರಸ್ಕರಿಸಿದ ಕೋರ್ಟ್: ವಿಚಾರಣೆಗೆ ಹಾಜರಾಗಲು ಸೂಚನೆ!

  ಸದ್ಯ 'ಗಾರ್ಗಿ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಾಯಿ ಪಲ್ಲವಿ ಭಾಗಿ ಆಗಿದ್ದು, ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಜೀವನದಲ್ಲಿ ನಡೆದ ಲವ್ ಲೆಟರ್ ಅವಾಂತರದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅದು ಏನೆಂದು ಮುಂದೆ ಓದಿ...

  ಪುನೀತ್ ರಾಜ್‌ಕುಮಾರ್‌ಗೆ ಆ ಒಂದು ಮಾತು ಹೇಳಲೇ ಬೇಕಿತ್ತಂತೆ ಸಾಯಿ ಪಲ್ಲವಿ!ಪುನೀತ್ ರಾಜ್‌ಕುಮಾರ್‌ಗೆ ಆ ಒಂದು ಮಾತು ಹೇಳಲೇ ಬೇಕಿತ್ತಂತೆ ಸಾಯಿ ಪಲ್ಲವಿ!

  ಸಾಯಿ ಪಲ್ಲವಿ ಲವ್ ಲೆಟರ್!

  ಸಾಯಿ ಪಲ್ಲವಿ ಲವ್ ಲೆಟರ್!

  ನಟಿ ಸಾಯಿ ಪಲ್ಲವಿ ಮದುವೆ ಬಗ್ಗೆ, ಅವರ ಲವ್ ಬಗ್ಗೆ ಆಗಾಗ ಸುದ್ದಿಗಳು ಹಬ್ಬುತ್ತಿರುತ್ತವೆ. ಸಾಯಿ ಪಲ್ಲವಿ ಅರೆಂಜ್ಡ್ ಮ್ಯಾರೇಜ್ ಆಗುವ ಬಗ್ಗೆಯೂ ಈ ಹಿಂದೆನೇ ಹೇಳಿಕೊಂಡಿದ್ದಾರೆ. ಅದ್ರೀಗ ತಾನು ಬರೆದುಕೊಂಡಿರುವ ಲವ್ ಲೆಟರ್ ಬಗ್ಗೆನೂ ಹೇಳಿಕೊಂಡಿದ್ದಾರೆ. ಶಾಲೆಯಲ್ಲಿ ಓದುತ್ತಿದ್ದಾಗ ನಟಿ ಸಾಯಿ ಪಲ್ಲವಿ, ಹುಡುಗನಿಗೆ ಲವ್ ಲೆಟರ್ ಬರೆದಿದ್ದರಂತೆ. ನಂತರ ಪೋಷಕರ ಕೈಗೆ ಸಿಕ್ಕಿ ಬಿದ್ದಿದ್ದರಂತೆ.

  ಪ್ರೇಮ ಪತ್ರದಿಂದ ಸಿಕ್ಕಿಬಿದ್ದ ಸಾಯಿ ಪಲ್ಲವಿ!

  ಪ್ರೇಮ ಪತ್ರದಿಂದ ಸಿಕ್ಕಿಬಿದ್ದ ಸಾಯಿ ಪಲ್ಲವಿ!

  ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿಗೆ ಪತ್ರ ಬರೆದಿದ್ದರ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ತಮ್ಮ ಮೊದಲ ಪ್ರೇಮ ಪತ್ರದ ಬಗ್ಗೆ ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ. "ನಾನು ಪ್ರೇಮ ಪತ್ರ ಬರೆದು ಸಿಕ್ಕಿ ಹಾಕಿಕೊಂಡಿದ್ದೆ. ನಾನು ಬಹುಶಃ 7ನೇ ತರಗತಿ ಓದುತ್ತಿದ್ದೆ. ಆಗಲೇ ಹುಡುಗನಿಗೆ ಪ್ರೇಮ ಪತ್ರ ಬರೆದಿದ್ದೆ. ಅದು ನನ್ನ ಪೋಷಕರ ಕೈಗೆ ಸಿಕ್ಕಿತ್ತು. ಆಗ ನನ್ನ ಪೋಷಕರು ನನಗೆ ಚೆನ್ನಾಗಿ ಥಳಿಸಿದ್ದರು." ಎಂದು ಹೇಳಿಕೊಂಡಿದ್ದಾರೆ.

  ಸಾಯಿ ಪಲ್ಲವಿ ಮದುವೆ ಸುದ್ದಿ!

  ಸಾಯಿ ಪಲ್ಲವಿ ಮದುವೆ ಸುದ್ದಿ!

  ನಟಿ ಸಾಯಿ ಪಲ್ಲವಿ ಮದುವೆ ವಿಚಾರ ಈ ಹಿಂದೆಯೇ ಸುದ್ದಿ ಯಾಗಿತ್ತು. ಮದುವೆ ಫಿಕ್ಸ್ ಆದ ಕಾರಣಕ್ಕೆ ಸಾಯಿ ಪಲ್ಲವಿ ಸಿನಿಮಾಗಳನ್ನು ಮಾಡುತ್ತಿಲ್ಲ. ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಇರಲು ಸಾಯಿ ಪಲ್ಲವಿ ಮದುವೆ ಕಾರಣ ಎನ್ನಲಾಗಿತ್ತು. ಆದರೆ 'ಗಾರ್ಗಿ' ಸಿನಿಮಾ ಲಾಂಚ್ ಮಾಡುವ ಮೂಲಕ ಆ ಸುದ್ದಿಯನ್ನು ಸುಳ್ಳು ಮಾಡಿದರು. ಇನ್ನು ಮದುವೆ ವಿಚಾರವನ್ನು ತನ್ನ ಪೋಷಕರಿಗೆ ಬಿಟ್ಟಿರುವುದಾಗಿ ಹೇಳಿಕೊಂಡಿದ್ದರು.

  'ಗಾರ್ಗಿ' ಸಿನಿಮಾ ರಿಲೀಸ್!

  'ಗಾರ್ಗಿ' ಸಿನಿಮಾ ರಿಲೀಸ್!

  ಸಾಯಿ ಪಲ್ಲವಿ ಅಭಿನಯದ 'ಗಾರ್ಗಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ಜುಲೈ 15ಕ್ಕೆ ಸಿನಿಮಾ ತೆರೆಗೆ ಬರ್ತಿದೆ. ಇನ್ನು ಈ ಸಿನಿಮಾ ಕನ್ನಡದಲ್ಲೂ ಕೂಡ ತೆರೆಗೆ ಬರ್ತಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಹೇಗೆ ಕಾಣಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Actress Sai Pallavi Beaten By Her Parents Because Of A Love Letter, Know More
  Monday, July 11, 2022, 16:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X