Sai Pallavi: ರಣಬೀರ್ ಕಪೂರ್ ಜೊತೆ 'ರಾಮಾಯಣ'ದಲ್ಲಿ ಸಾಯಿ ಪಲ್ಲವಿ ನಟಿಸುತ್ತಾರಾ? ನಟಿ ಹೇಳಿದ್ದೇನು?
ಸದ್ಯ ಬಾಲಿವುಡ್‌ನಲ್ಲಿ ರಾಮಾಯಣದ್ದೇ ಸುದ್ದಿ. ನಿರ್ದೇಶಕ ನಿತೇಶ್ ತಿವಾರಿ ಮುಂದಿನ ವರ್ಷದಲ್ಲಿ ರಾಮಾಯಣ ಸಿನಿಮಾ ಘೋಷಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇಲ್ಲಿ ನಟ ನಟಿಯರ ಆಯ್ಕೆಯೇ ಎಲ್ಲರ ಗಮನ ಸೆಳೆಯುತ್ತಿದೆ. ನಟ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ, ಸೌತ್ ಬ್ಯೂಟಿ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 2024 ರ ಸುಮಾರಿಗೆ ರಾಮಾಯಣ ಸಿನಿಮಾ ಆರಂಭವಾಗಲಿದ್ದು, ನಿತೇಶ್ ತಿವಾರಿ ಮತ್ತು ರವಿ ಉದ್ಯಾವರ್ ಈ ಸಿನಿಮಾಗಾಗಿ ಈಗಾಗಲೇ ಮೂವರು ಕಲಾವಿದರ ಲುಕ್ ಟೆಸ್ಟ್ ಮಾಡಿದ್ದಾರೆ. ಇನ್ನು ನಟಿ ಸಾಯಿ ಪಲ್ಲವಿ ರಾಮಾಯಣ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ವರದಿಗಳಿವೆ.

ರಾಮಾಯಣದಲ್ಲಿ ಸೀತೆಯಾಗಿ ಸಾಯಿಪಲ್ಲವಿ
ನಿತೀಶ್ ತಿವಾರಿ ಅವರ ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆಯಾಗುತ್ತಾರೆ ಎಂಬ ಬಗ್ಗೆ ಹಲವು ವರದಿಗಳು ಇದ್ದರೂ ನಟಿ ಮಾತ್ರ ಇಷ್ಟು ದಿನ ಈ ಬಗ್ಗೆ ಮಾತನಾಡಿರಲಿಲ್ಲ. ಗಾರ್ಗಿ ಸಿನಿಮಾ ಬಳಿಕ ಸಾಯಿ ಪಲ್ಲವಿ ತುಂಬಾ ಗ್ಯಾಪ್ ತೆಗೆದುಕೊಂಡಿದ್ದಾರೆ. ಜೊತೆಗೆ ತಮ್ಮ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಕೂಡ ಈ ಅಂತ ಮುಖ್ಯ ಎನ್ನಲಾಗುತ್ತಿದೆ. ಸದ್ಯ ಸಾಯಿ ಪಲ್ಲವಿಗೆ ಕ್ರೇಜಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟ ಶಿವಕಾರ್ತಿಕೇಯನ್ ಅಭಿನಯದ 'ಕ್ರೇಜಿ' ಸಿನಿಮಾದಲ್ಲಿ ಸಾಯು ಪಲ್ಲವಿ ನಟಿಸುತ್ತಿದ್ದಾರೆ. ಹಿರಿಯ ನಟ ಕಮಲ್ ಹಾಸನ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ನಡುವೆ ಸಾಯಿ ಪಲ್ಲವಿ ಮತ್ತೊಂದು ದೊಡ್ಡ ಪ್ರಾಜೆಕ್ಟ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಅದೇ ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಬಾಲಿವುಡ್ ಸಿನಿಮಾ ರಾಮಾಯಣ.
ರಾಮಾಯಣದಲ್ಲಿ ಸೀತೆ ಪಾತ್ರಕ್ಕೆ ಆಯ್ಕೆಯಾಗಿದ್ದೇನೆ
ಸೀತೆ ಪಾತ್ರದ ಸುದ್ದಿಗೆ ಇತ್ತೀಚೆಗೆ ಸಾಯಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ. ಇದು ಖಂಡಿತವಾಗಿಯೂ ತನಗೆ ಸವಾಲಿನ ಪಾತ್ರ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ತನ್ನ ಭಾಗದ ಕಥೆಯನ್ನು ಕೇಳಲು ಮುಂಬೈಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

"ರಾಮಾಯಣ ಚಿತ್ರದಲ್ಲಿ ನಟಿಸುವ ಭಾಗ್ಯ ನನಗೆ ಸಿಕ್ಕಿದೆ. ಈ ಮಹಾಕಾವ್ಯದಲ್ಲಿ ಹಲವು ಖ್ಯಾತನಾಮರು ನಟಿಸುತ್ತಿದ್ದಾರೆ. ಅವರಲ್ಲಿ ನಾನು 10 ಪರ್ಸೆಂಟ್ ನಟಿಸಿದರೂ ಸಾಕು" ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಹೀಗಾಗಿ ನಟಿ ಸೀತೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಇದು ಸಾಯಿ ಪಲ್ಲವಿ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಸ್ಪಷ್ಟನೆ ನೀಡದ ಯಶ್
ಇನ್ನು, ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಬಗ್ಗೆ ರಾಕಿಂಗ್ ಸ್ಟಾರ್ ಇದುವರೆಗೂ ಎಲ್ಲಿಯೂ ಧಿಕೃತವಾಗಿ ಮಾತನಾಡಿಲ್ಲ. ಆದರೆ, ಮಾಹಿತಿಗಳ ಆಧಾರದ ಮೇಲೆ ಅವರು ಲುಕ್ ಟೆಸ್ಟ್ ಮಾಡಿಸಿದ್ದು, ಹದಿನೈದು ದಿನಗಳ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಆದಿಪುರುಷ್ ಎಂಬ ಹೆಸರಿನಲ್ಲಿ ನಟಿ ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನನ್ ಅವರನ್ನು ಹಾಕಿಕೊಂಡು ರಾಮಾಯಣವನ್ನು ಕೆಟ್ಟದಾಗಿ ತೋರಿಸಲಾಗಿತ್ತು. ಸಿನಿಮಾ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಬಾಲಿವುಡ್‌ನಿಂದ ಮತ್ತೊಂದು ರಾಮಾಯಣವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications











