ಸಾಯಿ ಪಲ್ಲವಿ ಹುಟ್ಟುಹಬ್ಬ: ವಿಶೇಷದಿನದಂದು ಯಾರಿಗಾಗಿ ಕಾಯುತ್ತಿದ್ದಾರೆ 'ಪ್ರೇಮಂ' ಸುಂದರಿ
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅದ್ಭುತ ಅಭಿನಯ, ಮುದ್ದಾದ ಮುಖದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಸಿನಿಪ್ರಿಯರ ಮನಗೆದ್ದಿರುವ ಸುಂದರಿ. ಅಭಿನಯ ಮತ್ತು ನೃತ್ಯದ ಮೂಲಕ ಚಿತ್ರಪ್ರಿಯರ ಹೃದಯ ಗೆದ್ದಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುವ ಸಾಯಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸಾಯಿ ಬಳಿ ಸದ್ಯ ಎರಡ್ಮೂರು ಸಿನಿಮಾಗಳಿವೆ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಸಾಯಿಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಈ ಸಂಭ್ರಮದಲ್ಲಿಯೇ ಸಾಯಿ ಯಾರಿಗಾಗಿಯೊ ಕಾಯುತ್ತ ಕುಳಿತ್ತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಓದಿ..

ಯಾರಿಗಾಗಿ ಕಾಯುತ್ತಿದ್ದಾರೆ ಸಾಯಿ
ಸಾಯಿ ಪಲ್ಲವಿ ಹುಟ್ಟುಹಬ್ಬದ ದಿನ ಅವರಕ ವಿಶೇಷ ಫೋಟೋವೊಂದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಡಿ ಗ್ಲಾಮ್ ಲುಕ್ ನಲ್ಲಿ ಸಾಯಿ ಹುತಾತ್ಮರ ಸ್ಮಾರಕದ ಮೇಲೆ ಕುಳಿತು ಯಾರಿಗಾಗಿಯೂ ಕಾಯುತ್ತಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ವಿರಾಟಪರ್ವಂ' ಸಿನಿಮಾದ ಲುಕ್ ರಿಲೀಸ್
ಸಾಯಿ ಪಲ್ಲವಿ ಡಿ ಗ್ಲಾಮ್ ನಲ್ಲಿ ಕಾಣಿಸಿಕೊಂಡಿರುವುದು ವಿರಾಟಪರ್ವಂ ಸಿನಿಮಾಗಾಗಿ. ನಟ ರಾಣದಗ್ಗುಬಾಟಿ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಲುಕ್ ನಲ್ಲಿ ಸಾಯಿ ಒಂದು ಬ್ಯಾಗ್ ಜೊತೆಯಲ್ಲಿಟ್ಟುಕೊಂಡಿದ್ದಾರೆ. ಕೈಯಲ್ಲಿ ಪೆನ್ನು ಹಿಡಿದು, ಆಳವಾಗಿ ಯೋಚಿಸುತ್ತಾ ಯಾರೋ ಬರುವ ದಾರಿಯನ್ನು ಕಾಯುತ್ತಿರುವ ಹಾಗೆ ಇದೆ. ಸಾಯಿ ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆಕ್ಷನ್-ಥ್ರಿಲ್ಲಿಂಗ್ ಸಿನಿಮಾದಲ್ಲಿ ಹೃದಯಸ್ಪರ್ಶಿ ಪ್ರೇಮಕಥೆ
'ವಿರಾಟಪರ್ವಂ' ವೇಣು ಉಡುಗುಲ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದಲ್ಲಿ ನಕ್ಸಲಿಸಂ ಬಗ್ಗೆ ಇದೆಯಂತೆ. ಜೊತೆಗೆ ಹೃದಯಸ್ಪರ್ಶಿ ಪ್ರೇಮ ಕಥೆ ಚಿತ್ರದ ಹೈಲೆಟ್ ಎಂದು ಹೇಳಲಾಗುತ್ತಿದೆ. ತುಂಬಾ ನ್ಯಾಚುರಲ್ ಆಗಿ ಸಿನಿಮಾ ಮೂಡಿಬರಲಿದೆಯಂತೆ. ಸದ್ಯ ರಿಲೀಸ್ ಆಗಿರುವ ಸಾಯಿ ಪಲ್ಲವಿ ಲುಕ್ ಕೂಡ ತುಂಬ ನ್ಯಾಚುರಲ್ ಆಗಿಯೇ ಇದೆ. ಹಾಗಾಗಿ ಸಿನಿಮಾದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಗಮನ ಸೆಳೆಯುತ್ತಿದೆ ಸಾಯಿ ಲವ್ ಸ್ಟೋರಿ
ಸಾಯಿ ಪಲ್ಲವಿ ವಿರಾಟಪರ್ವಂ ಸಿನಿಮಾ ಜೊತೆಗೆ ಲವ್ ಸ್ಟೋರಿ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ಈಗಾಗಲೆ ಲವ್ ಸ್ಟೋರಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳ ಮನಗೆದ್ದಿದೆ. ಸಿನಿಮಾಗಾಗಿ ಚಿತ್ರಪ್ರಿಯರು ಕಾತರರಾಗಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ನಾಗ್ ಚೈತನ್ಯ ಕಾಣಿಸಿಕೊಂಡಿದ್ದಾರೆ.


Click it and Unblock the Notifications











