For Quick Alerts
  ALLOW NOTIFICATIONS  
  For Daily Alerts

  ಸೌಂದರ್ಯ ಬಯೋಪಿಕ್ ನಲ್ಲಿ ನಟಿಸಲಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ

  |

  ಬಾಲಿವುಡ್ ನಲ್ಲಿ ಸಾಲು ಸಾಲು ಬಯೋಪಿಕ್ ಗಳು ನಿರ್ಮಾಣವಾಗುತ್ತಿವೆ. ಇದೀಗ ದಕ್ಷಿಣ ಭಾರತೀಯ ಸಿನಿಮಾರಂಗ ಸಹ ಬಯೋಪಿಕ್ ನಿರ್ಮಾಣದಲ್ಲಿ ಹಿಂದೆ ಬಿದ್ದಿಲ್ಲ. ಟಾಲಿವುಡ್ ನಲ್ಲಿ ಒಂದಾದ ನಂತರ ಒಂದು ಬಯೋಪಿಕ್ ತಯಾರಾಗುತ್ತಿವೆ. ಜಯಲಲಿತಾ, ಕರಣಂ ಮಲ್ಲೇಶ್ವರಿ, ಪುಲ್ಲೇಲ ಗೋಪಿಚಂದ್ ಬಯೋಪಿಕ್ ಗೆ ತಯಾರಿ ನಡೆಯುತ್ತಿದೆ.

  ಈ ನಡುವೆ ಈಗ ಮತ್ತೊಂದು ಬಯೋಪಿಕ್ ಸದ್ದು ಮಾಡುತ್ತಿದೆ. ಹೌದು, ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ ಅವರ ಬಯೋಪಿಕ್ ಗೆ ಸಿದ್ಧತೆ ನಡೆಯುತ್ತಿದೆ. ತೆಲುಗು ನಿರ್ಮಾಪಕರೊಬ್ಬರು ಸೌಂದರ್ಯ ಬಯೋಪಿಕ್ ನಿರ್ಮಾಣ ಮಾಡಲು ಸೌಂದರ್ಯ ಕುಟುಂಬದ ಜೊತೆ ಮಾತುಕತೆ ನಡೆಸುತ್ತಿದ್ದಾರಂತೆ. ಕುಟುಂಬದ ಒಪ್ಪಿಗೆಗೆ ಕಾಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

  ಧನುಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರೇ ನಟಿ ಸಾಯಿ ಪಲ್ಲವಿ!?ಧನುಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರೇ ನಟಿ ಸಾಯಿ ಪಲ್ಲವಿ!?

  ಸೌಂದರ್ಯ ಬಯೋಪಿಕ್ ನಿರ್ಮಾಣ ಮಾಡುವ ಬಗ್ಗೆ ಅನೇಕ ವರ್ಷಗಳಿಂದ ಮಾತು ಕೇಳಿಬರುತ್ತಿದೆ. ಆದರೆ ಇದುವರೆಗೂ ಬಯೋಪಿಕ್ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ. ಇದೀಗ ಮತ್ತೆ ಸೌಂದರ್ಯ ಅವರ ಜೀವನಚರಿತ್ರೆ ಸಿನಿಮಾ ಮಾಡುವ ವಿಚಾರ ಚರ್ಚೆಯಾಗುತ್ತಿದೆ. ಅಪ್ರತಿಮ ಸೌಂದರ್ಯವತಿ ಮತ್ತು ಅದ್ಭುತ ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಯಾರು ನಟಿಸುತ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

  ಮೂಲಗಳ ಪ್ರಕಾರ ಸೌಂದರ್ಯ ಬಯೋಪಿಕ್ ನಲ್ಲಿ ದಕ್ಷಿಣ ಭಾರತ ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸಾಯಿ ಪಲ್ಲವಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಬಯೋಪಿಕ್ ನಲ್ಲಿ ನಟಿಸಲು ಸಾಯಿ ಪಲ್ಲವಿ ಸಹ ಆಸಕ್ತರಾಗಿದ್ದು, ಸದ್ಯದಲ್ಲೇ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  ನಟಿ ಸೌಂದರ್ಯ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ. 2004ರಲ್ಲಿ ವಿಮಾನ ದುರಂತದಲ್ಲಿ ಇಹಲೋಕ ತ್ಯಜಿಸಿದರು.

  Ragini Dwivedi, ಬೇಲ್ ಕೊಟ್ಟಿಲ್ಲ ಅಂದ್ರೆ ಪರವಾಗಿಲ್ಲ ಈ 3 ವಸ್ತುಗಳನ್ನು ವಾಪಸ್ ಕೊಡಿ ಪ್ಲೀಸ್ |Filmibeat Kannada

  ನಟಿ ಸಾಯಿ ಪಲ್ಲವಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಸಾಯಿ ಪಲ್ಲವಿ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸೌಂದರ್ಯ ಬಯೋಪಿಕ್ ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಸದ್ಯ ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಾಣಾ ದಗ್ಗುಬಾಟಿ ನಟಿಸುತ್ತಿರುವ 'ವಿರಾಟಪರ್ವಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Actress sai pallavi to star in late actress Soundarya biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X