ಮತ್ತೆ ಹೈದರಾಬಾದ್‌ನ ಥಿಯೇಟರ್‌ವೊಂದರಲ್ಲಿ ಕಾಣಿಸಿಕೊಂಡ ನಟಿ ಸಾಯಿ ಪಲ್ಲವಿ: ವಿಡಿಯೋ ವೈರಲ್

ಟಾಲಿವುಡ್‌ನ ಬಹು ಬೇಡಿಕೆಯ ನಟಿಯಾಗಿರುವ ಸಾಯಿ ಪಲ್ಲವಿ ಹೊಸದೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವ ನಟಿ ಸಾಯಿ ಪಲ್ಲವಿಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳಿದ್ದಾರೆ. ಅವರ ನಟನೆ, ನೃತ್ಯಕ್ಕೆ ಬೆರಗಾದವರೇ ಇಲ್ಲ. ಆ ಮಟ್ಟಿಗಿನ ಫ್ಯಾನ್ಸ್ ಕ್ರೇಜ್ ನಟಿ ಸಾಯಿ ಪಲ್ಲವಿಗೆ ಇದೆ.

ಸದ್ಯ ಸಾಯಿ ಪಲ್ಲವಿ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಅವರ ಬಹುನೀರಿಕ್ಷಿತ ಸಿನಿಮಾ 'ಗಾರ್ಗಿ' ಕೂಡ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ನಡುವೆಯೇ ನಟಿ ನಿನ್ನೆ (ಮೇ 14 ) ತಡರಾತ್ರಿಯಂದು ಹೈದರಾಬಾದ್‌ನ ಥಿಯೇಟರ್‌ನಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

ನಿನ್ನೆ ತಡರಾತ್ರಿ ನಟಿ ಸಾಯಿಪಲ್ಲವಿ ಹೈದಾರಾಬಾದ್‌ನ ಥಿಯೇಟರ್‌ನಿಂದ ಸಿನಿಮಾ ನೋಡಿಕೊಂಡು ಮನೆಗೆ ತೆರಳುವ ವೇಳೆ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಥಿಯೇಟರ್‌ನಲ್ಲಿ ನೂರಾರು ಜನರ ಜೊತೆ ಕುಳಿತು ಸಿನಿಮಾ ನೋಡಿಕೊಂಡು ವಾಪಾಸ್ ಆಗಿದ್ದಾರೆ. ಥಿಯೇಟರ್‌ನಿಂದ ಹೊರಗೆ ಬರುವ ವೇಳೆ ನಟಿ ಸಾಯಿ ಪಲ್ಲವಿ ತಲೆಗೆ ಸ್ಕಾರ್ಪ್ ಕಟ್ಟಿಕೊಂಡು ಮುಖವನ್ನು ಫುಲ್ ಕವರ್ ಮಾಡಿಕೊಂಡಿ ಥಿಯೇಟರ್‌ನಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಛಾಯಾಗ್ರಾಹಕರು ನಟಿಯ ಪೋಟೊ ಹಾಗೂ ವಿಡಿಯೋವನ್ನು ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲೂ ಕೂಡ ನಟಿ ಸಾಯಿ ಪಲ್ಲವಿ ಬುರ್ಖಾ ಧರಿಸಿ ಥಿಯೇಟರ್‌ನಲ್ಲಿ ಜನರ ಜೊತೆ ಸಿನಿಮಾ ವೀಕ್ಷಣೆ ಮಾಡಿದ್ದರು. ಇದು ಕೂಡ ಎಲ್ಲೆಡೆ ಭಾರೀ ವೈರಲ್ ಆಗಿತ್ತು. 'ಶ್ಯಾಮ್ ಸಿಂಗ ರಾಯ್' ಚಿತ್ರದಲ್ಲಿ ಸಾಯಿ ಪಲ್ಲವಿ ರೂಸಿಯಾಗಿ ಪ್ರೇಕ್ಷಕರನ್ನು ರಂಜಿಸಿದ್ದರು.

Actress Sai Pallavi, Who Has Again Appeared In A Theater in Hyderabad, Video Goes Viral

ನಟಿ ಸಾಯಿ ಪಲ್ಲವಿ ಹೈದರಾಬಾದ್‌ನ ಶ್ರೀರಾಮುಲು ಥಿಯೇಟರ್‌ವೊಂದರಲ್ಲಿ ಬುರ್ಖಾ ಧರಿಸಿಕೊಂಡು ಹೋಗಿ ಜನರ ಮಧ್ಯೆಯೇ ಕುಳಿತು ಸಿನಿಮಾ ವೀಕ್ಷಣೆ ಮಾಡಿದ್ದರು. ತಮ್ಮ ಸಿನಿಮಾ ಬಗ್ಗೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೇರವಾಗಿ ನೋಡುವ ಸಲುವಾಗಿ ನಟಿ ಬುರ್ಖಾ ಧರಿಸಿ ಥಿಯೇಟರ್‌ಗೆ ಪ್ರವೇಶ ಮಾಡಿದ್ದರು.

ಸದ್ಯ ಈಗ ಮತ್ತೆ ಅದೇ ರೀತಿಯಲ್ಲಿ ನಟಿ ಸಾಯಿ ಪಲ್ಲವಿ ಸಾಮಾನ್ಯ ಜನರಂತೆ ಥಿಯೇಟರ್‌ಗೆ ಆಗಮಿಸಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ತಡರಾತ್ರಿ ಚಿತ್ರ ನೋಡಿ ಜನರ ಮಧ್ಯೆಯೇ ಸಾಯಿ ಪಲ್ಲವಿ ತಮ್ಮ ಮುಖ ಮುಚ್ಚಿಕೊಂಡು ಆರಾಮಾಗಿ ಹೊರಗೆ ಬಂದಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಾಯಿ ಪಲ್ಲವಿಯ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ.

Actress Sai Pallavi, Who Has Again Appeared In A Theater in Hyderabad, Video Goes Viral

ನಟಿ ಸಾಯಿ ಪಲ್ಲವಿ ಈ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದು, 'ವಿರಾಟ ಪರ್ವಂ' ಸಿನಿಮಾ ಇದೇ ಜುಲೈ 1 ಕ್ಕೆ ರಿಲೀಸ್ ಆಗಲು ಸಜ್ಜಾಗಿದೆ. ಇದಾದ ಬಳಿಕ ಶಿವಕಾರ್ತಿಕೇಯನ್ ಮುಂದಿನ ಚಿತ್ರದಲ್ಲಿ ನಟಿ ಸಾಯಿಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ . ಸದ್ಯ ಮೂರು ಭಾಷಾದಲ್ಲಿ ಬಿಡುಗಡೆಯಾಗುತ್ತಿರುವ 'ಗಾರ್ಗಿ'ಯಲ್ಲೂ ನಟಿ ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Sai Pallavi was papped yesterday in Hyderabad as she was stepping out of a theatre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X