10 ಕೋಟಿ ಆಸ್ತಿಗಾಗಿ ನನ್ನನ್ನು ಕೊ*ಲ್ಲಲು ಯತ್ನಿಸುತ್ತಿದ್ದಾರೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ

ಮಲಯಳಂ ನಟಿ ಸಜಿನಿ ಪ್ರಾಣಭಯದಿಂದ ಜೀವನ ಸಾಗಿಸುವಂತಾಗಿದೆ. ಮಲಯಾಳಂ ನಟಿ ಸಜಿನಿ ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿ ಸಜಿನಿ ಹೆಚ್ಚು ಗಮನ ಸೆಳೆದವರು. ಇತ್ತೀಚೆಗೆ ಆಕೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲ. ಇದೀಗ ಮಾಧ್ಯಮಗಳ ಮುಂದೆ ಬಂದು ಪ್ರಾಣಹಾನಿ ಭೀತಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೈದರಾಬಾದ್ ಜೂಬ್ರಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆಸ್ತಿಗಾಗಿ ಅಕ್ಕ, ಆಕೆಯ ಪತಿ ಹಾಗೂ ಅವರ ಮಕ್ಕಳು ನನಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಸಜಿನಿ ಬೇಸರ ವ್ಯಕ್ತಪಡಿಸಿದ್ದಾರೆ. ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಕೊಟ್ಟು ನರಕದರ್ಶನ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "2001ರಲ್ಲಿ ನಾನು ಚಿತ್ರಗಳಲ್ಲಿ ನಟಿಸಿ ಗಳಿಸಿದ ಹಣದಿಂದ ನನ್ನ ತಾಯಿಯ ಹೆಸರಿನಲ್ಲಿ ಹೈದರಾಬಾದ್ ಜ್ಯೂಬ್ರಿಹೀಲ್ಸ್‌ನಲ್ಲಿ ಒಂದು ಮನೆ ಖರೀದಿಸಿದ್ದೆ. ಆಗ ಬಹಳ ಆಸೆಯಿಂದ ಖರೀದಿಸಿದ ಮನೆ ಈಗ ನನಗೆ ಶಾಪವಾಗಿ ಪರಿಣಮಿಸಿದೆ. ತಿಂಗಳ ಹಿಂದೆ ತಾಯಿ ಕೊನೆಯುಸಿರೆಳೆದರು. ಆ ಬಳಿಕ ನಮ್ಮ ಕುಟುಂಬ ಸದಸ್ಯರ ವರ್ತನೆ ಬದಲಾಗಿದೆ" ಎಂದು ಸಜಿನಿ ವಿವರಿಸಿದ್ದಾರೆ.

Actress Sajini aka Devi Grandham Alleges Family Harassment Over Property

ಆಸ್ತಿ ಕಬಳಿಸಲು ತಮ್ಮ ಕುಟುಂಬ ಸದಸ್ಯರು ಹಿಂಸೆ ಕೊಡುತ್ತಿದ್ದಾರೆ ಎಂದು NTV ತೆಲುಗು ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. "2003ರಲ್ಲಿ ಅಕ್ಕ ಎಲ್ಲರೂ ಮದುವೆ ಆಗಿ ಹೋಗಿಬಿಟ್ರು.. ನಾನು ಅಮ್ಮ ಆ ಮನೆಯಲ್ಲಿ ಇದ್ವಿ. ಆದರೂ ಆಗಾಗ್ಗೆ ಬಂದು ಸಾಕಷ್ಟು ಹಣ ತಗೊಂಡು ಹೋಗಿದ್ರು. ನನ್ನ ಸಂಪಾದನೆಯನ್ನು ತಿಂದಿದ್ದಾರೆ. ಈಗ ಬಂದು ಜ್ಯೂಬ್ರಿಹೀಲ್ಸ್‌ನಲ್ಲಿರುವ ಮನೆ ನಮ್ಮದು ನೀನು ಹೊರಗೆ ಹೋಗು ಎನ್ನುತ್ತಿದ್ದಾರೆ. ನನ್ನ ಮನೆ ನಾನು ಯಾಕೆ ಹೊರಗೆ ಹೋಗಬೇಕು ಎಂದೆ. ಮಾರ್ಚ್ 16ರಂದು ನನ್ನನ್ನು ಥಳಿಸಿ ಮನೆಯಿಂದ ಹೊರಗೆ ಹಾಕಿದ್ರು" ಎಂದು ನಟಿ ಸಜಿನಿ ನೋವು ತೋಡಿಕೊಂಡಿದ್ದಾರೆ.

ನಾನು ಅಂದೇ ಪೊಲೀಸ್ ಠಾಣೆಗೆ ಬಂದು ಪ್ರಾಣಹಾನಿ ಇರುವ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ನಮ್ಮ ಅಕ್ಕ ಹಾಗೂ ಅವರ ಮನೆಯವರು ಬಂದು ನಮ್ಮ ಮನೆಯಲ್ಲೇ ಇದ್ದಾರೆ. ಕೇಳಿದ್ದಕ್ಕೆ ಮತ್ತೆ ಹೊಡೆದ್ರು.. ಬಂದು ಪೊಲೀಸ್ ಠಾಣೆಗೆ ಹೇಳಿದ್ರೆ, ನನ್ನ ಮೇಲೆ ಎಫ್‌ಐಆರ್ ಹಾಕ್ತೀವಿ ಅಂದ್ರು ಎಂದು ನಟಿ ಸಜಿನಿ ಬೇಸರ ಹೊರ ಹಾಕಿದ್ದಾರೆ. ಈವರೆಗೆ ಅವರ ವಿರುದ್ಧ ದೂರು ದಾಖಲಾಗಿಲ್ಲ ಎಂದಿದ್ದಾರೆ.

ನನಗೆ ಊಟ ಇಲ್ಲ, ವಸತಿ ಇಲ್ಲ. ಪ್ರಾಣಹಾನಿಯಿದೆ. ಆಸ್ತಿಗಾಗಿ ಯಾವಾಗ ಸಾ*ಯಿಸುತ್ತಾರೋ ಗೊತ್ತಿಲ್ಲ. ನಮ್ಮ ಅಕ್ಕ, ಆಕೆಗೆ 4 ಮಂದಿ ಹೆಣ್ಣು ಮಕ್ಕಳು..4 ಮಂದಿ ಅಳಿಯಂದಿರು.. ಒಟ್ಟು 10 ಜನ.. ಮನೆಗೆ ಬರುವುದು ಹೊಡೆದು ಓಡಿ ಹೋಗುವುದು ಮಾಡ್ತಾರೆ. ಇದಕ್ಕೆ ಪರಿಹಾರ ಏನು ಎಂದು ಪೊಲೀಸ್ ಠಾಣೆಯಲ್ಲಿ ಕೇಳುತ್ತಿದ್ದೇನೆ ಎಂದಿದ್ದಾರೆ. ನಮ್ಮ ತಾಯಿಗೆ ನಾವು ಇಬ್ಬರು ಹೆಣ್ಣು ಮಕ್ಕಳು.. ಇದು ನಾನು ಸಂಪಾದಿಸಿದ ಆಸ್ತಿ.. ನಾನು ಆಗ ಕಷ್ಟಬಿದ್ದು ಸಂಪಾದಿಸಿದ ಆಸ್ತಿಯನ್ನು ಕೊಡು ಅಂದ್ರೆ ಹೇಗೆ? ಎಂದು ನಟಿ ಸಜಿನಿ ಅಲವತ್ತುಕೊಂಡಿದ್ದಾರೆ.

ಮಲಯಾಳಂ ಬಿ-ಗ್ರೇಡ್ ಸಿನಿಮಾಗಳಲ್ಲಿ ಸಜಿನಿ ಹೆಚ್ಚು ನಟಿಸಿದ್ದಾರೆ. ಶಕೀಲಾ ಜೊತೆಗೂ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಕೆಲ ವರ್ಷಗಳಿಂದ ಹೈದರಾಬಾದ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಆಂಧ್ರ ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳಲು ಹವಣಿಸುತ್ತಿದ್ದಾರೆ. ವಿಜಯವಾಡದಲ್ಲಿ ಹುಟ್ಟಿ ಬೆಳೆದ ಸಜಿನಿ 1996ರಲ್ಲಿ ಶ್ರೀಕಾಂತ್ ನಟಿಸಿದ 'ಲವ್ ಗೇಮ್' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು.

More from Filmibeat

Read more about: actress malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X