10ನೇ ತರಗತಿಯಲ್ಲಿ ಸಮಂತಾ ಪಡೆದ ಮಾರ್ಕ್ಸ್ ಎಷ್ಟು ನೋಡಿ

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಮತ್ತು ನಟಿ ಪೂಜಾ ಹೆಗ್ಡೆ ನಡುವೆ ಶೀತಲ ಸಮರ ಶುರುವಾಗಿದೆ. ಸಮಂತಾ ವಿರುದ್ಧ ಪೂಜಾ ಹೆಗ್ಡೆ ಮಾಡಿರುವ ಪೋಸ್ಟ್ ಸಮಂತಾ ಅಭಿಮಾನಿಗಳನ್ನು ಕೆರಳಿಸಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿತ್ತಾಡುತ್ತಿದ್ದಾರೆ.

Recommended Video

ಸಮಂತಾ ಅಕ್ಕಿನೇನಿ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಶ್ರದ್ಧಾ ಶ್ರೀನಾಥ್

ಈ ನಡುವೆ ಸಮಂತಾ 10ನೇ ತರಗತಿಯ ಪ್ರೊಗ್ರೆಸ್ ರಿಪೋರ್ಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಮಾರ್ಕ್ಸ್ ನೋಡಿ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಪ್ರೊಗ್ರೆಸ್ ರಿಪೋರ್ಟ್ ನಲ್ಲಿ ಸಮಂತಾ ಶಾಲೆಯ ಆಸ್ತಿ ಎಂದು ಬರೆದಿರುವ ಮಾರ್ಕ್ಸ್ ಕಾರ್ಡ್ ವೈರಲ್ ಆಗುತ್ತಿದೆ. ಸಮಂತಾ ಅಭಿನಯ ಮತ್ತು ಸೌಂದರ್ಯದಲ್ಲಿ ಮಾತ್ರವಲ್ಲದೆ ಓದುವುದರಲ್ಲಿಯೂ ನಂಬರ್ 1 ಎಂದು ಹೊಗಳುತ್ತಿದ್ದಾರೆ. ಮುಂದೆ ಓದಿ....

ಗುಡ್ ಎಂದಿದ್ದ ಟೀಚರ್

ಗುಡ್ ಎಂದಿದ್ದ ಟೀಚರ್

1000 ಗೆ 887 ಮಾರ್ಕ್ಸ್ ಪಡೆದಿರುವ ಸಮಂತಾಗೆ ಟೀಚರ್ ಉತ್ತಮ ಸಾಧನೆ, ನಿಜವಾಗಿಯೂ ಶಾಲೆಯ ಆಸ್ತಿ ಎಂದು ಬರೆದಿದ್ದಾರೆ. ಸಮಂತಾ ಮಾರ್ಕ್ಸ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 10ನೇ ತರಗತಿಯಲ್ಲಿ ಸಮಂತಾ ಮಾಡಿರುವ ಸಾಧನೆ ನೋಡಿ ಅಭಿಮಾನಿಗಳು 'ನೀವು ಎಲ್ಲಾ ವಿಚಾರದಲ್ಲೂ ಉತ್ತಮರು' ಎಂದು ಹೇಳುತ್ತಿದ್ದಾರೆ.

ಪೂಜಾ ಹೆಗ್ಡೆ ವ್ಯಂಗ್ಯ

ಪೂಜಾ ಹೆಗ್ಡೆ ವ್ಯಂಗ್ಯ

ಸಮಂತಾ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ 10 ಮಿಲಿಯನ್ ಫಾಲೋವರ್‌ಗಳನ್ನು ತಲುಪಿದ ಖುಷಿ ಹಂಚಿಕೊಂಡಿದ್ದರು. ಅದಾಗಿ ಮರುದಿನ ನಟಿ ಪೂಜಾ ಹೆಗ್ಡೆ ಅವರ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 'ಆಕೆ ಅಷ್ಟೇನೂ ಚೆನ್ನಾಗಿದ್ದಾಳೆ ಎನಿಸುತ್ತಿಲ್ಲ' ಎಂಬ ಮೀಮ್ ಪ್ರಕಟವಾಗಿತ್ತು. ಇದರ ಬಗ್ಗೆ ಹೇಳಿಕೆ ನೀಡದ ಪೂಜಾ, ತಮ್ಮ ಇನ್‌ಸ್ಟಾ ಖಾತೆ ಹ್ಯಾಕ್ ಆಗಿತ್ತು ಎಂದಿದ್ದರು.

ಮೆದುಳು ಹ್ಯಾಕ್ ಆಗಿದೆ

ಮೆದುಳು ಹ್ಯಾಕ್ ಆಗಿದೆ

ಇದಕ್ಕೆ ಟಾಂಗ್ ನೀಡಿದ್ದ ಸಮಂತಾ, 'ನನ್ನ ಮೆದುಳು ಸಹ ಹ್ಯಾಕ್ ಆಗಿದೆ' ಎಂದು ಪರೋಕ್ಷವಾಗಿ ಪೂಜಾ ಕಾಲೆಳೆದಿದ್ದರು. ಮುಂದಿನ ನೋಟಿಸ್ ನೀಡುವವರೆಗೂ ಹ್ಯಾಕ್ ಬಗ್ಗೆ ಜೋಕ್ ಮಾಡಬೇಡ' ಎಂದಿದ್ದರು. ಪೂಜಾ ವಿರುದ್ಧ ಸಮಂತಾ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ತಮಿಳು ಚಿತ್ರದಲ್ಲಿ ಸಮಂತಾ

ತಮಿಳು ಚಿತ್ರದಲ್ಲಿ ಸಮಂತಾ


ಸಮಂತಾ ಇತ್ತೀಚಿಗೆ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಚಿತ್ರದಲ್ಲಿ ಸಮಂತಾ ಅಭಿನಯಿಸುತ್ತಿದ್ದಾರೆ. ಲಾಕ್ ಡೌನ್ ನಲ್ಲಿ ಕುಟುಂಬದ ಜೊತೆ ಕಾಲಕಳೆಯುತ್ತಿರುವ ಸಮಂತಾ ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಪ್ರತ್ಯಕ್ಷರಾಗುತ್ತಿರುತ್ತಾರೆ.

More from Filmibeat

English summary
Actress Samantha Akkineni 10th progress report viral in social media. she was a topper in class.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X