For Quick Alerts
  ALLOW NOTIFICATIONS  
  For Daily Alerts

  ಜಾಲಿ ಮೂಡಲ್ಲಿ ನಟಿ ಸಮಂತಾ: ಸ್ನೇಹಿತರ ಜೊತೆ ಸೈಕಲ್ ರೈಡ್

  |

  ಟಾಲಿವುಡ್ ಖ್ಯಾತ ನಟಿ ಸಮಂತಾ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪತಿ ನಾಗ ಚೈತನ್ಯರಿಂದ ಸಮಂತಾ ದೂರ ಆಗಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸ್ಟಾರ್ ದಂಪತಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಇಬ್ಬರೂ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಸಮಂತಾ ಆಗಲಿ ಅಥವಾ ನಾಗ ಚೈತನ್ಯ ಎಲ್ಲಿಯೂ ಪ್ರತಿಕ್ರಿಯೆ ನೀಡದೆ ಇರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

  ಈ ನಡುವೆ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಟಾಲಿವುಡ್ ಸ್ಟಾರ್ ನಾಗಾರ್ಜುನ ಅವರಿಗೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಆದರೆ ನಾಗಾರ್ಜುನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಮಂತಾ ಮಿಸ್ ಆಗಿದ್ದರು. ನಾಗಾರ್ಜುನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು. ಪತ್ನಿ ಅಮಲಾ ಅಕ್ಕಿನೇನಿ, ಇಬ್ಬರ ಮಕ್ಕಳಾದ ನಾಗ ಚೈತನ್ಯ ಮತ್ತು ಅಕಿಲ್ ಅಕ್ಕಿನೇನಿ ಇಬ್ಬರು ಭಾಗಿಯಾಗಿದ್ದರು. ಆದರೆ ಸಮಂತಾ ಗೈರು ಎದ್ದು ಕಾಣುತ್ತಿತ್ತು. ಇದು ಇಬ್ಬರ ನಡುವಿನ ಬಿರುಕಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಈ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದರು ನಟಿ ಸಮಂತಾ ತಲೆಕೆಡಿಸಿಕೊಳ್ಳದೆ ಜಾಲಿ ಮೂಡಲ್ಲಿದ್ದಾರೆ. ಮುಂದೆ ಓದಿ..

  ಸಮಂತಾ ಸೈಕಲ್ ರೈಡ್

  ಸಮಂತಾ ಸೈಕಲ್ ರೈಡ್

  ನಾಗಾರ್ಜುನ್ ಹುಟ್ಟುಹಬ್ಬ ಪಾರ್ಟಿ ಬಳಿಕ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಸಮಂತಾ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಸಮಂತಾ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇಂದು (ಸೆಪ್ಟಂಬರ್ 3) ಸಮಂತಾ ಸ್ನೇಹಿತರ ಜೊತೆ ಸೇರಿ ಸೈಕಲ್ ರೈಡಿಂಗ್ ಹೊರಟಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಸ್ನೇಹಿತರ ಜೊತೆ ಸೈಕಲ್ ರೈಡ್ ಹೊರಟಿರುವ ಫೋಟೋವನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಬೆಸ್ಟ್ ಫ್ರೆಂಡ್ ಶಿಲ್ಪಾ ರೆಡ್ಡಿ ಜೊತೆ ಇರುವ ಸಮಂತಾ

  ಬೆಸ್ಟ್ ಫ್ರೆಂಡ್ ಶಿಲ್ಪಾ ರೆಡ್ಡಿ ಜೊತೆ ಇರುವ ಸಮಂತಾ

  ಸಮಂತಾ ತನ್ನ ಬೆಸ್ಟ್ ಫ್ರೆಂಡ್ ಶಿಲ್ಪಾ ರೆಡ್ಡಿ ಕುಟುಂಬದರ ಜೊತೆ ಸೈಕ್ಲಿಂಗ್ ಹೊರಟಿದ್ದಾರೆ. ಸಮಂತಾ ಫೋಟೋಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗೆ ಸಮಂತಾ ಸ್ನೇಹಿತೆ ಶಿಲ್ಪಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಫ್ಯಾಶನ್ ಡಿಸೈನರ್ ಶಿಲ್ಪಾ ರೆಡ್ಡಿ ಜೊತೆ ಇರುವ ಫೋಟೋಗಳನ್ನು ಹೆಚ್ಚಾಗಿ ಸಮಂತಾ ಶೇರ್ ಮಾಡುತ್ತಿದ್ದಾರೆ.

  ಅಕ್ಕಿನೇನಿ ಹೆಸರು ತೆಗೆದು ಹಾಕಿದ ಸಮಂತಾ

  ಅಕ್ಕಿನೇನಿ ಹೆಸರು ತೆಗೆದು ಹಾಕಿದ ಸಮಂತಾ

  ನಟಿ ಸಮಂತಾ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಸರನ್ನು ಬದಲಾಯಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಸಮಂತಾ ಹೆಸರಿನ ಜೊತೆ ಇದ್ದ ಅಕ್ಕಿನೇನಿ ಸರ್ ನೇಮ್ ಅನ್ನ ಸಮಂತಾ ತೆಗೆದು ಹಾಕಿ, ಕೇವಲ ಎಸ್ ಎನ್ನುವ ಹೆಸರನ್ನು ಮಾತ್ರ ಇರಿಸಿದ್ದಾರೆ. ಸಮಂತಾ ಅವರ ಈ ನಡೆ ಅಕ್ಕಿನೇನಿ ಕುಟುಂಬ ಮತ್ತು ಸಮಂತಾ ನಡುವೆ ಯಾವುದು ಸರಿಯಿಲ್ಲ ಎನ್ನುವ ಅನುಮಾನಕ್ಕೆ ಕಾರಣವಾಗಿತ್ತು.

  ಸಮಂತಾ ಹೇಳಿದ್ದೇನು?

  ಸಮಂತಾ ಹೇಳಿದ್ದೇನು?

  ಈ ಬಗ್ಗೆ ಸಮಂತಾ ಇತ್ತೀಚಿಗಷ್ಟೆ ಹಿಂದಿಯ ಖ್ಯಾತ ಪತ್ರಕರ್ತೆ ಅನುಪಮಾ ಚೋಪ್ರಾ ಜೊತೆ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು, "ನಾನು ಯಾವುದೇ ವಿವಾದಗಳು ಅಥವಾ ಟ್ರೋಲ್ ಗಳಿಗೆ ಪ್ರತಿಕ್ರಿಯಿಸಲು ಬಯಸಿದಾಗ ಮಾತ್ರ ಮಾತನಾಡುತ್ತೇನೆ. ಆದರೆ ಜನರು ನನ್ನನ್ನು ಕೇಳಿದಾಗ ಅಲ್ಲ" ಎಂದಿದ್ದರು. "ನಾನು ಯಾವುದೇ ವಿಷಯಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನನಗೆ ಚರ್ಚೆ ಮಾಡಲು ಇಷ್ಟವಿಲ್ಲ. ಹೇಗೆ ಎಲ್ಲರಿಗೂ ತಮ್ಮದೆ ಆದ ಅಭಿಪ್ರಾಯ ಹೇಳಲು ಹಕ್ಕಿದೆಯೊ ಹಾಗೆ ನನಗೂ ಹಕ್ಕಿದೆ" ಎಂದು ಹೇಳಿದರು.

  ಅಕ್ಕಿನೇನಿ ಕುಟುಂಬದ ಬಗ್ಗೆ ಸಮಂತಾ ಮಾತು

  ಅಕ್ಕಿನೇನಿ ಕುಟುಂಬದ ಬಗ್ಗೆ ಸಮಂತಾ ಮಾತು

  ಇದೇ ಸಮಯದಲ್ಲಿ ಸಮಂತಾ, ಅಕ್ಕಿನೇನಿ ಕುಟುಂಬದ ಭಾಗವಾಗಿರುವುದು ನಟನಾ ಆಯ್ಕೆಗೆ ಹೊರೆಯಲ್ಲ ಎಂದು ಹೇಳಿದ್ದರು. "ನನಗೆ ದೊಡ್ಡ ಅಭಿಮಾನಿ ಬಳಗ ಮತ್ತು ಅವರ ಪ್ರೀತಿ ಇದೆ. ಆದರೆ ನಾನು ಮತ್ತು ನನ್ನ ವೃತ್ತಿ ಆಯ್ಕೆಗಳ ನಡುವೆ ಯಾವತ್ತು ಅಭಿಮಾನಿಗಳನ್ನಾಗಲಿ ಅಥವಾ ಯಾರನ್ನೂ ಸೇರಿಸುವುದಿಲ್ಲ" ಎಂದು ಸಮಂತಾ ಹೇಳಿದ್ದರು.

  English summary
  Telugu Actress Samantha Akkineni cycling with her friends, photo viral on social media.
  Friday, September 3, 2021, 15:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X