For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಬಳಿಕ ಮುಂಬೈನಲ್ಲಿ ಮನೆ ಖರೀದಿಗೆ ಮುಂದಾದ ಮತ್ತೋರ್ವ ಸೌತ್ ಸ್ಟಾರ್ ನಟಿ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಅನೇಕ ಮಂದಿ ಇತ್ತೀಚಿಗೆ ಮುಂಬೈನಲ್ಲಿ ಮನೆ ಖರೀದಿ ವಿಚಾರವಾಗಿ ಸುದ್ದಿಯಾಗಿದ್ದಾರೆ. ಸೌತ್ ನಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಅನೇಕ ಕಲಾವಿದರು ಮುಂಬೈನಲ್ಲಿ ಮನೆ ಖರೀದಿ ಮಾಡುತ್ತಿದ್ದಾರೆ.

  ಇತ್ತೀಚಿಗೆ ತೆಲುಗಿನಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಮನೆ ಖರೀದಿಸುವ ಮೂಲಕ ಸುದ್ದಿಯಾಗಿದ್ದರು. ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಆಗಾಗ ಮುಂಬೈನಲ್ಲೂ ನೆಲೆಸಿರುತ್ತಾರೆ. ಇನ್ನು ನಟ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಕೂಡ ಮುಂಬೈನಲ್ಲಿ ಬಂಗಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ಮತ್ತೋರ್ವ ತೆಲುಗು ಸ್ಟಾರ್ ಮುಂಬೈನಲ್ಲಿ ಮನೆ ಖರೀದಿಗೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಬ್ಯಾಕ್ ಲೆಸ್ ಟಾಪ್ ನಲ್ಲಿ ನಟಿ ಸಮಂತಾ ಮಿಂಚಿಂಗ್: ಹಾಟ್ ಫೋಟೋ ವೈರಲ್ಬ್ಯಾಕ್ ಲೆಸ್ ಟಾಪ್ ನಲ್ಲಿ ನಟಿ ಸಮಂತಾ ಮಿಂಚಿಂಗ್: ಹಾಟ್ ಫೋಟೋ ವೈರಲ್

  ತೆಲುಗು ಸ್ಟಾರ್ ನಟಿ ಸಮಂತಾ ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದಾರಂತೆ. ಈಗಾಗಲೇ ಫ್ಲ್ಯಾಟ್ ಹುಡುಕಲು ಪ್ರಾರಂಭಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ದಿ ಫ್ಯಾಮಿಲಿ ಮ್ಯಾನ್-2 ಸೂಪರ್ ಸಕ್ಸಸ್ ನ ಬಳಿಕ ಸಮಂತಾ ಬಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗುವ ಸಾಧ್ಯತೆ ಇದೆ. ಹಾಗಾಗಿ ಮುಂಬೈನಲ್ಲಿ ಮನೆ ಖರೀದಿಗೆ ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಇನ್ನು ನಾಗಚೈತನ್ಯ ಕೂಡ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾಗಿ ಎಲ್ಲಾ ಪ್ಲಾನ್ ಮಾಡಿಯೇ ಸಮಂತಾ ಮುಂಬೈನಲ್ಲಿ ಮನೆ ಖರೀದಿಗೆ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

  KGF 2 ರಿಲೀಸ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ Prashanth Neel | Filmibeat Kannada

  ಸಮಂತಾ ಸದ್ಯ ಬಹುನಿರೀಕ್ಷೆಯ ಶಕುಂತಲಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಗುಣಶೇಖರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳಿನ ಒಂದು ಸಿನಿಮಾದಲ್ಲೂ ಸಮಂತಾ ನಟಿಸುತ್ತಿದ್ದಾರೆ. ಇನ್ನು ಮೂಲಗಳ ಪ್ರಕಾರ ಸದ್ಯದಲ್ಲೇ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Telugu Actress Samantha Akkineni looking to buy new house in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X