ಬ್ಯಾಕ್ ಲೆಸ್ ಟಾಪ್ ನಲ್ಲಿ ನಟಿ ಸಮಂತಾ ಮಿಂಚಿಂಗ್: ಹಾಟ್ ಫೋಟೋ ವೈರಲ್
ತೆಲುಗು ಸಿನಿಮಾರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗತ್ತಲೇ ಇರುತ್ತಾರೆ. ಇತ್ತೀಚಿಗೆ ದಿ ಫ್ಯಾಮಿಲಿ ಮ್ಯಾನ್-2 ವಿಚಾರವಾಗಿ ಸಮಂತಾ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದರು. ವೆಬ್ ಸೀರಿಸ್ ನಲ್ಲಿ ಅಕ್ಕಿನೇನಿ ಸೊಸೆಯ ನಟನೆಗೆ ಚಿತ್ರಪ್ರಿಯರು ಫಿದಾ ಆಗಿದ್ದರು.
ರಾಜಿಯಾಗಿ ಚಿತ್ರಪ್ರಿಯರ ಮನಗೆದಿದ್ದ ಸಮಂತಾ ಇದೀಗ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆಯುವಕರ ನಿದ್ದೆ ಗೆಡಿಸಿದ್ದಾರೆ. ಬ್ಯಾಕ್ ಲೆಸ್ ಟಾಪ್ ನಲ್ಲಿ ಮಿಂಚಿರುವ ಸಮಂತಾ ಹೊಸ ಲುಕ್ ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಬಿಳಿಬಣ್ಣದ ಬ್ಯಾಕ್ ಲೆಸ್ ಟಾಪ್ ಮತ್ತು ನೀಲಿ ಬಣ್ಣದ ಜೀನ್ ನಲ್ಲಿ ಸಮಂತಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಸಮಂತಾ ಅಕ್ಕಿನೇನಿ ಹಾಟ್ ಅವತಾರಕ್ಕೆ ಅಭಿಮಾನಿಗಳು ಮಾತ್ರವಲ್ಲದೇ ಸಿನಿಮಾ ಗಣ್ಯರು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್ ಕಾಮೆಂಟ್ ಮಾಡಿ, ಉಫ್...! ಎಂದು ಕಾಮೆಂಟ್ ಮಾಡಿದ್ದಾರೆ.

ಫ್ಯಾಷನ್ ಐಕಾನ್ ಸಮಂತಾ ಆಗಾಗ ಹೊಸ ಫೋಟೋ ಶೂಟ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿರುತ್ತಾರೆ. ತರಹೇವಾರಿ ಬಟ್ಟೆಗಳಲ್ಲಿ ಮಿಂಚುವ ಸಮಂತಾ ಸ್ಟೈಲಿಶ್ ಲುಕ್ ಮೂಲಕವೂ ಅಭಿಮಾನಿಗಳ ಮನ ಸೆಳೆಯುತ್ತಿರುತ್ತಾರೆ. ಇನ್ನು ಸಮಂತಾ ವರ್ಕೌಟ್ ವಿಡಿಯೋ ಕೂಡ ವೈರಲ್ ಆಗುತ್ತಿರುತ್ತೆ. ಇದೀಗ ಹಾಟ್ ಅವತಾರದ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಸಮಂತಾ ಕೊನೆಯದಾಗಿ 'ದಿ ಫ್ಯಾಮಿಲಿ ಮ್ಯಾನ್-2' ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಸಮಂತಾ ತಮಿಳು ಸಿನಿಮಾ ಜೊತೆಗೆ ಬಹುನಿರೀಕ್ಷೆಯ 'ಶಾಕುಂತಲಂ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್-2'ನ ದೊಡ್ಡ ಸಕ್ಸಸ್ ನಲ್ಲಿರುವ ಸಮಂತಾ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.


Click it and Unblock the Notifications











