For Quick Alerts
  ALLOW NOTIFICATIONS  
  For Daily Alerts

  'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್: ಅನುಷ್ಕಾ ಬದಲು ಸಮಂತಾ ನಟನೆ

  |

  ಕರ್ನಾಟಕ ಸಂಗೀತದ ಮೇರು ಗಾಯಕಿ ಬೆಂಗಳೂರು ನಾಗರತ್ನಮ್ಮ ಅವರ ಜೀವನ ತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆ ನೀಡಿರುವ ನಾಗರತ್ನಮ್ಮ ಅವರ ಜೀವನವನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ವಿಜಯದಶಮಿ ದಿನ ಸೆಟ್ಟೇರಬೇಕಿತ್ತು. ಆದರೀಗ ಸಿನಿಮಾ ತಾತ್ಕಾಲಿಕ ಸ್ಥಗಿತವಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಹಳ್ಳಿ ಹುಡುಗಿ ಲುಕ್ಕಲ್ಲಿ ರಚಿತಾ ಫುಲ್ ಮಿಂಚಿಂಗ್ | Rachita Ram Grand entry | Filmibeat Kannada

  ಭಾರಿ ಕುತೂಹಲ ಮೂಡಿಸಿರುವ ನಾಗರತ್ನಮ್ಮ ಬಯೋಪಿಕ್ ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸಿನಿಪ್ರಿಯರ ಪ್ರಶ್ನೆಯಾಗಿತ್ತು. ಈ ಕುತೂಹಲಕ್ಕೀಗ ತೆರೆಬಿದ್ದಿದೆ. ನಟಿ ಅನುಷ್ಕಾ ಶೆಟ್ಟಿ ಮತ್ತು ಸಮಂತಾ ಇಬ್ಬರಲ್ಲಿ ಒಬ್ಬರು ನಾಗರತ್ನಮ್ಮ ಆಗಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ನಾಗರತ್ನಮ್ಮ ಪಾತ್ರ ಸಮಂತಾ ಪಾಲಾಗಿದೆ ಎನ್ನಲಾಗುತ್ತಿದೆ. ಮುಂದೆ ಓದಿ...

  ವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾವರ್ಷದ ಹಿಂದೆ ಮಾಡಿದ ತಪ್ಪಿಗೆ ನಿರ್ದೇಶಕಿಯ ಕ್ಷಮೆ ಕೋರಿದ ಸಮಂತಾ

   ನಾಗರತ್ನಮ್ಮ ಬಯೋಪಿಕ್ ಮುಂದೂಡಿಕೆ

  ನಾಗರತ್ನಮ್ಮ ಬಯೋಪಿಕ್ ಮುಂದೂಡಿಕೆ

  88 ವರ್ಷದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ನಾಗರತ್ನಮ್ಮ ಜೀವನವನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡು ಯುವ ಪೀಳಿಗೆಗೆ ಸವಾಲು ಎಸೆದಿರುವ ಶ್ರೀನಿವಾಸ್ ರಾವ್ ಅವರಿಗೆ ಕೊರೊನಾ ಅಡ್ಡಿಯಾಗಿದೆ. ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ 88 ವರ್ಷದ ಸಿಂಗೀತಂ ಶ್ರೀನಿವಾಸ್ ರಾವ್ ಮನೆಯಿಂದ ಹೊರಬರದಿರಲು ನಿರ್ಧರಿಸಿದ್ದಾರಂತೆ. ಹಾಗಾಗಿ ಸಿನಿಮಾವನ್ನು ತಡವಾಗಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

   ಅನುಷ್ಕಾ ಶೆಟ್ಟಿ ಹೆಸರು ಕೇಳಿಬರುತ್ತಿತ್ತು

  ಅನುಷ್ಕಾ ಶೆಟ್ಟಿ ಹೆಸರು ಕೇಳಿಬರುತ್ತಿತ್ತು

  ಬೆಂಗಳೂರು ನಾಗರತ್ನಮ್ಮ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ, ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲ ಸಿನಿಪ್ರಿಯರಲ್ಲಿತ್ತು. ಈ ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ ಮತ್ತು ಸಮಂತಾ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅನುಷ್ಕಾ ಶೆಟ್ಟಿ ನಟಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಅನುಷ್ಕಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗದ ಕಾರಣ, ಈ ಸಿನಿಮಾ ಈಗ ಸಮಂತಾ ಪಾಲಾಗಿದೆ.

  ನಟಿ ಸಮಂತಾ ಹಾಕಿದ ಸವಾಲು ಸ್ವೀಕರಿಸಿದ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ

   ನಾಗರತ್ನಮ್ಮ ಆಗಿ ನಟಿಸುತ್ತಿದ್ದಾರೆ ಸಮಂತಾ

  ನಾಗರತ್ನಮ್ಮ ಆಗಿ ನಟಿಸುತ್ತಿದ್ದಾರೆ ಸಮಂತಾ

  ಬೆಂಗಳೂರು ನಾಗರತ್ನಮ್ಮ ಆಗಿ ನಟಿಸಲು ಸಮಂತಾ ಕೂಡ ಉತ್ಸುಕರಾಗಿದ್ದಾರೆ. 'ಜಾನು' ಸಿನಿಮಾದ ಬಳಿಕ ಸಮಂತಾ ಅಧಿಕೃತವಾಗಿ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸಿರೀಸ್ ನಲ್ಲಿ ನಟಿಸುತ್ತಿರುವ ಸಮಂತಾ ಬಳಿಕ 'ಬೆಂಗಳೂರು ನಾಗರತ್ನಮ್ಮ' ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ.

   ಪ್ಯಾನ್ ಇಂಡಿಯಾ ಸಿನಿಮಾ 'ಬೆಂಗಳೂರು ನಾಗರತ್ನಮ್ಮ'

  ಪ್ಯಾನ್ ಇಂಡಿಯಾ ಸಿನಿಮಾ 'ಬೆಂಗಳೂರು ನಾಗರತ್ನಮ್ಮ'

  ನಾಗರತ್ನಮ್ಮ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ನಿರ್ಮಾಣವಾಗಲಿದೆಯಂತೆ. ದಕ್ಷಿಣ ಭಾರತದ ಭಾಷೆಯ ಜೊತೆಗೆ ಹಿಂದಿಯಲ್ಲೂ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಅಂದ್ಹಾಗೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

  ಸಮಂತಾ ಅಂದ್ರೆ ಇಷ್ಟ ಎಂದ ಅರ್ಜುನ್ ಕಪೂರ್ ಗೆ ನಾಗಚೈತನ್ಯ ಪತ್ನಿ ಹೇಳಿದ್ದೇನು?ಸಮಂತಾ ಅಂದ್ರೆ ಇಷ್ಟ ಎಂದ ಅರ್ಜುನ್ ಕಪೂರ್ ಗೆ ನಾಗಚೈತನ್ಯ ಪತ್ನಿ ಹೇಳಿದ್ದೇನು?

   ನಾಗರತ್ನಮ್ಮ ಬಗ್ಗೆ...

  ನಾಗರತ್ನಮ್ಮ ಬಗ್ಗೆ...

  ನಂಜನಗೂಡು ಮೂಲದ ನಾಗರತ್ನಮ್ಮ, 5 ವರ್ಷದವರಾಗಿದ್ದಾಗಲೇ ದೇವದಾಸಿಯಾದವರು. 15ನೇ ವಯಸ್ಸಿನಲ್ಲಿ ಪಿಟೀಲು ವಾದಕಿಯಾಗಿ ಹಾಗೂ ನರ್ತಕಿಯಾಗಿ ಗುರುತಿಸಿಕೊಂಡರು. ಅಮೋಘ ಕಂಠಸಿರಿಯ ಮೂಲಕ ನಾಡಿನಾದ್ಯಂತ ಜನಪ್ರಿಯರಾಗಿದ್ದರು. ಹಾಡುಗಾರಿಕೆಯಿಂದಲೇ ಪ್ರಸಿದ್ಧಿ ಪಡೆದಿದ್ದ ಅವರನ್ನು ಮೈಸೂರು ಮಹಾರಾಜರು ಗೌರವಿಸಿದ್ದರು. ತ್ಯಾಗರಾಜ ಆರಾಧನೆ ವೈಭವದಿಂದ ನಡೆಯುವಂತೆ ಮಾಡಿದ ಕೀರ್ತಿ ನಾಗರತ್ನಮ್ಮ ಅವರದ್ದು. ನಾಗರತ್ನಮ್ಮ ಕೊನೆಯ ದಿನಗಳನ್ನು ಮದ್ರಾಸಿನಲ್ಲಿ ಕಳೆದರು. 1952ರಲ್ಲಿ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

  English summary
  Actress Samantha to play Bangalore Nagaratnam role. The film directed by Singeetham Srinivasa Rao has been postponed to Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X