ಬಾಲಿವುಡ್ ಸುದ್ದಿ ಬೆನ್ನಲ್ಲೇ ಸಮಂತಾ ಮೊದಲ ಸಂಭಾವನೆ ವಿಡಿಯೋ ವೈರಲ್!

ನಟಿ ಸಮಂತಾ ಸೌತ್ ಸಿನಿಮಾರಂಗದ ಟಾಪ್ ನಟಿಯರಲ್ಲಿ ಒಬ್ಬರು. ದಶಕದಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿರುವ ಸಮಂತಾ ಯಾವ ಸ್ಟಾರ್ ನಟಿಗೂ ಕಡಿಮೆ ಇಲ್ಲ. ಸಮಂತಾ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇಂದು ಸಮಂತಾ ಸಂಭಾವನೆ ಕೋಟಿ ಕೋಟಿ.‌ ಇಂದು ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಸಮಂತಾ ಅಂದು ಇಷ್ಟು ಕಡಿಮೆ ಸಂಬಳಕ್ಕೆ ದುಡಿದರೆಂದರೆ ಅಚ್ಚರಿ ಆಗದೇ ಇರದು. ಈ ಹಿಂದೆಯೇ ಸಮಂತಾ ಈ ಬಗ್ಗೆ ಮಾತನಾಡಿದ್ದು ಈಗ ವಿಡಿಯೋ ವೈರಲ್ ಆಗಿದೆ.

ನಟಿ ಸಮಂತಾ ಮೊದಲು ಪಡೆದ ಸಂಭಾವನೆ ಎಷ್ಟು ಎನ್ನುವ ಬಗ್ಗೆ ಮತ್ತೆ ಚರ್ಚೆ ಆಗುತ್ತಿದೆ. ಸಮಂತಾ ಹೇಳಿದ ಮಾತುಗಳನ್ನು ಕೇಳಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ಕಡಿಮೆ ಹಣಕ್ಕೆ ಸಮಂತಾ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹಾಗಿದ್ದರೆ ಸಮಂತಾ ಪಡೆದ ಸಂಭಾವನೆ ಎಷ್ಟು ಮತ್ತು ಯಾವ ಕೆಲಸದಲ್ಲಿದ್ದರು ಎನ್ನುವುದನ್ನು ಮುಂದೆ ಓದಿ....

ಶಾಲೆ ಓದುತ್ತಿರುವಾಗಲೇ ದುಡಿಮೆಗೆ ಇಳಿದ ನಟಿ!

ಶಾಲೆ ಓದುತ್ತಿರುವಾಗಲೇ ದುಡಿಮೆಗೆ ಇಳಿದ ನಟಿ!

ಸಮಂತಾ ಕಳೆದ ಕೆಲವು ತಿಂಗಳಿನ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನಿಮ್ಮ ಮೊದಲ ಸಂಬಳ ಎಷ್ಟು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಮಂತಾ ಯಾವುದೇ ಮುಜುಗರವಿಲ್ಲದೆ ಉತ್ತರ ನೀಡಿದ್ದಾರೆ ಅಲ್ಲದೆ ಅವರು ತಮ್ಮ ಮೊದಲ ಸಂಭಾವನೆಯನ್ನು ಪಡೆದದ್ದು ಶಾಲಾದಿನಗಳಲ್ಲಿ ಎನ್ನುವುದನ್ನು ಕೂಡ ರಿವೀಲ್ ಮಾಡಿದ್ದಾರೆ. 10 ಅಥವಾ 11ನೇ ತರಗತಿ ಓದುತ್ತಿದ್ದಾಗ ನಾನು ನನ್ನ ಮೊದಲ ಸಂಬಳವನ್ನು ಪಡೆದುಕೊಂಡೆ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಸಮಂತಾ ಬಾಲಿವುಡ್‌ ಹಾರುತ್ತಿದ್ದಾರೆ ಎನ್ನುವ ಸುದ್ದಿ ಬಂದ ಬೆನ್ನಲ್ಲೇ ಹಳೆಯ ವಿಡಿಯೋ ವೈರಲ್.

ನಟಿ ಸಮಂತಾ ಮೊದಲ ಸಂಭಾವನೆ ₹500!

ಸಮಂತಾ ಸಂಭಾವನೆಯಾಗಿ ಮೊದಲು ಪಡೆದದ್ದು 500 ರೂ. ಸಂಬಳವಂತೆ. ಈ ವಿಚಾರವನ್ನು ವಿಡಿಯೋ ಮಾಡುವ ಮೂಲಕ ಸಮಂತಾ ಹೇಳಿಕೊಂಡಿದ್ದಾರೆ. "ನನ್ನ ಮೊದಲ ಸಂಬಳ ₹500. ಹೋಟೆಲೊಂದರಲ್ಲಿ, ದಿನ 8 ಗಂಟೆ ಕಾರ್ಯಕ್ರಮ ನಿರೂಪಣೆ ಮಾಡಿದ್ದಕ್ಕಾಗಿ ನನಗೆ ಸಿಕ್ಕ ಸಂಭಾವನೆ ಇದು. ಬಹುಶಃ ನಾನು ಆಗ 10 ಅಥವಾ 11ನೇ ತರಗತಿ ಓದುತ್ತಿದ್ದೆ" ಎಂದು ನಟಿ ಸಮಂತಾ ಹೇಳಿಕೊಂಡಿದ್ದಾರೆ. ಸಮಂತಾ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೋಟಿ, ಕೋಟಿ ಸಂಭಾವನೆ ಪಡೆಯುವ ನಟಿ!

ಕೋಟಿ, ಕೋಟಿ ಸಂಭಾವನೆ ಪಡೆಯುವ ನಟಿ!

ಸದ್ಯ ಸಮಂತಾ ಟಾಪ್‌ನಲ್ಲಿ ಇದ್ದಾರೆ. ಪ್ರಸ್ತುತ ಸಮಂತಾ ಸಂಭಾವನೆ ಕೂಡ ಹೆಚ್ಚಾಗಿದೆ. 'ಪುಷ್ಪ 2' ಸಿನಿಮಾದ ಹಾಡಿನ ಬಳಿಕ ಸಮಂತಾ ಮತ್ತಷ್ಟು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಒಂದು ಸಿನಿಮಾಗೆ ಸಮಂತ 2ವರೆ ಕೋಟಿಯಿಂದ ಮೂರು ಕೋಟಿ ರೂ. ತನಕ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಇಂದು ಕೋಟಿ ಕೋಟಿ ಗಳಿಸುವ ಈ ಸೂಪರ್ ಸ್ಟಾರ್ ನಟಿ, ಐನೂರು ರೂಪಾಯಿಗೆ ಕೆಲಸ ಮಾಡಿದ್ದಾರೆ ಎಂದರೆ ಅಚ್ಚರಿ ಆಗದೆ ಇರೋದು ಹಾಗಾಗಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆದಿದೆ.

ಬಾಲಿವುಡ್‌ಗೆ ಸಮಂತಾ ಎಂಟ್ರಿ

ಬಾಲಿವುಡ್‌ಗೆ ಸಮಂತಾ ಎಂಟ್ರಿ

ಇನ್ನು ಸಮಂತ ಬಾಲಿವುಡ್ ಎಂಟ್ರಿ ಬಗ್ಗೆ ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿದೆ. ಅದರಲ್ಲೂ ಕಾಫಿ ವಿತ್ ಕರಣ್ ಶೋನಲ್ಲಿ ಸಮಂತ ಭಾಗಿಯಾದ ಬಳಿಕ ಈ ವಿಚಾರ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಮತ್ತೊಂದು ಮೂಲದ ಪ್ರಕಾರ ನಟಿ ಸಮಂತಾ ಬಾಲಿವುಡ್ನ ಆಯುಷ್ಮಾನ್ ಖುರಾನಾ ಜೊತೆಗೆ ಮೊದಲ ಹಿಂದಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actress Samantha First Salary Is 500 Rupees, Know Moree,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X