For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನ ವದಂತಿ ನಡುವೆ ತ್ರಿಷಾ, ಕೀರ್ತಿ ಸುರೇಶ್ ಜೊತೆ ಸಮಂತಾ ಮಸ್ತ್ ಪಾರ್ಟಿ: ಫೋಟೋ ವೈರಲ್

  |

  ಕಳೆದ ಕೆಲವು ದಿನಗಳಿಂದ ಟಾಲಿವುಡ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ದಂಪತಿ ನಡುವಿನ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸ್ಟಾರ್ ಜೋಡಿಯ ನಡುವೆ ಯಾವುದು ಸರಿ ಇಲ್ಲ ಇಬ್ಬರು ಈಗಾಗಲೇ ಬೇರೆ ಬೇರೆ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇತ್ತೀಚಿಗಷ್ಟೆ ಇಬ್ಬರು ಸಿನಿಮಾ ಟ್ರೈಲರ್ ವಿಚಾರವಾಗಿ ಒಬ್ಬರಿಗೊಬ್ಬರು ಮಾತುಕತೆ ನಡೆಸಿ ವದಂತಿಗೆ ಬ್ರೇಕ್ ಹಾಕಿದ್ದರು ಸಹ ವಿಚ್ಛೇದನ ವದಂತಿ ನಿಂತಿಲ್ಲ.

  ಸಮಂತಾ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆಯಲು ಬರೋಬ್ಬರಿ 250 ಕೋಟಿ ರೂ. ಜೀವನಾಂಶ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗೆ ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯ ಬಿರುಕಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇಷ್ಟಾದರೂ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇತ್ತೀಚಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದ ಸಮಂತಾ ಇದರ ಬೆನ್ನಲ್ಲೇ ಚಿತ್ರರಂಗದ ಬೆಸ್ಟ್ ಗೆಳತಿಯ ಜೊತೆ ಪಾರ್ಟಿ ಮಾಡಿ ಮಸ್ತ್ ಮಜಾ ಮಾಡಿದ್ದಾರೆ. ಮುಂದೆ ಓದಿ..

  ತಿಮ್ಮಪ್ಪನ ಮೊರೆಹೋದ ಸಮಂತಾ: ವಿಚ್ಛೇದನ ವದಂತಿ ಬಗ್ಗೆ ಕೇಳಿದ್ದಕ್ಕೆ ಸಿಡಿದೆದ್ದ ನಟಿ ತಿಮ್ಮಪ್ಪನ ಮೊರೆಹೋದ ಸಮಂತಾ: ವಿಚ್ಛೇದನ ವದಂತಿ ಬಗ್ಗೆ ಕೇಳಿದ್ದಕ್ಕೆ ಸಿಡಿದೆದ್ದ ನಟಿ

  ತ್ರಿಷಾ, ಕೀರ್ತಿ ಜೊತೆ ಸಮಂತಾ ಪಾರ್ಟಿ

  ತ್ರಿಷಾ, ಕೀರ್ತಿ ಜೊತೆ ಸಮಂತಾ ಪಾರ್ಟಿ

  ನಟಿ ಸಮಂತಾ ಅವರ ವೈಯಕ್ತಿಕ ಬದುಕಿನ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ವದಂತಿ ನಡುವೆಯೂ ಪಾರ್ಟಿ, ಮಸ್ತಿ ಅಂತ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸಮಂತಾ ಇತ್ತೀಚಿಗಷ್ಟೆ ಹೈದರಾಬಾದ್ ನಿಂದ ಚೆನ್ನೈಗೆ ತೆರಳಿದ್ದರು. ಚೆನ್ನೈನಲ್ಲಿ ತನ್ನ ಸ್ನೇಹಿತರ ಗ್ಯಾಂಗ್ ಭೇಟಿಯಾಗಿದ್ದಾರೆ. ಸಮಂತಾ ಸ್ನೇಹ ಕೂಟದಲ್ಲಿ ಸ್ಟಾರ್ ನಟಿಯರಾದ ತ್ರಿಷಾ, ಕೀರ್ತಿ ಸುರೇಶ, ಕಲ್ಯಾಣ್ ಪ್ರಿಯದರ್ಶನ್ ಸೇರಿದಂತೆ ಅನೇಕರು ಪಾರ್ಟಿ ಮಾಡಿ ಮಸ್ತ್ ಮಜಾ ಮಾಡಿದ್ದಾರೆ.

  ಫೋಟೋ ಶೇರ್ ಸಂಭ್ರಮಿಸಿದ ಸ್ಯಾಮ್

  ಫೋಟೋ ಶೇರ್ ಸಂಭ್ರಮಿಸಿದ ಸ್ಯಾಮ್

  ಎಲ್ಲರೂ ಒಟ್ಟಿಗೆ ಸೇರಿ ಎಂಜಾಯ್ ಮಾಡಿರುವ ಫೋಟೋಗಳನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಮಂತಾ ಮತ್ತು ಸ್ನೇಹಿತರ ಪಾರ್ಟಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋ ಶೇರ್ ಮಾಡಿ ಎಲ್ಲಾ ಸ್ನೇಹಿತರಿಗೂ ಸಮಂತಾ ಧನ್ಯವಾದ ತಿಳಿಸಿದ್ದಾರೆ.

  ತಿರುಪತಿಗೆ ಭೇಟಿ ನೀಡಿದ್ದ ಸಮಂತಾ

  ತಿರುಪತಿಗೆ ಭೇಟಿ ನೀಡಿದ್ದ ಸಮಂತಾ

  ಅಂದಹಾಗೆ ಸಮಂತಾ ಇತ್ತೀಚಿಗಷ್ಟೆ ತಿರುಪತಿಗೆ ಭೇಟಿ ನೀಡಿದ್ದು, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ಮಾಧ್ಯಮದವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ ಸಮಂತಾಗೆ ವಿಚ್ಛೇದನ ವದಂತಿ ಬಗ್ಗೆ ಪ್ರಶ್ನೆ ತೂರಿ ಬಂದಿದೆ. ಮೊದಲೇ ಮಾಧ್ಯಮದವರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ಸಮಂತಾಗೆ ಈ ಪ್ರಶ್ನೆ ಮತ್ತಷ್ಟು ಸಿಟ್ಟೇರಿಸಿತ್ತು.

  ಮಾಧ್ಯಮದವರ ಮೇಲೆ ಸಮಂತಾ ಕಿಡಿ

  ಮಾಧ್ಯಮದವರ ಮೇಲೆ ಸಮಂತಾ ಕಿಡಿ

  ದೇವಸ್ಥಾನಕ್ಕೆ ಬಂದಿದ್ದೀನಿ ಬುದ್ದಿ ಇದಿಯಾ ನಿಮಗೆ? ಎಂದು ಸಮಂತಾ ಪತ್ರಕರ್ತರ ಮೇಲೆ ರೇಗಾಡಿದ್ರು. ಸಮಂತಾ ಮಾಧ್ಯಮದವರ ಜೊತೆ ನಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಳಿಕ ಸಮಂತಾ ಚೆನ್ನೈನಲ್ಲಿ ಕಾಣಿಸಿಕೊಂಡು ಸ್ನೇಹಿತರ ಜೊತೆ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದಾರೆ.

  'ಲವ್ ಸ್ಟೋರಿ' ಪ್ರಮೋಷನ್ ನಲ್ಲಿ ನಾಗ ಚೈತನ್ಯ

  'ಲವ್ ಸ್ಟೋರಿ' ಪ್ರಮೋಷನ್ ನಲ್ಲಿ ನಾಗ ಚೈತನ್ಯ

  ಇತ್ತ ಪತಿ ನಾಗ ಚೈತನ್ಯ ತನ್ನ 'ಲವ್ ಸ್ಟೋರಿ' ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಸ್ನೇಹಿತರ ಜೊತೆ ಪಾರ್ಟಯಲ್ಲಿ ಬ್ಯುಸಿಯಾಗಿದ್ರೆ ಇತ್ತ ನಾಗ ಚೈತನ್ಯ ಲವ್ ಸ್ಟೋರಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು. ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಇಬ್ಬರೂ ಗೆಸ್ಟ್ ಆಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನಾಗ ಚೈತನ್ಯಗೆ ನಾಯಕಿಯಾಗಿ ಸಾಲಿ ಪಲ್ಲವಿ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟಂಬರ್ 24ರಂದು ತೆರೆಗೆ ಬರುತ್ತಿದೆ. ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಮತ್ತು ನಾಗ್ ಇಬ್ಬರು ವಿಚ್ಛೇದನ ವದಂತಿ ಬಗ್ಗೆ ತುಟಿಬಿಚ್ಚುತ್ತಿಲ್ಲ.

  English summary
  Tollywood Actress Samantha parties with Actress Trisha, Keerthy Suresh and Kalyani, shares photo on Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X