41 ದಿನಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮರಳಿದ ಸಮಂತಾ, ಹಂಚಿಕೊಂಡಿದ್ದೇನು?
ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸಿನಿಮಾಗಳಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ಬಹಳ ಸಕ್ರಿಯರು.
ಇನ್‌ಸ್ಟಾಗ್ರಾಂನಲ್ಲಿ ಪ್ರತಿದಿನ ಒಂದಲ್ಲ ಒಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಸಲಿಗೆ ಸಮಂತಾ ತಾವು ಹಂಚಿಕೊಳ್ಳುವ ಪ್ರತಿ ಪೋಸ್ಟ್‌ಗೆ ಲಕ್ಷಾಂತರ ರುಪಾಯಿ ಹಣ ಸಹ ಪಡೆಯುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ, ಸಾಕಷ್ಟು ಸಕ್ರಿಯರಾಗಿರುವ ಸಮಂತಾ, ಕಳೆದ 41 ದಿನಗಳಿಂದ ಹಠಾತ್ತನೆ ಸಾಮಾಜಿಕ ಜಾಲತಾಣದಿಂದ ನಾಪತ್ತೆಯಾಗಿದ್ದರು. ಈಗ ನಲವತ್ತೊಂದು ದಿನಗಳ ಬಳಿಕ ಹಠಾತ್ತನೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದಾರೆ ಸಮಂತಾ.

41 ದಿನಗಳ ಬಳಿಕ ಪೋಸ್ಟ್
ಜುಲೈ 21 ರಂದು ತಮ್ಮದೇ ಚಿತ್ರ ಒಳಗೊಂಡ ಜಾಹೀರಾತೊಂದರ ಪೋಸ್ಟ್ ಅನ್ನು ಸಮಂತಾ ಹಂಚಿಕೊಂಡಿದ್ದರು. ಮೈ ಫಿಟ್‌ನೆಸ್‌ನ ಪೀನಟ್ ಮಸಾಲಾದ ಜಾಹೀರಾತೊಂದನ್ನು ಹಂಚಿಕೊಂಡಿದ್ದರು. ಆದರೆ ಅದಾದ ಬಳಿಕ ಒಂದೇ ಒಂದು ಪೋಸ್ಟ್ ಅನ್ನು ಸಹ ಸಮಂತಾ ಹಂಚಿಕೊಂಡಿಲ್ಲ. ಈ ನಡುವೆ ಸಮಂತಾರ ಕಾಫಿ ವಿತ್ ಕರಣ್ ಶೋನ ಎಪಿಸೋಡ್ ಪ್ರಸಾರವಾಗಿ ಸಾಕಷ್ಟು ವೈರಲ್ ಆಯಿತು. ಹಾಗಿದ್ದರೂ ಸಹ ಸಮಂತಾ ಯಾವುದೇ ಪೋಸ್ಟ್ ಹಾಕಿರಲಿಲ್ಲ. ಸೋಷಿಯಲ್ ಮೀಡಿಯಾ ಡಿಟಾಕ್ಸ್‌ಗೆ ಒಳಗಾಗುತ್ತಿದ್ದೇನೆ ಹಾಗಾಗಿ ಪೋಸ್ಟ್ ಹಾಕುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಸಿನಿಮಾ ಕುರಿತ ಪೋಸ್ಟ್ ಹಾಕಿರುವ ಸಮಂತಾ
ಇದೀಗ 41 ದಿನಗಳ ಬಳಿಕ ತಮ್ಮದೇ ಹೊಸ ಸಿನಿಮಾ ಕುರಿತಂತೆ ಪೋಸ್ಟ್ ಹಂಚಿಕೊಂಡಿದ್ದಾರೆ ಸಮಂತಾ. 'ಯಶೋಧ' ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ಸಮಂತಾ ನಟಿಸಿದ್ದು, ಆ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕ ಪ್ರಕಟಣೆಯ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಯಶೋಧ' ಸಿನಿಮಾದ ಪೋಸ್ಟರ್ ಸೆಪ್ಟೆಂಬರ್ 9 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಹರೇಶ್ ನಾರಾಯಣ್ ಹಾಗೂ ಹರಿ ಶಂಕರ್ ನಿರ್ದೇಶನ ಮಾಡಿದ್ದಾರೆ.

ಪೋಸ್ಟ್ ಒಂದಕ್ಕೆ ಲಕ್ಷಾಂತರ ಹಣ ಪಡೆವ ನಟಿ
ದಕ್ಷಿಣ ಭಾರತದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅತಿ ಹೆಚ್ಚು ಗಳಿಸುವ ನಟಿಯರಲ್ಲಿ ಸಮಂತಾ ಟಾಪ್‌ನಲ್ಲಿದ್ದಾರೆ. ಇವರು ಹಂಚಿಕೊಳ್ಳುವ ಒಂದು ಪೋಸ್ಟ್‌ಗೆ 30 ಲಕ್ಷದಿಂದ ಒಂದು ಕೋಟಿಯ ವರೆಗೂ ಶುಲ್ಕ ಪಡೆಯುತ್ತಾರೆ ಎನ್ನಲಾಗುತ್ತದೆ. ಇತರೆ ಕೆಲವು ಸಿನಿಮಾಗಳ ಹಾಡುಗಳನ್ನು ಟ್ರೈಲರ್‌ಗಳನ್ನು ಸಹ ಸಮಂತಾ ಹಂಚಿಕೊಳ್ಳುತ್ತಾರೆ ಅದೂ ಸಹ ಸಂಭಾವನೆಗೆ. ವಿಜಯ್ ನಟನೆಯ 'ಬೀಸ್ಟ್' ಸಿನಿಮಾದ ಹಾಡು ಹಂಚಿಕೊಂಡು ಅದಕ್ಕೆ ಡ್ಯಾನ್ಸ್ ಸಹ ಮಾಡಿದ್ದ ಸಮಂತಾ ಅದಕ್ಕಾಗಿ 40 ಲಕ್ಷ ಪಡೆದಿದ್ದರಂತೆ. ಸಮಂತಾ, ತಮ್ಮ ಸಾಮಾಜಿಕ ಜಾಲತಾಣ ಖಾತೆ ಹ್ಯಾಂಡಲ್ ಮಾಡು ಸಂಸ್ಥೆಯೊಂದರ ನೆರವು ಪಡೆಯುತ್ತಿದ್ದು, ಜೊತೆಗೆ ಮೂವರು ಮಂದಿ ಸಿಬ್ಬಂದಿಯನ್ನು ಸಹ ಪ್ರತ್ಯೇಕವಾಗಿ ನೇಮಿಸಿಕೊಂಡಿದ್ದಾರಂತೆ.

ಹಲವು ಸಿನಿಮಾ ಸಮಂತಾ ಕೈಯಲ್ಲಿ
ಸಿನಿಮಾ ವಿಷಯಕ್ಕೆ ಮರಳುವುದಾದರೆ ಸಮಂತಾ ಪ್ರಸ್ತುತ ದಕ್ಷಿಣ ಭಾರತದ ಟಾಪ್ ನಟಿ. ಪೂಜಾ ಹೆಗ್ಡೆಗಿಂತಲೂ ಹೆಚ್ಚಿನ ಬೇಡಿಕೆ ಸಮಂತಾಗೆ ಇದೆ. 2020 ರಲ್ಲಿ ಬಿಡುಗಡೆ ಆದ ರೀಮೇಕ್ ಸಿನಿಮಾ 'ಜಾನು' ಬಳಿಕ 'ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. 'ಪುಷ್ಪ' ಸಿನಿಮಾದ ಹಾಡು ಸಹ ಸೂಪರ್ ಹಿಟ್. ತಮಿಳಿನಲ್ಲಿ ಬಿಡುಗಡೆ ಆದ 'ಕಾತುವಾಕು ರೆಂಡು ಕಾದಲ್' ಅಷ್ಟೇನೂ ಯಶಸ್ವಿಯಾಗಿಲ್ಲ. ಇದೀಗ, ವಿಜಯ್ ದೇವರಕೊಂಡ ಜೊತೆಗೆ 'ಖುಷಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಯಶೋಧ', 'ಶಾಕುಂತಲಂ', ಹಿಂದಿಯ ಸಿನಿಮಾ, ವರುಣ್ ಧವನ್ ಜೊತೆಗೆ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಇಂಗ್ಲೀಷ್‌ನ 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ.


Click it and Unblock the Notifications











