ತೆಲುಗು ನಟಿ ಸಮಂತಾ ಬಳಿ ಕೆಲಸ ಮಾಡುವ ಅವಕಾಶ; ನೀವು ಮಾಡಬೇಕಿರುವುದು ಇಷ್ಟೇ!
ಟಾಲಿವುಡ್ ನಟಿ ಸಮಂತಾ ಮತ್ತೆ ಚಿತ್ರರಂಗದತ್ತ ಗಮನ ಹರಿಸುತ್ತಿದ್ದಾರೆ. ಮಯೋಸೈಟಿಸ್ ಸಮಸ್ಯೆ ವಿರುದ್ಧ ಹೋರಾಡುತ್ತಲೇ 'ಸಿಟಾಡೆಲ್' ವೆಬ್ ಸೀರಿಸ್ ಮುಗಿಸಿದ್ದಾರೆ. ಆದರೆ 'ಖುಷಿ' ಬಳಿಕ ಆಕೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಆರೋಗ್ಯ ಸಮಸ್ಯೆಯಿಂದ ಕೊಂಚಮಟ್ಟಿಗೆ ಆಕೆ ಚೇತರಿಸಿಕೊಂಡಿದ್ದಾರೆ.
ಸಿನಿಮಾ ಬಿಟ್ಟು ಉದ್ಯಮ ಕ್ಷೇತ್ರದಲ್ಲಿ ಕೂಡ ಸಮಂತಾ ಗುರ್ತಿಸಿಕೊಂಡಿದ್ದಾರೆ. ಸೈಡ್ ಬ್ಯುಸಿನೆಸ್ ಎನ್ನುವಂತ ಕೆಲ ಉದ್ಯಮಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್ ಎಂಬ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. 'ಮಾ ಇಂಟಿ ಬಂಗಾರಂ' ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದೂ ಸ್ಯಾಮ್ ಲೀಡ್ ರೋಲ್‌ನಲ್ಲಿ ನಟಿಸಲಿದ್ದಾರೆ. ಹುಟ್ಟುಹಬ್ಬದ ದಿನವೇ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದೆ.

ಕೆಂಪು ಬಣ್ಣದ ಸೀರೆ ಉಟ್ಟು ಕೈಯಲ್ಲಿ ಬಂದೂಕು ಹಿಡಿದ ಸಮಂತಾ ವೀರನಾರಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೊಂದು ಐತಿಹಾಸಿಕ ಕ್ರಾಂತಿಕಾರಿ ಕಥೆ ಆಧರಿತ ಸಿನಿಮಾ. ಕಳೆದ ವರ್ಷ ಸ್ಯಾಮ್ ನಟಿಸಿದ 'ಶಾಕುಂತಲಂ' ಹಾಗೂ 'ಖುಷಿ' ಸಿನಿಮಾಗಳು ಬಿಡುಗಡೆ ಆಗಿ ಸೋತಿದ್ದವು. ಡಿವೋರ್ಸ್ ಬೆನ್ನಲ್ಲೇ ಮಯೋಸೈಟಿಸ್ ಸಮಸ್ಯೆಯಿಂದ ಬಳಲಿದ್ದ ಸ್ಯಾಮ್‌ಗೆ ಈ ಸಿನಿಮಾಗಳ ಸೋಲು ಮತ್ತಷ್ಟು ಬೇಸರ ಮೂಡಿಸಿತ್ತು.
ನಟಿಯಾಗಿ ಮೋಡಿ ಮಾಡುವ ಜೊತೆಗೆ ಸಮಂತಾ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದಾರೆ. 'ಸಾಕಿ' ಎಂಬ ಗಾರ್ಮೆಂಟ್ ಬ್ರಾಂಡ್ ಅನ್ನು ನಡೆಸುತ್ತಿದ್ದಾರೆ. ಸದ್ಯ ಈ ಕಂಪೆನಿಯಲ್ಲಿ ಕೆಲಸ ಖಾಲಿ ಇದೆ. ನೀವು ಕೂಡ ಕೆಲಸ ಮಾಡಬಹುದು. ಅದಕ್ಕೆ ಮಾಡಬೇಕಿರುವುದು ಇಷ್ಟೇ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಮಂತಾ ಈ-ಮೇಲ್ ಐಡಿ ನೀಡಿ ಉದ್ಯೋಗಕಾಂಕ್ಷಿಗಳು ಸ್ವವಿವರ ಮೇಲ್ ಮಾಡಿ ಎಂದಿದ್ದಾರೆ.
ಸೂಕ್ತ ವಿದ್ಯಾರ್ಹತೆ ಉಳ್ಳವರು ವಿವರ ಕಳುಹಿಸುವಂತೆ ಪ್ರಕಟಿಸಲಾಗಿದೆ. ಫ್ಯಾಶನ್ ಡಿಸೈನ್ ಮ್ಯಾನೇಜರ್/ಅಸಿಸ್ಟೆಂಟ್ ಮ್ಯಾನೇಜರ್, ಫ್ಯಾಶನ್ ಡಿಸೈನ್ ಎಕ್ಸಿಕ್ಯೂಟಿವ್, ಬ್ರಾಂಡ್ ಮಾರ್ಕೆಟಿಂಗ್ ಹಾಗೂ ಇನ್ನೂ ಎರಡು ಹುದ್ದೆಗಳಿಗೆ ಸೂಕ್ತವಾದವರ ಆಯ್ಕೆಗಾಗಿ ಅವರು ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
ಡಿವೋರ್ಸ್ ಬೆನ್ನಲ್ಲೇ ಸಮಂತಾ 'ಪುಷ್ಪ' ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. 'ಊ ಅಂಟಾವಾ ಮಾವ' ಎಂದು ಕುಣಿದು ಎಲ್ಲರನ್ನು ಕುಣಿಸಿದ್ದರು. 2 ವರ್ಷಗಳ ಹಿಂದೆ ಈ ಸಾಂಗ್ ಸೂಪರ್ ಹಿಟ್ ಆಗಿತ್ತು. ಸದ್ಯ ಚಿತ್ರದ ಸೀಕ್ವೆಲ್ ಬರ್ತಿದೆ. ಈ ಚಿತ್ರದಲ್ಲೂ ಸ್ಯಾಮ್ ಹೆಜ್ಜೆ ಹಾಕುತ್ತಾರಾ? ಅಥವಾ ಬೇರೆ ನಟಿ ಬಂದು ಕುಣಿಯುತ್ತಾರಾ? ಎನ್ನುವುದು ಗೊತ್ತಿಲ್ಲ.
'ಪುಷ್ಪ'-2 ಸಿನಿಮಾ ವಿಚಾರ ಪಕ್ಕಕ್ಕಿಟ್ಟರೆ ಸದ್ಯ ಮತ್ತೊಂದು ಚಿತ್ರದಲ್ಲಿ ಅಲ್ಲು ಅರ್ಜುನ್ ಜೋಡಿಯಾಗಿ ಸ್ಯಾಮ್ ನಟಿಸೋ ಬಗ್ಗೆ ಗುಸುಗುಸು ಶುರುವಾಗಿದೆ. 'ಜವಾನ್' ಸಿನಿಮಾ ಖ್ಯಾತಿಯ ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಘೋಷಣೆ ಆಗಿದೆ. ಆ ಚಿತ್ರಕ್ಕೆ ಸ್ಯಾಮ್ ನಾಯಕಿ ಆಗುತ್ತಾರೆ ಎನ್ನಲಾಗ್ತಿದೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಮಂತಾ ಹಾಟ್ ಹಾಟ್ ಫೋಟೊಶೂಟ್ ಮೂಲಕ ಗಮನ ಸೆಳರಯುತ್ತಾರೆ. ವಿವಿಧ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರ್ತಿಸಿಕೊಂಡಿದ್ದಾರೆ. ಆ ಮೂಲಕ ಒಳ್ಳೆ ಆದಾಯ ಸಂಪಾದನೆ ಮಾಡುತ್ತಿದ್ದಾರೆ.


Click it and Unblock the Notifications











