ಗಂಡನ 'ಪ್ರೇಯಸಿ'ಯನ್ನು ಮನತುಂಬಿ ಹೊಗಳಿದ ಸಮಂತಾ

ನಟಿಯರು ಪರಸ್ಪರ ಗೆಳತಿಯರಾಗಲಾರರು, ಅದರಲ್ಲಿಯೂ ಒಬ್ಬ ನಾಯಕಿ ಮತ್ತೊಬ್ಬರನ್ನು ಹೊಗಳುವುದು ದೂರದ ಮಾತು ಎಂಬುದು ಸಿನಿ ಉದ್ಯಮದ ಪ್ರಚಲಿತದ ಮಾತು.

Recommended Video

ವೆಬ್ ಸಿರೀಸ್ ನಲ್ಲಿ ಸಾಯಿ ಪಲ್ಲವಿ ನಟನೆ | Filmibeat Kannada

ಆದರೆ ಇದಕ್ಕೆ ಅನ್ವರ್ಥವಾಗಿ ನಟಿ ಸಮಂತಾ ಮತ್ತೊಬ್ಬ ನಾಯಕ ನಟಿಯನ್ನು ಮನತುಂಬಿ ಹೊಗಳಿದ್ದಾರೆ. ಅದೂ ಆಕೆ ತನ್ನ ಗಂಡನ 'ಪ್ರೇಯಸಿ'.

ಪ್ರೇಯಸಿ ಎಂದ ಕೂಡಲೆ ನಿಜವಾದ ಪ್ರೇಯಸಿ ಎಂದುಕೊಳ್ಳುವಂತಿಲ್ಲ. ಸಿನಿಮಾದಲ್ಲಿ ಗಂಡ ನಾಗ ಚೈತನ್ಯ ಒಟ್ಟಿಗೆ ನಾಯಕಿಯಾಗಿ ನಟಿಸುತ್ತಿರುವ ಪ್ರತಿಭಾನ್ವಿತ ನಟಿಯನ್ನು ಸಮಂತಾ ಹೊಗಳಿದ್ದಾರಂತೆ. ಆದರೆ ಇದು ಹೊಗಳಿಕೆಯೋ ಎಚ್ಚರಿಕೆಯೋ ಅರ್ಥವಾಗುತ್ತಿಲ್ಲ.

ಲವ್‌ ಸ್ಟೋರಿ ಸಿನಿಮಾದ ಭಾಗ ನೋಡಿರುವ ಸಮಂತಾ

ಲವ್‌ ಸ್ಟೋರಿ ಸಿನಿಮಾದ ಭಾಗ ನೋಡಿರುವ ಸಮಂತಾ

ಲವ್ ಸ್ಟೋರಿ ಸಿನಿಮಾದಲ್ಲಿ ನಾಗಚೈತನ್ಯಾ ಗೆ ನಾಯಕಿಯಾಗಿ ನಟಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಶೇ 80 ರಷ್ಟು ಮುಗಿದಿದೆ. ಈ ಸಿನಿಮಾದ ನಟನೆ ನೋಡಿಯೇ ಸಮಂತ ಸಾಯಿ ಪಲ್ಲವಿಯನ್ನು ಹೊಗಳಿರುವುದು.

ಸಾಯಿ ಪಲ್ಲವಿಯನ್ನು ಹೊಗಳಿದ ಸಮಂತಾ

ಸಾಯಿ ಪಲ್ಲವಿಯನ್ನು ಹೊಗಳಿದ ಸಮಂತಾ

ಚಿತ್ರೀಕರಣ ಆಗಿರುವ ಭಾಗವನ್ನು ಸಮಂತಾ ಗೆ ನಾಗಚೈತನ್ಯ ತೋರಿಸಿದ್ದಾರಂತೆ. ಸಿನಿಮಾವನ್ನು ಹಿನ್ನೆಲೆ ಸಂಗೀತ ಇಲ್ಲದೆ ನೋಡಿದ ಸಮಂತಾ, 'ಸಾಯಿ ಪಲ್ಲವಿ ತನ್ನ ಪ್ರತಿಭೆಯಿಂದ ಎಲ್ಲರನ್ನೂ ಮೀರಿಸುತ್ತಿದ್ದಾಳೆ' ಎಂದರಂತೆ.

ಅಸೂಯೆಯಿಂದ ಹೇಳಿದ ಮಾತೇ ಅದು?

ಅಸೂಯೆಯಿಂದ ಹೇಳಿದ ಮಾತೇ ಅದು?

ಸಾಯಿ ಪಲ್ಲವಿಯ ಪ್ರತಿಭೆಯನ್ನು ಸಮಂತಾ ಹೊಗಳಿದರೋ ಅಥವಾ ಸಿನಿಮಾದಲ್ಲಿ ನಾಗಚೈತನ್ಯರನ್ನು ಪಕ್ಕಕ್ಕೆ ಸರಿಸುವಂತಹಾ ನಟನೆ ಮಾಡಿದ್ದಾರೆ ಎಂಬ ಅಸೂಯೆಯಿಂದ ಈ ಮಾತು ಹೇಳಿದರೇ ಅನುಮಾನ ಎದ್ದಿದೆ.

ಸಾಯಿ ಪಲ್ಲವಿ ಜೊತೆ ನರ್ತಿಸಲು ತಿಣುಕಾಡಿದ ಚೈತನ್ಯ

ಸಾಯಿ ಪಲ್ಲವಿ ಜೊತೆ ನರ್ತಿಸಲು ತಿಣುಕಾಡಿದ ಚೈತನ್ಯ

ಲವ್ ಸ್ಟೋರಿ ಸಿನಿಮಾದ ಹಾಡಿನ ಚಿತ್ರೀಕರಣದ ಸಮಯದಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿ ಜೊತೆಯಾಗಲಿ ನರ್ತಿಸಲು ಕಷ್ಟಪಡುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಸಾಯಿ ಪಲ್ಲವಿ ಅದ್ಭುತ ನೃತ್ಯಗಾರ್ತಿ ಹಾಗಾಗಿ ನಾಗ ಚೈತನ್ಯ ಅವರೊಟ್ಟಿಗೆ ನರ್ತಿಸಲು ಹಲವು ಪಡಿಪಾಟಲು ಪಡುತ್ತಿದ್ದಾರೆಂದು ಈ ಹಿಂದೆ ವರದಿ ಆಗಿತ್ತು.

ಬಹು ನಿರೀಕ್ಷೆಯ ಚಿತ್ರ ಲವ್‌ ಸ್ಟೋರಿ

ಬಹು ನಿರೀಕ್ಷೆಯ ಚಿತ್ರ ಲವ್‌ ಸ್ಟೋರಿ

ಇನ್ನು ಲವ್‌ ಸ್ಟೋರಿ ಸಿನಿಮಾವನ್ನು ಸೂಕ್ಷ್ಮ ಸಂವೇದನೆಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶಿಸಿದ್ದು, ಈ ಕತೆ ಇಬ್ಬರು ಬೇರೆ ಜಾತಿಗಳ ಹುಡುಗ-ಹುಡುಗಿ ನಡುವೆ ನಡೆಯುವ ಪ್ರೇಮಕತೆಯಾಗಿದೆ. ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಗಳು ಇವೆ.

More from Filmibeat

English summary
Actress Samantha praised her husband on screen pair Sai Pallavi. She said Sai Pallavi dominating everyone with her talent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X