For Quick Alerts
  ALLOW NOTIFICATIONS  
  For Daily Alerts

  ಹಾಟ್ ಆಗಿ ಕಾಣಿಸಿಕೊಂಡು ಟ್ರೋಲ್ ಮಾಡೋರಿಗೆ ಸವಾಲ್ ಹಾಕಿದ ನಟಿ ಸಮಂತಾ

  |

  ತೆಲುಗು ಖ್ಯಾತ ನಟಿ ಮಂತಾ ಅಕ್ಕಿನೇನಿ ಡ್ರೆಸ್ ವಿಚಾರದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಮದುವೆ ನಂತರ ಸಮಂತಾ ಧರಿಸುವ ಕೆಲವು ಉಡುಗೆಗಳು ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಿವೆ. ಮದುವೆ ನಂತರ ಅವಕಾಶಗಳು ಸಿಗುತ್ತಿಲ್ಲ ಎಂದು ಒಮ್ಮೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ಆಗಾಗ ತರಹೇವಾರಿ ಫೋಟೋಶೂಟ್ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

  ಪುನೀತ್ ರಾಜ್ ಕುಮಾರ್ ಗೆ ದರ್ಶನ್ ಮಾಡಿದ ವಿಷ್ ಹೇಗಿತ್ತು ನೀವೇ ನೋಡಿ | Darshan Wish for Puneeth

  ಇತ್ತೀಚಿಗೆ ಟ್ರೋಲ್ ಗಳ ವಿಚಾರವಾಗಿ ಸುದ್ದಿಯಾಗುತ್ತಿರುವ ಬಗ್ಗೆ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದ ಸಮಂತಾ ಬಿಕಿನಿಯಲ್ಲಿ ಕಾಣಿಸಿಕೊಂಡು ಅಚ್ಚರಿವೂಡಿಸಿದ್ದರು. ಅಕ್ಕಿನೇನಿ ಕುಟುಂಬದ ಸೊಸೆ ಸಖತ್ ಹಾಟಾಗಿ ಕಾಣಿಸಿಕೊಂಡಿದ್ದು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ನೆಟ್ಟಿಗರಿಂದ ಭಾರಿ ಪ್ರಮಾಣದ ಟ್ರೋಲ್ ಗೆ ಗುರಿಯಾಗಿದ್ದರು. ಇದರಿಂದ ಸಿಟ್ಟಿಗೆದ್ದ ಸಮಂತಾ ಮಧ್ಯದ ಬೆರಳಿನ ಫೋಟೋ ಹಾಕಿ ಖಡಕ್ ವಾರ್ನಿಂಗ್ ಮಾಡಿದ್ದರು. ಆದರೆ ಈ ಬಾರಿ ಟ್ರೋಲ್ ಗಳಿಗೆ ಭಯಪಡುವುದಿಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ..

  ಫ್ಲಾಪ್ ನಟಿ ಎಂದವರ ವಿರುದ್ಧ ಕಿಡಿಕಾರಿದ ತೆಲುಗು ನಟಿ ಸಮಂತಾಫ್ಲಾಪ್ ನಟಿ ಎಂದವರ ವಿರುದ್ಧ ಕಿಡಿಕಾರಿದ ತೆಲುಗು ನಟಿ ಸಮಂತಾ

  ಟ್ರೋಲಿಗರಿಗೆ ಸಮಂತಾ ಸವಾಲ್

  ಟ್ರೋಲಿಗರಿಗೆ ಸಮಂತಾ ಸವಾಲ್

  ಮಾಡುವವರಿಗೆ ಸವಾಲ್ ಹಾಕುವ ಹಾಗೆ ಮತ್ತೆ ಹಾಟಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ಸಮಂತಾ "ನನಗೆ ನೆನಪಿದೆ. ನಾನು ಮದುವೆ ನಂತರ ಹಾಕಿದ್ದ ಒಂದು ಬಟ್ಟೆ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಭಯಾನಕವಾಗಿ ಟ್ರೋಲ್ ಮಾಡಲಾಗಿತ್ತು. ಇದು ತುಂಬಾ ಕಷ್ಟವಾಗಿತ್ತು ನನಗೆ. ಆದರೆ ಎರಡನೆ ಬಾರಿ ನಾನು ಹಾಗೆ ಉಡುಪು ಧರಿಸಿದಾಗ ಅಷ್ಟು ಕೆಟ್ಟದಾಗಿ ಆಗಿರಲಿಲ್ಲ" ಎಂದು ಹೇಳಿದ್ದಾರೆ.

  ಮೊದಲು ಟ್ರೋಲ್ ಗಳ ಬಗ್ಗೆ ಭಯವಾಗಿತ್ತು

  ಮೊದಲು ಟ್ರೋಲ್ ಗಳ ಬಗ್ಗೆ ಭಯವಾಗಿತ್ತು

  "ನಾವು ಮೊದಲ ಹೆಜ್ಜೆ ಇಡುವಾಗ ಅಷ್ಟೆ ಇದೆಲ್ಲ. ಹಾಗಂತ ನಾನು ತುಂಬ ಧೈರ್ಯಶಾಲಿ ಏನಾದರು ಮಾಡುತ್ತೇನೆ ಎಂದು ಹೇಳಲ್ಲ. ಟ್ರೋಲ್ ಗಳ ಬಗ್ಗೆ ನನಗೆ ಭಯವಾಗಿತ್ತು. ಪರಿಸ್ಥಿತಿ ಬದಲಾಗಬೇಕು. ಆ ಬದಲಾವಣೆಯ ಭಾಗವಾಗಲು ನಾನು ಎಷ್ಟು ಸಾಧ್ಯವೋ ಅಷ್ಟು ಮಾಡುತ್ತೇನೆ" ಎಂದಿದ್ದಾರೆ.

  ತಾಯಿಯಾಗುತ್ತಿದ್ದಾರಾ ಸಮಂತಾ? ನಯನತಾರಾ ಜತೆಗಿನ ಸಿನಿಮಾ ಕೈಬಿಡಲು ಕಾರಣ ಇದು?ತಾಯಿಯಾಗುತ್ತಿದ್ದಾರಾ ಸಮಂತಾ? ನಯನತಾರಾ ಜತೆಗಿನ ಸಿನಿಮಾ ಕೈಬಿಡಲು ಕಾರಣ ಇದು?

  ಫ್ಲಾಪ್ ನಟಿ ಎಂದವರ ವಿರುದ್ಧ ಕಿಡಿಕಾರಿದ್ದ ಸಮಂತಾ

  ಫ್ಲಾಪ್ ನಟಿ ಎಂದವರ ವಿರುದ್ಧ ಕಿಡಿಕಾರಿದ್ದ ಸಮಂತಾ

  ಇತ್ತೀಚಿಗಷ್ಟೆ ಫ್ಲಾಪ್ ನಟಿ ಎಂದು ಕರೆದವರ ವಿರುದ್ಧ ಸಮಂತಾ ಕಿಡಿಕಾರಿದ್ದರು. ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಸಿನಿಮಾದಲ್ಲಿ ಸ್ಟಾರ್ ನಟರು ಸಿನಿಮಾದಲ್ಲಿ ಗಮನಾರ್ಹವಾಗಿ ಏನು ಮಾಡದಿದ್ದರು, ಸೂಪರ್ ಎಂದು ಎನ್ನುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಪ್ರಶಂಸೆ ಮಾಡಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ದೋಷಿಸುತ್ತಾರೆ. ಅದೆ ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ಎಂದು ಕರೆಯುತ್ತೀರಿ ಎಂದು ಸಮಂತಾ ಗರಂ ಆಗಿದ್ದರು.

  ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತಮನ್ನಾ: ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಸಮಂತಾಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ತಮನ್ನಾ: ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಸಮಂತಾ

  ಸಮಂತಾ ಬಳಿ ಇರುವ ಸಿನಿಮಾಗಳು

  ಸಮಂತಾ ಬಳಿ ಇರುವ ಸಿನಿಮಾಗಳು

  ಮದುವೆ ನಂತರ ಅವಕಾಶಗಳು ಕಡಿಮೆ ಆಗಿವೆ ಎಂದು ಸಮಂತಾ ಹೇಳಿದ್ದರು. ಸದ್ಯ ಸಮಂತಾ ಬಳಿ ಸದ್ಯ ಎರಡು ಸಿನಿಮಾಗಳಿವೆ. ಒಂದು ತಮಿಳು ಸಿನಿಮಾ ಮತ್ತು ಒಂದು ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳ ಜೊತೆಗೆ ಮೊದಲ ಬಾರಿಗೆ ಸಮಂತಾ ವೆಬ್ ಸೀರಿಸ್ ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ನಲ್ಲಿ ಸಮಂತಾ ಅಭಿನಯಿಸುತ್ತಿದ್ದಾರೆ.

  English summary
  Telugu Actress Samantha Akkineni react to trolls about her outfit after marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X