For Quick Alerts
  ALLOW NOTIFICATIONS  
  For Daily Alerts

  ಅಕ್ಕಿನೇನಿ ಹೆಸರು ತೆಗೆದು ಹಾಕಿದ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಸಮಂತಾ

  By ಫಿಲ್ಮಿಬೀಟ್ ಡೆಸ್ಕ್
  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಮಂತಾ ತೆಲುಗಿನ ಪ್ರಸಿದ್ಧ ಸಿನಿಮಾ ಕುಟುಂಬಗಳಲ್ಲಿ ಒಂದಾಗಿರುವ ಅಕ್ಕಿನೇನಿ ಕುಟುಂಬದ ಸೊಸೆ ಎನ್ನುವುದು ಗೊತ್ತಿರುವ ವಿಚಾರ. ಅಕ್ಕಿನೇನಿ ಹೆಸರು ತೆಲುಗು ಸಿನಿಮಾರಂಗ ಮಾತ್ರವಲ್ಲದೇ ಭಾರತೀಯ ಸಿನಿಮಾರಂಗದಲ್ಲೂ ಚಿರಪರಿಚಿತ ಹೆಸರು. ತೆಲುಗು ಸಿನಿಮಾರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ದೊಡ್ಡ ಗೌರವವಿದೆ. ಇಂಥ ದೊಡ್ಡ ಕುಟುಂಬಕ್ಕೆ ಸೊಸೆ ಆಗಿ ಹೋದವರು ಖ್ಯಾತ ನಟಿ ಸಮಂತಾ.

  2017ರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ ನಾಗ ಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸಮಂತಾ ಅಕ್ಕಿನೇನಿ ಕುಟುಂಬದ ಸೊಸೆಯಾದರು. ನಾಗ ಚೈತನ್ಯ ಮತ್ತು ಸಮಂತಾ ಮದುವೆಯಾಗಿ 3 ವರ್ಷಗಳು ಕಳೆದಿವೆ. ಇಬ್ಬರೂ ಸಂತೋಷದ ಸಂಸಾರ ನಡೆಸುತ್ತಿದ್ದಾರೆ. ಮದುವೆಯಾಗುತ್ತಿದ್ದಂತೆ ಸಮಂತಾ ರುತ್‌ ಪ್ರಭು ಅಂತಿದ್ದ ಹೆಸರನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಿಕೊಂಡಿದ್ದರು.

  ವಿಡಿಯೋ ವೈರಲ್: ಬಸ್ ಏರಿ ಹೊರಟ ಸಮಂತಾ ಮತ್ತು ನಯನತಾರಾವಿಡಿಯೋ ವೈರಲ್: ಬಸ್ ಏರಿ ಹೊರಟ ಸಮಂತಾ ಮತ್ತು ನಯನತಾರಾ

  ಆದರೆ ಸಮಂತಾ ಇತ್ತೀಚಿಗೆ ತನ್ನ ಹೆಸರಿನ ಜೊತೆಯಿದ್ದ ಅಕ್ಕಿನೇನಿ ಹೆಸರನ್ನು ದಿಢೀರ್ ಅಂತ ತೆಗೆದುಹಾಕುವ ಮೂಲಕ ಅಚ್ಚರಿ ಮೂಡಿಸಿದ್ದರು. ಟ್ವಿಟ್ಟರ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಮಂತಾ ತನ್ನ ಹೆಸರು ಬದಲಾಯಿಸಿಕೊಂಡಿದ್ದಾರೆ. ಅಕ್ಕಿನೇನಿ ಹೆಸರನ್ನು ತೆಗೆದುಹಾಕಿ ಕೇವಲ 'ಎಸ್' ಹೆಸರನ್ನು ಮಾತ್ರ ಉಳಿಸಿಕೊಂಡಿದ್ದಾರೆ.


  ಸಮಂತಾ ಹಠಾತ್ತನೇ ತಮ್ಮ ಹೆಸರಿನ ಜೊತೆಯಿದ್ದ ಅಕ್ಕಿನೇನಿ ಹೆಸರು ತೆಗೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಾಗಚೈತನ್ಯ ಹಾಗೂ ಸಮಂತಾ ನಡುವಿನ ಸಂಬಂಧ ಬಿರುಕು ಬಿಟ್ಟಿದೆಯೇ ಎಂಬ ಅನುಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವ್ಯಕ್ತಪಡಿಸಿದ್ದಾರೆ. ಅಥವಾ ಸಮಂತಾ ಹಾಗೂ ನಾಗಾರ್ಜುನ ಕುಟುಂಬದ ನಡುವೆ ಏನಾದರೂ ಭಿನ್ನಾಭಿಪ್ರಾಯಗಳು ತಲೆದೂರಿದಿಯಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

  ಸಮಂತಾ ಹೆಸರು ಬದಲಾಯಿಸಿದ್ದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಆದರೂ ಸಮಂತಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಹೆಸರು ತೆಗೆದು ಹಾಕಿದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ಸಂದರ್ಶನವೊಂದರಲ್ಲಿ ಈ ಬಗ್ಗೆ ಮೌನ ಮುರಿದಿದ್ದಾರೆ. ಪತ್ರಕರ್ತೆ ಅನುಪಮಾ ಚೋಪ್ರಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಮಂತಾ ಯಾವುದೇ ವಿವಾದಗಳು ಮತ್ತು ಟ್ರೋಲ್‌ಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

  "ನಾನು ಯಾವುದೇ ವಿವಾದಗಳು ಅಥವಾ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಲು ಬಯಸಿದಾಗ ಮಾತ್ರ ಮಾತನಾಡುತ್ತೇನೆ. ಆದರೆ ಜನರು ನನ್ನನ್ನು ಕೇಳಿದಾಗ ಅಲ್ಲ" ಎಂದಿದ್ದಾರೆ. ಅಕ್ಕಿನೇನಿ ಹೆಸರು ತೆಗೆದು ಹಾಕಿದ್ದೇಕೆ ಎಂದು ಕೇಳಿದ ಪ್ರಶ್ನೆಗೆ ಸಮಂತಾ, "ನಾನು ಯಾವುದೇ ವಿಷಯಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನನಗೆ ಚರ್ಚೆ ಮಾಡಲು ಇಷ್ಟವಿಲ್ಲ. ಹೇಗೆ ಎಲ್ಲರಿಗೂ ತಮ್ಮದೆ ಆದ ಅಭಿಪ್ರಾಯ ಹೇಳಲು ಅರ್ಹತೆ ಇದೆಯೋ ಹಾಗೆ ನನಗೂ ಹಕ್ಕಿದೆ" ಎಂದು ಹೇಳಿದರು.

  ಇದೇ ಸಮಯದಲ್ಲಿ ಅಕ್ಕಿನೇನಿ ಕುಟುಂಬದ ಭಾಗವಾಗಿರುವುದು ನಟನಾ ಆಯ್ಕೆಗೆ ಹೊರೆಯಲ್ಲ ಎಂದು ಹೇಳಿದ್ದಾರೆ. "ನನಗೆ ದೊಡ್ಡ ಅಭಿಮಾನಿ ಬಳಗ ಮತ್ತು ಅವರ ಪ್ರೀತಿ ಇದೆ. ಆದರೆ ನಾನು ಮತ್ತು ನನ್ನ ವೃತ್ತಿ ಆಯ್ಕೆಗಳ ನಡುವೆ ಯಾವತ್ತು ಅಭಿಮಾನಿಗಳನ್ನಾಗಲಿ ಅಥವಾ ಯಾರನ್ನೂ ಸೇರಿಸುವುದಿಲ್ಲ" ಎಂದು ಸಮಂತಾ ಹೇಳಿದರು.

  ಇದೇ ಸಮಯದಲ್ಲಿ ನಟಿ ಸಮಂತಾ ನಟನೆಯಿಂದ ಬ್ರೇಕ್ ಪಡೆಯುವ ಬಗ್ಗೆಯೂ ಮಾತನಾಡಿದ್ದಾರೆ. ಸತತ 11 ವರ್ಷಗಳಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಸ್ವಲ್ಪ ಸಮಯ ಬ್ರೇಕ್ ಪಡೆಯುವುದಾಗಿಯೂ ಹೇಳಿದ್ದಾರೆ. ಸಮಂತಾ ಇತ್ತೀಚಿಗಷ್ಟೆ ಶಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಸಮಂತಾ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಈ ಸಿನಿಮಾದ ಚಿತ್ರೀಕರಣ ಸದ್ಯ ಗೋವಾದಲ್ಲಿ ನಡೆಯುತ್ತಿದ್ದು, ಸಮಂತಾ ಮತ್ತು ನಯನತಾರಾ ಇಬ್ಬರೂ ಚಲಿಸುತ್ತಿರುವ ಬಸ್ ನ ಫೂಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇನ್ನು ನಟಿ ಸಮಂತಾ ಪತಿ ನಾಗ ಚೈತನ್ಯ ನಟನೆಯ ಲವ್ ಸ್ಟೋರಿ ಸಿನಿಮಾದ ಬಗ್ಗೆಯೂ ಪ್ರತಿಕ್ರಿಯೆ ನೀಡಿ, "ಎಲ್ಲಾ ಸಮಯದಲ್ಲೂ ನಾನು ನನ್ನ ಸಿನಿಮಾ ಬಿಡುಗಡೆ ಬಗ್ಗೆ ಮತ್ತು ನಾಗ ಚೈತನ್ಯ ಸಿನಿಮಾ ಬಿಡುಗಡೆಯ ಬಗ್ಗೆಯೂ ಚಿಂತೆ ಮಾಡುತ್ತೇನೆ" ಎಂದು ಹೇಳಿದ್ದಾರೆ.

  English summary
  Actress Samantha opens up about droping Akkineni surname name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X