ನಿರ್ಮಾಪಕಿಯಾದ ಸಮಂತಾ: ಹೊಸ ಪ್ರೊಡಕ್ಷನ್ ಹೌಸ್ ಘೋಷಣೆ, ಮತ್ತೆ ಸಿನಿಮಾದಲ್ಲಿ ನಟಿಸುವುದಿಲ್ಲವೇ...?

ಆರೋಗ್ಯ ಸಮಸ್ಯೆಗಳಿಂದಾಗಿ ಸಿನಿಮಾಗಳಿಂದ ದೂರವಿರುವ ನಟಿ ಸಮಂತಾ, ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದ ಬೆನ್ನಲ್ಲೇ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ತಮ್ಮದೇ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದು, ನಿರ್ಮಾಪಕಿಯಾಗುತ್ತಿದ್ದಾರೆ.

ಭಾನುವಾರ (ಡಿಸೆಂಬರ್ 10) ನಟಿ ಸಮಂತಾ ರುತ್ ಪ್ರಭು ನಿರ್ಮಾಪಕಿಯಾಗುತ್ತಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಘೋಷಿಸಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್, ತ್ರಾಲಾಲ ಮೂವಿಂಗ್ ಪಿಕ್ಚರ್ಸ್ ಅನ್ನು ಪ್ರಾರಂಭಿಸಿದ್ದಾರೆ. ಇದು "ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ಪ್ರತಿನಿಧಿ" ಎಂದು ಹೇಳಿದ್ದಾರೆ.

Actress Samantha Ruth Prabhu announces production house Tralala Moving Pictures

ನಿರ್ಮಾಪಕಿಯಾದ ನಟಿ ಸಮಂತಾ

ಸಮಂತಾ ರುತ್ ಪ್ರಭು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸಮಂತಾ ತಮ್ಮ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತ್ರಾಲಾಲ ಮೂವಿಂಗ್ ಪಿಕ್ಚರ್ಸ್ ಚಲನಚಿತ್ರ ನಿರ್ದೇಶಕರಿಗೆ "ಅರ್ಥಪೂರ್ಣ" ಕಥೆಗಳನ್ನು ಹೇಳಲು ಒಂದು ವೇದಿಕೆಯಾಗಿದೆ ಎಂದು ಸಮಂತಾ ತಿಳಿಸಿದ್ದಾರೆ.

"ನನ್ನ ಚಿತ್ರ ನಿರ್ಮಾಣ ಸಂಸ್ಥೆ. ತ್ರಾಲಾಲ ಮೂವಿಂಗ್ ಪಿಕ್ಚರ್ಸ್ ಅನ್ನು ಘೋಷಿಸಲು ತುಂಬಾ ಉತ್ಸುಕವಾಗಿದೆ. ತ್ರಾಲಾಲ ಮೂವಿಂಗ್ ಪಿಕ್ಚರ್ಸ್ ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ವಿಷಯಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ನಮ್ಮ ಸಾಮಾಜಿಕ ರಚನೆಯ ಶಕ್ತಿ ಮತ್ತು ಸಂಕೀರ್ಣತೆಯ ಬಗ್ಗೆ ಮಾತನಾಡುವ ಕಥೆಗಳನ್ನು ಆಹ್ವಾನಿಸುವ ಮತ್ತು ಪ್ರೋತ್ಸಾಹಿಸುವ ಸ್ಥಳ. ಚಲನಚಿತ್ರ ನಿರ್ಮಾಪಕರಿಗೆ ಅರ್ಥಪೂರ್ಣ, ಅಧಿಕೃತ ಮತ್ತು ಜಾಗತಿಕ ಕಥೆಗಳನ್ನು ಹೇಳಲು ಒಂದು ವೇದಿಕೆಯಾಗಿದೆ" ಎಂದು ಸಮಂತಾ ಬರೆದುಕೊಂಡಿದ್ದಾರೆ.

Actress Samantha Ruth Prabhu announces production house Tralala Moving Pictures

ಸಮಂತಾ ರುತ್ ಪ್ರಭು ವಿಡಿಯೋಗೆ ನಟ, ನಟಿಯರು, ಚಿತ್ರರಂಗದ ಸಹೋದ್ಯೋಗಿಗಳು ಶುಭ ಹಾರೈಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ಸೀರಿಸ್‌ನ ನಿರ್ದೇಶಕರಾದ ರಾಜ್ ಮತ್ತು ಡಿಕೆ ಕೂಡ "ಆಲ್ ದಿ ಬೆಸ್ಟ್!" ಎಂದು ಸಮಂತಾ ಅವರ ಪೋಸ್ಟ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಟಿ ಪಾರ್ವತಿ ಮೆನನ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ನಟಿ ಸಮಂತಾ ಕೊನೆಯ ಬಾರಿಗೆ ವಿಜಯ ದೇವರಕೊಂಡ ಅವರ ಜೊತೆಗೆ 'ಖುಷಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ತನ್ನ ಆರೋಗ್ಯ ಸಮಸ್ಯೆಯಿಂದಾಗಿ ವಿರಾಮದಲ್ಲಿರುವ ಅವರು ಜಾಹೀರಾತು, ಮಾಡೆಲಿಂಗ್ ಮತ್ತು ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಸಮಂತಾ 'ಸಿಟಾಡೆಲ್‌'ನ ಭಾರತೀಯ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ರಾಜ್ ಮತ್ತು ಡಿಕೆ ಗರಡಿಯಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
Samantha Ruth Prabhu announces production house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X