For Quick Alerts
  ALLOW NOTIFICATIONS  
  For Daily Alerts

  2ನೇ ಸಲ ಲವ್ವಲ್ಲಿ ಬಿದ್ರಾ ಸಮಂತಾ ? ಮುಖ ತೋರಿಸದೇ ಚೈತುಗೆ ಟಾಂಗ್ ಕೊಟ್ರಾ? ಪೋಸ್ಟ್ ವೈರಲ್!

  |

  ದಿನಕ್ಕೊಂದು ಸುದ್ದಿಯಿಂದ ಟಾಲಿವುಡ್ ಬ್ಯೂಟಿ ಸಮಂತಾ ರುತ್‌ಪ್ರಭ್ ಸದ್ದು ಮಾಡುತ್ತಿರುತ್ತಾರೆ. ಸದ್ಯ ಸಮಂತಾ ಮಾಡಿರುವ ಅದೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅದರ ಹಿಂದಿನ ಅರ್ಥ ಏನು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ನಾಗಚೈತನ್ಯಾಗೆ ಡಿವೋರ್ಸ್ ಕೊಟ್ಟು ಸಮಂತಾ ದೂರಾಗಿದ್ದು ಗೊತ್ತೇಯಿದೆ. ಇದೀಗ ಸ್ಯಾಮ್ ಮತ್ತೆ ಪ್ರೀತಿ ಬಿದ್ದಿದ್ದಾರಾ ಸಮಂತಾ? ಎಂದು ಕೆಲವರು ಕೇಳ್ತಿದ್ದಾರೆ.

  ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೈಲೆಂಟ್ ಆಗಿದ್ದ ಸಮಂತಾ ಇದೀಗ ಮುಖ ತೋರಿಸದೇ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಮುದ್ಧಿನ ನಾಯಿಯ ಫೋಟೊ ಹಾಕಿ 'ಡೌನ್ ನಾಟ್ ಔಟ್' ಎಂದು ಬರೆದುಕೊಂಡಿದ್ದರು. ಇದೀಗ ಮತ್ತೊಂದು ಪೋಸ್ಟ್‌ನಲ್ಲಿ ಮುಖ ತೋರಿಸದೇ ತಾವು ತೊಟ್ಟಿರುವ ಟೀಶರ್ಟ್‌ನಲ್ಲಿರೋ ಕೋಟ್‌ನ ಹೈಲೆಟ್ ಮಾಡಿ ಬರೆದುಕೊಂಡಿದ್ದಾರೆ. ಈ ಫೋಟೊ ಅದಕ್ಕೆ ಕೊಟ್ಟಿರುವ ಕ್ಯಾಪ್ಷನ್ ಓದಿ ಓದಿ ಕೆಲವರು ಸುಸ್ತಾಗಿದ್ದಾರೆ. ಇದರ ಅರ್ಥ ಏನಪ್ಪಾ? ಸಮಂತಾ ಏನು ಹೇಳಲು ಹೊರಟಿದ್ದಾರೆ ಎಂದು ಗೊಂದಲಕ್ಕೀಗಿದ್ದಾರೆ.

  "ಹಿಂಸೆ ಕೊಟ್ಟ ಚೈತು.. ಅದಕ್ಕೆ ಡಿವೋರ್ಸ್": ಅತ್ತೆ ಬಳಿ ನೋವು ತೋಡಿಕೊಂಡ ಸಮಂತಾ?

  ಚೈತುಗೆ ಡಿವೋರ್ಸ್ ಕೊಟ್ಟ ಮೇಲೆ ಸದ್ಗುರು ಸಲಹೆಯಂತೆ ಸಮಂತಾ ಮತ್ತೊಂದು ಮದುವೆಗೆ ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಅದರ ಬೆನ್ನಲ್ಲೇ ಸ್ಯಾಮ್ ಹೊಸ ಪೋಸ್ಟ್ ವೈರಲ್ ಆಗಿದೆ. ಅಭಿಮಾನಿಗಳು ಕಾಮೆಂಟ್‌ ಬಾಕ್ಸ್‌ನಲ್ಲಿ ತರಹೇವಾರಿಯಾಗಿ ಕಾಮೆಂಟ್ ಮಾಡ್ತಿದ್ದಾರೆ. ತಮನ್ನಾ ಸೇರಿದಂತೆ ಸೆಲೆಬ್ರೆಟಿಗಳು ಕೂಡ ಕಾಮೆಂಟ್ ಮಾಡಿದ್ದಾರೆ.

   ಮತ್ತೆ ಲವ್ವಲ್ಲಿ ಬಿದ್ರಾ ಸಮಂತಾ?

  ಮತ್ತೆ ಲವ್ವಲ್ಲಿ ಬಿದ್ರಾ ಸಮಂತಾ?

  ಸಮಂತಾ ಟೀಶರ್ಟ್‌ನಲ್ಲಿ ''ಯು ವಿಲ್ ನೆವರ್ ವಾಕ್ ಅಲೋನ್' ಎಂದು ಬರೆದಿದೆ. ಅಂದರೆ ನೀನು ಒಂಟಿಯಾಗಿ ಪ್ರಯಾಣ ಮಾಡಲಾಗದು ಎಂದು ಅರ್ಥ. ಇಲ್ಲಿ ಸಮಂತಾ ಯಾರ ಏಕಾಂಗಿ ಪ್ರಯಾಣವನ್ನು ಉದ್ದೇಶಿಸಿ ಮಾತನಾಡುತ್ತಿದ್ದರೋ ಅರ್ಥವಾಗುತ್ತಿಲ್ಲ. ಡಿವೋರ್ಸ್ ನಂತರ ಸ್ಯಾಮ್, ಚೈತು ಇಬ್ಬರೂ ಒಂಟಿಯಾಗಿಯೇ ಇದ್ದಾರೆ. 2ನೇ ಮದುವೆ ಆಗ್ತಾರೋ ಇಲ್ವೋ ಗೊತ್ತಿಲ್ಲ. ಇನ್ನು ಯಾರೊಟ್ಟಿಗಾದರೂ ರಿಲೇಷನ್‌ನಲ್ಲಿದ್ದಾರೆ ಎನ್ನುವ ಬಗ್ಗೆಯೂ ಮಾಹಿತಿ ಇಲ್ಲ. ಆದರೆ ಕೆಲ ದಿನಗಳ ಹಿಂದೆ ಮತ್ತೆ ಪ್ರೀತಿಲಿ ಬೀಳುವಷ್ಟು ಟೈಮ್ ಇಲ್ಲ ಎಂದು ಸಮಂತಾ ಹೇಳಿದ್ದರು.

   ಮಾಜಿ ಪತಿ ನಾಗಚೈತನ್ಯಾಗೆ ಟಾಂಗ್ ಕೊಟ್ರಾ?

  ಮಾಜಿ ಪತಿ ನಾಗಚೈತನ್ಯಾಗೆ ಟಾಂಗ್ ಕೊಟ್ರಾ?

  ನಾಗ ಚೈತನ್ಯ ಏಕಾಂಗಿಯಾಗಿ ಇರುವುದಿಲ್ಲ. ಎರಡನೇ ಮದುವೆ ಮಾಡಿಕೊಳ್ಳುತ್ತಾನೆ ಎಂದು ಸಮಂತಾ ಸಟೈರ್ ಹಾಕಿದ್ದಾರೆ, ಸಂಗಾತಿ ಇಲ್ಲದೇ ಚೈತು ಇರಲ್ಲ ಎಂದು ಚೈತನ್ಯಗೆ ಸೆಟೈರ್ ಹಾಕಿದ್ದಾರೆ ಎನ್ನುವುದು ಕೆಲವರ ವಾದ. ಒಟ್ಟಿನಲ್ಲಿ ಸಮಂತಾ ಪರೋಕ್ಷವಾಗಿ ಸಟೈರ್ ಹಾಕುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಡಿವೋರ್ಸ್ ಪಡೆದ ಹೊಸತರಲ್ಲೂ ಸಮಂತಾ ಮಾಡಿದ್ದ ಕೆಲ ಪೋಸ್ಟ್‌ಗಳು ಇದೇ ರೀತಿ ಸದ್ದು ಮಾಡಿತ್ತು.

   ನೆಟ್ಟಿಗರಿಂದ ಭಿನ್ನ ವಿಭಿನ್ನ ಕಾಮೆಂಟ್ಸ್

  ನೆಟ್ಟಿಗರಿಂದ ಭಿನ್ನ ವಿಭಿನ್ನ ಕಾಮೆಂಟ್ಸ್

  ಇನ್ನು ಸಮಂತಾ ಮಾಡಿರುವ ಪೋಸ್ಟ್‌ಗೆ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಸಮಂತಾಗೆ ಒಂಟಿ ಜೀವನ ಸಾಕಾಯ್ತಾ? ಬೇರೆಯವರ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ? ಮತ್ತೆ ಮದುವೆಗೆ ಸಿದ್ಧತೆ ನಡೆಸಿದ್ದಾರಾ? ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಮತ್ತೆ ಕೆಲವರು ಮೊನ್ನೆ ಮಾಡಿದ್ದ ಪೋಸ್ಟ್‌ಗೂ ಹೊಸ ಪೋಸ್ಟ್‌ಗೂ ಲಿಂಕ್ ಮಾಡಿ, ಸಮಂತಾ ಮತ್ತೆ ಪ್ರೀತಿಲಿ ಬಿದ್ದಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಮಾತ್ರ ಪೋಸ್ಟ್ ನೋಡಿ ಏನೇನೋ ಅಂದುಕೊಳ್ಳಬೇಡಿ. ಇದು ಲಿವರ್‌ಪೂಲ್ಸ್‌ ಫುಟ್‌ಬಾಲ್ ಕ್ಲಬ್ ಆಂಥಮ್. ಕೋಟ್ ಇಷ್ಟವಾಗಿ ಸ್ಯಾಮ್ ಫೋಟೊ ಹಿಡಿದು ಪೋಸ್ಟ್ ಮಾಡಿದ್ದಾರೆ ಅಷ್ಟೇ ಎನ್ನುತ್ತಿದ್ದಾರೆ.

   ಸಮಂತಾ ಚರ್ಮದ ಸಮಸ್ಯೆ ನಿಜಾನಾ?

  ಸಮಂತಾ ಚರ್ಮದ ಸಮಸ್ಯೆ ನಿಜಾನಾ?

  ತಮ್ಮ ಅನಾರೋಗ್ಯದ ಬಗ್ಗೆ ಸಮಂತಾ ಪರೋಕ್ಷವಾಗಿ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. 'ಡೌನ್ ನಾಟ್ ಔಟ್' ಎನ್ನುವುದಕ್ಕೆ ಅರ್ಥ ನಾನು ಸೋತಿದ್ದೀನಿ, ಆದರೆ ಆಟದಿಂದ ಹೊರಬಿದ್ದಿಲ್ಲ ಎಂದು. ಅಂದರೆ ಸಮಂತಾ ತಮ್ಮ ಆರೋಗ್ಯದ ಬಗ್ಗೆಯೇ ಈ ರೀತಿ ಬರೆದಿದ್ದಾರೆ. ಮತ್ತೆ ವಾಪಸ್ ಎದ್ದು ಬರುವು ಸುಳಿವು ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಮಂತಾ ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದು, ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಲು ಹೋಗ್ತಿದ್ದಾರೆ ಎಂದು ಇತ್ತೀಚೆಗೆ ಗುಸುಗುಸು ಕೇಳಿಬಂದಿತ್ತು. ಸಮಂತಾ ಸದ್ಯ 'ಶಾಕುಂತಲಂ', 'ಯಶೋಧ', 'ಖುಷಿ' ಸಿನಿಮಾಗಳಲ್ಲಿ ಕೆಲಸ ಮಾಡ್ತಿದ್ದಾರೆ.

  ಬಾಲಿವುಡ್ ಬ್ಯೂಟಿ ಅಲ್ಲ, 'ಪುಷ್ಪ'- 2 ಐಟಂ ಸಾಂಗ್‌ನಲ್ಲಿ ಕುಣಿಯೋದು ಆ 'ಲೋಕಲ್' ಹುಡುಗಿ?ಬಾಲಿವುಡ್ ಬ್ಯೂಟಿ ಅಲ್ಲ, 'ಪುಷ್ಪ'- 2 ಐಟಂ ಸಾಂಗ್‌ನಲ್ಲಿ ಕುಣಿಯೋದು ಆ 'ಲೋಕಲ್' ಹುಡುಗಿ?

  English summary
  Actress Samantha Ruth Prabhu cryptic Post on instagram Goes viral. Know More.
  Wednesday, October 12, 2022, 16:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X