ನಾಗಚೈತನ್ಯಾ- ಶೋಭಿತಾ ಡೇಟಿಂಗ್ ಬಗ್ಗೆ ಸಮಂತಾ ಗರಂ ಆಗಿದ್ದು ನಿಜಾನಾ? ದಿಢೀರ್ ಟ್ವೀಟ್ ಮಾಡಿದ್ಯಾಕೆ?
ಸಮಂತಾ- ನಾಗಚೈತನ್ಯಾ ವಿಚ್ಛೇಧನ ಪಡೆದು ದೂರಾಗಿದ್ದು ಗೊತ್ತೇಯಿದೆ. ಇಬ್ಬರು ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸ್ಯಾಮ್ ಮಯೋಸೈಟಿಸ್ ಎನ್ನುವ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು. ಹಾಗಾಗಿ ಅವರ ಸಿನಿಕರಿಯರ್‌ಗೆ ಕೊಂಚ ಹಿನ್ನಡೆಯಾಗಿತ್ತು. ಈ ನಡುವೆ ನಾಗಚೈತನ್ಯಾ ನಟಿ ಶೋಭಿತಾ ಧುಲೀಪಲ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಶುರುವಾಗಿದೆ. ಈ ಬಗ್ಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ನಾಗಚೈತನ್ಯಾ ಹಾಗೂ ಶೋಭಿತಾ ಡೇಟಿಂಗ್ ಬಗ್ಗೆ ಸ್ಯಾಮ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಾಗಿತ್ತು. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. "ಯಾರು ಯಾರ ಜೊತೆ ರಿಲೇಷನ್‌ಶಿಪ್‌ನಲ್ಲಿ ಇದ್ದರೆ ನನಗೇನು? ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರೊಟ್ಟಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿ ಆದ್ರು ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆ ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ಸಮಂತಾ ಹೇಳಿದ್ದಾಗಿ ಸುದ್ದಿಯಾಗಿತ್ತು.

ನಾನು ಈ ರೀತಿ ಹೇಳಲಿಲ್ಲ ಎಂದು ನಟಿ ಸಮಂತಾ ಇದೀಗ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಗ್ರೇಟ್ ಆಂಧ್ರ ವೆಬ್‌ಸೈಟ್ ಮಾಡಿರುವ ಪೋಸ್ಟ್ ರೀಟ್ವೀಟ್ ಮಾಡಿ ಸಮಂತಾ "ನಾನು ಈ ರೀತಿ ಹೇಳಲೇ ಇಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಸ್ಯಾಮ್ ಟ್ವೀಟ್ ವೈರಲ್ ಆಗಿದೆ.ಬಹಳ ದಿನಗಳಿಂದ ನಾಗಚೈತನ್ಯಾ ಹಾಗೂ ಶೋಭಿತಾ ಧುಲೀಪಲ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚೈಸ್ಯಾಮ್ ಲವ್ ಮಾಡಿ ಮದುವೆ ಆಗಿದ್ದರು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಈ ವಿಚಾರವನ್ನು ಬಹಿರಂಗಪಡಿಸಿದ ಮೇಲೆ ಇಬ್ಬರು ತಮ್ಮ ತಮ್ಮ ದಾರಿ ನೋಡಿಕೊಂಡಿದ್ದರು. ಡಿವೋರ್ಸ್ ಬಗ್ಗೆ ಹೆಚ್ಚು ಮಾತನಾಡುವ ಗೋಜಿಗೆ ಹೋಗಿರಲಿಲ್ಲ.
ಇನ್ನು ಇಬ್ಬರು ಡಿವೋರ್ಸ್ ಪಡೆಯಲು ಕಾರಣ ಏನು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ನಾಗಚೈತನ್ಯಾಗೆ ಹೊಸ ಗರ್ಲ್‌ಫ್ರೆಂಡ್ ಸಿಕ್ಕಿದ್ದಾಳೆ ಎನ್ನುವ ಸುದ್ದಿ ಮಾತ್ರ ಕೆಲ ದಿನಗಳಿಂದ ಗುಲ್ಲಾಗಿದೆ. ಆದರೆ ಇಬ್ಬರು ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಇಬ್ಬರೂ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ನಟಿಸದಿದ್ದರೂ ಜೊತೆ ಜೊತೆಯಾಗಿ ಸುತ್ತಾಡುತ್ತಿರುವುದು ಅನುಮಾನದ ಬೆಂಕಿಗೆ ತುಪ್ಪ ಸುರಿದಿತ್ತು. ಇತ್ತೀಚೆಗೆ ಚೈತನ್ಯಾ ಹಾಗೂ ಶೋಭಿತಾ ಲಂಡನ್ ಪ್ರವಾಸಕ್ಕೆ ಹೋಗಿದ್ದರು ಎನ್ನುವ ಗುಲ್ಲಾಗಿತ್ತು.
ಲಂಡನ್‌ನಲ್ಲಿ ಇಬ್ಬರು ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ಹೋಗಿದ್ದರು. ರೆಸ್ಟೊರೆಂಟ್ ಶೆಫ್ ನಾಗಚೈತನ್ಯಾ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ರೆಸ್ಟೊರೆಂಟ್ ಶೆಫ್ ಸುರೇಂದ್ರನ್ ಮೋಹನ್ ಆ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೇಲೆ ಸಖತ್ ವೈರಲ್ ಆಗಿತ್ತು. ಫೋಟೊದಲ್ಲಿ ಹಿಂದೆ ಕುಳಿತಿರುವ ಶೋಭಿತಾರನ್ನು ಮಾರ್ಕ್ ಮಾಡಿ ಇಬ್ಬರು ಡೇಟಿಂಗ್ ಮಾಡುತ್ತಿರುವುದು ನಿಜ ಅಂತ ಫೋಟೋ ವೈರಲ್ ಮಾಡಿದ್ದರು. ಆದರೆ ಕೆಲವರು ಫೋಟೊದಲ್ಲಿ ಹಿಂದೆ ಕೂತಿರೋದು ಶೋಭಿತಾನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಅಂದಹಾಗೆ ಈ ಹಿಂದೆ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ಪ್ರಚಾರದ ವೇಳೆ ಶೋಭಿತಾ ಜೊತೆಗಿನ ಡೇಟಿಂಗ್ ಬಗ್ಗ ಚೈತನ್ಯಾಗೆ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಚೈ "ನನ್ನ ನಗುವೇ ಉತ್ತರ" ಎಂದು ಹೇಳಿ ಜಾರಿಕೊಂಡಿದ್ದರು. ಸಿನಿಮಾಗಳ ವಿಚಾರಕ್ಕೆ ಬಂದರೆ ನಾಗಚೈತನ್ಯಾ 'ಕಸ್ಟಡಿ' ಎನ್ನುವ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಇನ್ನು ಶೋಭಿತಾ ನಟನೆಯ 'ಪೊನ್ನಿಯಿನ್ ಸೆಲ್ವನ್' -2 ರಿಲೀಸ್‌ಗೆ ರೆಡಿಯಾಗಿದೆ. ಬಾಲಿವುಡ್‌ನ ಸಿತಾರ ಹಾಗೂ ಇಂಗ್ಲೀಷ್‌ನ ಮಂಕಿಮ್ಯಾನ್ ಎನ್ನುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ನಿಧಾನವಾಗಿ ಒಂದು ಹಂತಕ್ಕೆ ಚೇತರಿಸಿಕೊಂಡಿದ್ದಾರೆ. ಬಾಲಿವುಡ್‌ನ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ನಟಿಸ್ತಿದ್ಧಾರೆ. 'ಶಾಕುಂತಲಂ' ಏಪ್ರಿಲ್ 14ಕ್ಕೆ ರಿಲೀಸ್ ಆಗ್ತಿದ್ದು ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾ ಚಿತ್ರೀಕರಣದಲ್ಲೂ ಭಾಗಿ ಆಗುತ್ತಿದ್ದಾರೆ.


Click it and Unblock the Notifications











