ಡಿವೋರ್ಸ್ ಪೋಸ್ಟ್ ಡಿಲೀಟ್ ಬಳಿಕ ಇಗೋ ಬಿಡಿ ಎಂದಿದ್ದೇಕೆ ಸಮಂತಾ?
ನಟಿ ಸಮಂತಾ ಕಳೆದ ಕೆಲ ದಿನಗಳಿಂದ ಸದಾ ಸುದ್ದಿಯಲ್ಲಿದ್ದಾರೆ. ಒಂದೆಡೆ ಪತಿ ನಾಗಚೈತನ್ಯ ಜೊತೆಗಿನ ಸಂಬಂಧವನ್ನು ಕಳೆದುಕೊಂಡಿದ್ದರು. ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿ, ಡೈವೋರ್ಸ್ ಕೊಟ್ಟಿದ್ದರು. ಇದಾದ ಬಳಿಕ 'ಪುಷ್ಪ' ಚಿತ್ರದ 'ಊ ಅಂಟಾವ ಮಾವ' ಹಾಡಿಗೆ ಸೊಂಟ ಬಳುಕಿಸಿ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟು ಹಾಕಿದ್ದಾರೆ.
ಸದ್ಯ ಸಮಂತಾ ಸ್ವಿಟ್ಜರ್ಲ್ಯಾಂಡ್‌ನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಸ್ವಿಟ್ಜರ್ಲ್ಯಾಂಡಿನ ಹಿಮದಲ್ಲಿ ಸ್ಕೀಯಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಸ್ಕೀಯಿಂಗ್ ವಿಡಿಯೋಗಳನ್ನಯ ಸಮಂತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.
ಹಿಮದಿಂದ ಆವೃತವಾದ ಪರ್ವತಗಳಲ್ಲಿ ಸಮಂತಾ ಸ್ಕೀಯಿಂಗ್ ಮಾಡಿದ್ದಾರೆ. ಹಳದಿ ಜಾಕೆಟ್ ಮತ್ತು ಬಿಳಿ ಡೆನಿಮ್, ಹೆಲ್ಮೆಟ್, ಸ್ಕೀ ಕನ್ನಡಕ ಧರಿಸಿ ಮಿಂಚಿದ್ದಾರೆ. ಬಿಂದಾಸ್ ಆಗಿ ಸ್ಕೀಯಿಂಗ್ ಮಾಡುತ್ತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವುದರ ಜೊತೆಗೆ ಗಮನ ಸೆಳೆಯುವ ಕ್ಯಾಪ್ಷನ್ ಕೊಟ್ಟಿದ್ದಾರೆ. "ಲೀವ್ ಯುವರ್ ಇಗೋ" ಎಂದು ಸಮಂತಾ ಬರೆದುಕೊಂಡಿದ್ದಾರೆ.

ಇಗೋ ಬಿಡಿ ಎಂದು ಸಮಂತಾ ಯಾರಿಗೆ ಹೇಳಿದ್ದಾರೆ ಎನ್ನುವ ಚರ್ಚೆಗಳು ಕೂಡ ಆರಂಭ ಆಗಿದೆ. ಇದರ ಜೊರೆಗೆ ಸಮಂತಾ ಇದು ನ್ಯೂ ಬಿಗಿನಿಂಗ್ ಅಂತಲೂ ಕ್ಯಾಪ್ಷನ್‌ನಲ್ಲಿ ಬರದು ಕೊಂಡಿದ್ದಾರೆ. ಸಮಂತಾ ಹಾಕಿರುವ 'ನ್ಯೂ ಬಿಗಿನಿಂಗ್' ಅನ್ನೋ ಪದ ಈಗ ಕುತೂಹಲ ಕೆರಳಿಸಿದೆ. ಈಗ ಸಮಂತಾ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರಾ. ಹಾಗಿದ್ದರೆ ಅವರ ಮುಂದಿನ ದಾರಿ ಯಾವುದು, ಸಮಂತಾ ಹೊಸ ಯೋಜನೆಯೇನಾದ್ರೂ ಮಾಡ್ತಿದ್ದಾರಾ ಅಂತೆಲ್ಲ ಅಭಿಮಾನಿಗಳು ಚರ್ಚೆಯಲ್ಲಿ ತೊಡಗಿದ್ದಾರೆ.
ಇನ್ನು, ಪುಷ್ಪ ಸಿನಿಮಾದ ಐಟಂ ಡ್ಯಾನ್ಸ್ ಬಳಿಕ ಸಮಂತಾ ಬೇಡಿಕೆ ಹೆಚ್ಚಾಗಿದೆಯಂತೆ. ಇಷ್ಟು ದಿನ ನಾಯಕಿಯಾಗಿ ಅಭಿನಯಿಸುತ್ತಿದ್ದ ಸಮಂತಾಗೆ ಹೆಚ್ಚಾಗಿ ಐಟಂ ಸಾಂಗ್‌ಗಳಲ್ಲಿ ಡಾನ್ಸ್ ಮಾಡಲು ಬೇಡಿಕೆ ಬರುತ್ತಿದೆಯಂತೆ.


Click it and Unblock the Notifications











