ಮತ್ತೆ ಮದುವೆಯಾಗುವ ಬಗ್ಗೆ ಯೋಚಿಸಿದ್ದೀರಾ ಎಂದ ಅಭಿಮಾನಿ: ಅಂಕಿಅಂಶದ ಸಮೇತ ಉತ್ತರ ಕೊಟ್ಟ ಸಮಂತಾ!
ನಟಿ ಸಮಂತಾ ರುತ್ ಪ್ರಭು ಈಗ ಬರೀ ಸೌತ್ ಇಂಡಿಯಾ ಸ್ಟಾರ್ ಆಗಿ ಉಳಿದಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅವರಿಗೆ ದೇಶದೆಲ್ಲೇಡೆ ಅಭಿಮಾನಿಗಳಿದ್ದಾರೆ. ಕೆಲವೊಮ್ಮೆ ಅಭಿಮಾನಿಗಳ ಜೊತೆಗೆ ಸಮಂತಾ ಸಮಯ ಕಳೆಯುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕುವುದು ಅಥವಾ ಆಸ್ಕ್ ಮಿ ಎನಿಥಿಂಗ್ ಸೆಶನ್‌ಗಳ ಮೂಲಕ ತಮ್ಮ ಫ್ಯಾನ್ಸ್ ಜೊತೆಗೆ ಕನೆಕ್ಷನ್ ಇಟ್ಟುಕೊಳ್ಳುತ್ತಾರೆ.
ಭಾನುವಾರ (ಡಿಸೆಂಬರ್ 17) ಕೂಡ ನಟಿ ಸಮಂತಾ ಆಸ್ಕ್ ಮಿ ಎನಿಥಿಂಗ್ ಸೆಶನ್ ನಡೆಸಿದ್ದಾರೆ. ಇದರಲ್ಲಿ ಅಭಿಮಾನಿಗಳ ಜೊತೆಗೆ ಹಲವು ಸ್ಟಾರ್‌ಗಳು ಕೂಡ ಫನ್ನಿಯಾಗಿ ಪ್ರಶ್ನೆ ಕೇಳಿದ್ದಾರೆ. ಮತ್ತಷ್ಟು ಮಂದಿ ಸೀರಿಯಸ್ ಪ್ರಶ್ನೆ ಕೇಳಿದ್ದರೂ ಕೂಡ ಅವರು ತಮಾಷೆಯಾಗಿ ಉತ್ತರ ನೀಡಿದ್ದಾರೆ.

ಸಮಂತಾ ಎರಡನೇ ಮದುವೆ ಬಗ್ಗೆ ಪ್ರಶ್ನೆ ಕೇಳಿದ ಅಭಿಮಾನಿ
ಈ ಆಸ್ಕ್ ಮಿ ಎನಿಥಿಂಗ್ ಸೆಶನ್‌ನಲ್ಲಿ ಈ ಭಾನುವಾರ ನಿಮಗೆ ಬರುತ್ತಿರುವ ಯೋಚನೆಗಳೆನು ಎಂದು ಕೇಳಿದ್ದಾರೆ. ಅದಕ್ಕೆ ಒಬ್ಬರು "ಕೆಟ್ಟ ವರ್ಷ ಕೊನೆಗೊಳ್ಳುತ್ತಿದೆ" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, "ಐ ಫೀಲ್ ಯಾ" ಎಂದಿದ್ದು, ಹಾರ್ಟ್ ಎಮೋಜಿಗಳನ್ನು ಸೇರಿಸಿದ್ದಾರೆ.
ಮತ್ತೊಬ್ಬ ಅಭಿಮಾನಿ ಅವರ ವೈಯಕ್ತಿಕ ವಿಷಯವನ್ನು ಕೇಳಿದ್ದಾರೆ. ನಾಗಚೈತನ್ಯ ಜೊತೆಗೆ ಡೈವೋರ್ಸ್ ಪಡೆದು ಒಂಟಿಯಾಗಿರುವ ಅವರನ್ನು, "ಮತ್ತೆ ಮದುವೆಯಾಗುವ ಬಗ್ಗೆ ಯೋಚನೆ ಮಾಡುವುದಿಲ್ಲವೇ..?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಮಂತಾ ಅಂಕಿ ಅಂಶಗಳನ್ನು ನೋಡಿ ಫನ್ನಿಯಾಗಿ ಉತ್ತರಿಸಿದ್ದಾರೆ.
ಫ್ಯಾನ್ಸ್ ಪ್ರಶ್ನೆಗೆ "ಅಂಕಿಅಂಶಗಳ ಪ್ರಕಾರ (ನಗುವ ಎಮೋಜಿ) ಅದೊಂದು ಕೆಟ್ಟ ಹೂಡಿಕೆಯಾಗಿದೆ" ಎಂದಿದ್ದಾರೆ. ಜೊತೆಗೆ ಪೋಸ್ಟ್‌ನಲ್ಲಿ ವಿಚ್ಛೇದನ ದರಗಳ ಡೇಟಾವನ್ನು ಸೇರಿಸಿದ್ದಾರೆ. ಮೊದಲ ಡೈವೋರ್ಸ್ ಆದ ಮೇಲೆ ಮತ್ತೆ ಮದುವೆಯಾದಗ ವಿಚ್ಛಧನ ದರ ಎಷ್ಟರ ಮಟ್ಟಿಗೆ... ಎರಡನೇ ಡೈವೋರ್ಸ್ ಬಳಿಕ ಎಷ್ಟು ವಿಚ್ಛೇದನ ಎಂಬಂತ ಡೇಟಾವನ್ನು ಹಂಚಿಕೊಂಡಿದ್ದಾರೆ.

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ
ಸಮಂತಾ 2010 ರಲ್ಲಿ 'ಯೇ ಮಾಯಾ ಚೇಸಾವೆ' ಚಿತ್ರದಲ್ಲಿ ನಾಗ ಚೈತನ್ಯ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆಗಲೇ ಇಬ್ಬರ ನಡುವೆ ಪ್ರೀತಿ ಉಂಟಾಗಿ ನಟ ನಾಗ ಚೈತನ್ಯ ಜೊತೆ ಡೇಟಿಂಗ್ ಪ್ರಾರಂಭಿಸಿದರು. ಅವರು ಜನವರಿ 29, 2017 ರಂದು ಹೈದರಾಬಾದ್‌ನಲ್ಲಿ ಸಮಾರಂಭವೊಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ವಿವಾಹವಾದರು. ಅಕ್ಟೋಬರ್ 2, 2021 ರಂದು ವಿಚ್ಛೇದನ ಪಡೆದರು.
ಸಮಂತಾ ಮುಂದಿನ ಚಲನಚಿತ್ರಗಳು ಮತ್ತು ಪ್ರೋಡಕ್ಷನ್ ಕಂಪನಿ
ಇತ್ತೀಚೆಗೆ, ನಟಿ ಸಮಂತಾ ನಿರ್ಮಾಪಕಿಯಾಗುತ್ತಿರುವ ಬಗ್ಗೆ ಘೋಷಿಸಿದ್ದಾರೆ. ತನ್ನ ಬ್ಯಾನರ್ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಅನ್ನು ಪ್ರಾರಂಭಿಸೊ, ಸಿನಿಮಾ ನಿರ್ಮಾಣಕ್ಕೆ ಪ್ರವೇಶಿಸಿದ್ದಾರೆ. ಈ ಸಂಸ್ಥೆ ಮೂಲಕ ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ವಿಷಯಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ನಮ್ಮ ಸಾಮಾಜಿಕ ರಚನೆಯ ಶಕ್ತಿ ಮತ್ತು ಸಂಕೀರ್ಣತೆಯ ಬಗ್ಗೆ ಮಾತನಾಡುವ ಕಥೆಗಳನ್ನು ಆಹ್ವಾನಿಸುವ ಮತ್ತು ಪ್ರೋತ್ಸಾಹಿಸುವ ಸ್ಥಳವಾಗಲಿದೆ ಎಂದು ಹೇಳಿದ್ದಾರೆ.
ಸಮಂತಾ ಇತ್ತೀಚೆಗಷ್ಟೇ ತೆಲುಗಿನ ಖುಶಿ ಚಿತ್ರದಲ್ಲಿ ನಟ ವಿಜಯ್ ದೇವರಕೊಂಡ ಎದುರು ಕಾಣಿಸಿಕೊಂಡಿದ್ದರು. ಅವರು ಮುಂದಿನ ಪ್ರೈಮ್ ವಿಡಿಯೋದ ವೆಬ್ ಸೀರಿಸ್ ಸಿಟಾಡೆಲ್‌ನ ಇಂಡಿಯನ್ ವರ್ಶನ್‌ನಲ್ಲಿ ವರುಣ್ ಧವನ್ ಜೊತೆಗೆ ನಟಿಸಲಿದ್ದಾರೆ.


Click it and Unblock the Notifications











