For Quick Alerts
  ALLOW NOTIFICATIONS  
  For Daily Alerts

  ಹೊಸ ಚಿತ್ರಕ್ಕೆ ಸ್ಯಾಮ್ ಹೊಸ ಷರತ್ತು: ಮೊದ್ಲೆ ಹಿಂಗೆ ಮಾಡಿದ್ರೆ ಡೈವೋರ್ಸ್ ತಪ್ಪುತ್ತಿತ್ತಾ?

  |

  ನಟಿ ಸಮಂತಾ ಡೈವೋರ್ಸ್‌ ನಂತರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಆದರೆ ಇತ್ತೀಚೆಗೆ ಸ್ಯಾಮ್ ಹೊಸ ಸಿನಿಮಾದಲ್ಲಿ ನಟಿಸಲು ಹೊಸ ಹೊಸ ಕಂಡೀಷನ್ ಹಾಕ್ತಿದ್ದಾರಂತೆ. ಇದನ್ನು ನೋಡಿದವರು ಈ ಕೆಲಸ ಮೊದಲೇ ಮಾಡಿದ್ದರೆ ನಾಗಚೈತನ್ಯಾಗೆ ಡೈವೋರ್ಸ್ ಕೊಡುವುದು ತಪ್ಪುತಿತ್ತು ಎನ್ನುತ್ತಿದ್ದಾರೆ.

  'ಪುಷ್ಪ' ಚಿತ್ರದ ಐಟಂ ಸಾಂಗ್‌ನಲ್ಲಿ ಕುಣಿದ ಮೇಲೆ ಸಮಂತಾ ಕ್ರೇಜ್ ಡಬಲ್ ಆಗಿಬಿಟ್ಟಿದೆ. ಏಕಾಏಕಿ ಹಾಲಿವುಡ್ ಸಿನಿಮಾಗಳಿಗೂ ಸೈನ್ ಮಾಡಿದ್ದಾರೆ. 'ಯಶೋಧ' ಹಾಗೂ 'ಶಾಕುತಲಂ' ಎನ್ನುವ 2 ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೋಡಿಯಾಗಿ 'ಖುಷಿ' ಅನ್ನುವ ಮತ್ತೊಂದು ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಹಾಟ್ ಹಾಟ್ ಫೋಟೊಶೂಟ್‌ಗಳಲ್ಲಿ ಕಾಣಿಸಿಕೊಂಡು ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ಇದೀಗ ಸ್ಯಾಮ್ ಬಗ್ಗೆ ಟಾಲಿವುಡ್‌ನಲ್ಲಿ ಹೊಸ ಗುಸಗುಸು ಕೇಳಿಬರ್ತಿದೆ.

  41 ದಿನಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮರಳಿದ ಸಮಂತಾ, ಹಂಚಿಕೊಂಡಿದ್ದೇನು?41 ದಿನಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮರಳಿದ ಸಮಂತಾ, ಹಂಚಿಕೊಂಡಿದ್ದೇನು?

  ಮೊದಲಿನಿಂದಲೂ ಸಮಂತಾ ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳಲ್ಲೇ ಹೆಚ್ಚು ಹೆಚ್ಚು ನಟಿಸುತ್ತಾ ಬಂದಿದ್ದಾರೆ. ನಾಗಾಚೈತನ್ಯಾ ಜೊತೆ ಮದುವೆ ಆದಮೇಲೂ ಇದೇ ರೀತಿ ಪಾತ್ರಗಳ ಆಯ್ಕೆಯಲ್ಲಿ ಬಹಳ ಚ್ಯೂಸಿಯಾಗಿದ್ದರು. ಸ್ಕಿನ್‌ಶೋ, ಲಿಪ್‌ಲಾಕ್‌, ಬೋಲ್ಡ್ ಸೀನ್‌ಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ 'ಫ್ಯಾಮಿಲಿಮ್ಯಾನ್- 2' ವೆಬ್‌ ಸೀರಿಸ್‌ನಿಂದ ಎಲ್ಲರ ಲೆಕ್ಕಾಚಾರ ಉಲ್ಟಾ ಪಲ್ಟಾ ಮಾಡಿತ್ತು.

  ಸಮಂತಾ ಹೊಸ ಕಂಡೀಷನ್ಸ್ ಏನು?

  ಸಮಂತಾ ಹೊಸ ಕಂಡೀಷನ್ಸ್ ಏನು?

  ಡೈವೋರ್ಸ್ ನಂತರ ಕೂಡ ಬಿಕಿನಿ ತೊಟ್ಟು ಫೋಟೊಶೂಟ್‌ಗಳಲ್ಲಿ ಮಿಂಚಿದ್ದ ಸಮಂತಾ ಯಾಕೋ ಈಹ ವರಸೆ ಬದಲಿಸಿದ್ದಾರೆ ಎನ್ನಲಾಗುತ್ತಿದೆ. ಹೊಸ ಸಿನಿಮಾಗಳಲ್ಲಿ ನಟಿಸಲು ಚೆನ್ನೈ ಚೆಲುವೆ ಸಾಕಷ್ಟು ಕಂಡೀಷನ್ಸ್ ಹಾಕ್ತಿದ್ದಾರಂತೆ. ಇನ್ನು ಮುಂದೆ ಎಕ್ಸ್‌ಪೋಸ್ ಮಾಡಲ್ಲ, ಹದ್ದುಮೀರಿ ಯಾವುದೇ ಹಾಟ್ ದೃಶ್ಯದಲ್ಲಿ ನಟಿಸಲ್ಲ. ಲಿಪ್‌ಲಾಕ್, ಇಂಟಿಮೇಟ್ ರೊಮ್ಯಾನ್ಸ್ ಮಾಡುವುದಿಲ್ಲ ಎಂದು ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಹೇಳುತ್ತಿದ್ದಾರಂತೆ. ಇದಕ್ಕೆ ಒಪ್ಪಿದರೇ ಮಾತ್ರ ಸಿನಿಮಾದಲ್ಲಿ ನಟಿಸಲು ಸೈನ್ ಮಾಡ್ತೀನಿ ಎಂದು ಸ್ಯಾಮ್ ಪಟ್ಟು ಹಿಡಿದಿರುವುದಾಗಿ ಟಾಲಿವುಡ್‌ನಲ್ಲಿ ಸುದ್ದಿಯಾಗ್ತಿದೆ.

  ಸಮಂತಾ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಸದ್ದು ಮಾಡೋಕೆ ರೆಡಿ: 'ಯಶೋದಾ' ಟೀಸರ್‌ಗೆ ಮುಹೂರ್ತ!ಸಮಂತಾ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿಸದ್ದು ಮಾಡೋಕೆ ರೆಡಿ: 'ಯಶೋದಾ' ಟೀಸರ್‌ಗೆ ಮುಹೂರ್ತ!

  ಈ ಕೆಲಸ ಮೊದಲೇ ಮಾಡಬೇಕಿತ್ತು

  ಈ ಕೆಲಸ ಮೊದಲೇ ಮಾಡಬೇಕಿತ್ತು

  ಸಮಂತಾ- ನಾಗಚೈತನ್ಯಾ ದೂರಾಗಲು ನಿಜವಾದ ಕಾರಣ ಏನು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ಸ್ಯಾಮ್ 'ಫ್ಯಾಮಿಲಿಮ್ಯಾನ್- 2' ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿದ್ದೇ ಅಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಯ್ತು ಅನ್ನುವ ಚರ್ಚೆ ನಡೆದಿತ್ತು. ಅಕ್ಕಿನೇನಿ ಫ್ಯಾಮಿಲಿಗೆ ಇರಿಸುಮುರಿಸು ಆಗುವಂತ ಕೆಲಸ ಮಾಡುವುದು ಬೇಡ, ಅದರಲ್ಲೂ ಇಂತಹ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿಬೇಡ ಇದರಿಂದ ಇಡೀ ಫ್ಯಾಮಿಲಿನ ಟ್ರೋಲ್ ಮಾಡುತ್ತಾರೆ ಹೇಳಿದ್ದರಂತೆ. ಆದರೆ ಸಮಂತಾ ಒಪ್ಪಲಿಲ್ಲವಂತೆ. ಸಮಂತಾ ಹೊಸ ಕಂಡೀಷನ್ ಸುದ್ದಿ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಮೊದಲೇ ಈ ಕೆಲಸ ಮಾಡಿದ್ದರೆ ಡೈವೋರ್ಸ್ ತೆಗೆದುಕೊಳ್ಳದೇ ನಾಗಚೈತನ್ಯಾ ಜೊತೆ ಇರಬಹುದಿತ್ತು ಎನ್ನುತ್ತಿದ್ದಾರೆ.

  ಕಳೆದ ವರ್ಷ ಡೈವೋರ್ಸ್ ಘೋಷಿಸಿದ್ದ ಜೋಡಿ

  ಕಳೆದ ವರ್ಷ ಡೈವೋರ್ಸ್ ಘೋಷಿಸಿದ್ದ ಜೋಡಿ

  ಆರೇಳು ವರ್ಷ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದ ಸಮಂತಾ- ನಾಗಚೈತನ್ಯಾ ದಂಪತಿ ಡೈವೋರ್ಸ್ ಘೋಷಿಸಿದ್ದಾಗ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಕಳೆದ ವರ್ಷ ಅಕ್ಟೋಬರ್‌ 2ರಂದು ಇಬ್ಬರು ಸೋಶಿಯಲ್ ಮೀಡಿಯಾ ಪೋಸ್ಟ್‌ ಮಾಡುವ ಮೂಲಕ ಡೈವೋರ್ಸ್ ವಿಚಾರವನ್ನು ಬಹಿರಂಗ ಪಡಿಸಿದ್ದರು. ಮೊದಲಿಗೆ ಚೈಸ್ಯಾಮ್ ದೂರಾಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾದಾಗ ಎಲ್ಲರೂ ಇದು ಬರೀ ಗಾಸಿಪ್ ಎಂದುಕೊಂಡಿದ್ದರು. ಆದರೆ ಸುದ್ದಿ ನಿಜವಾದ ಮೇಲೆ ಅಭಿಮಾನಿಗಳು ಶಾಕ್ ಆಗಿದ್ದರು.

  'ಯಶೋಧ' ಆಗಿ ಬರ್ತಿದ್ದಾರೆ ಸಮಂತಾ

  'ಯಶೋಧ' ಆಗಿ ಬರ್ತಿದ್ದಾರೆ ಸಮಂತಾ


  ಡೈವೋರ್ಸ್ ನಂತರ ತಮಿಳಿನಲ್ಲಿ ಸಮಂತಾ ನಟಿಸಿದ 'ಕಾತು ವಾಕುಲೆ ರೆಂಡು ಕಾದಲ್' ಸಿನಿಮಾ ಮಾತ್ರ ರಿಲೀಸ್ ಆಗಿದೆ. ಇದೀಗ ಸ್ಯಾಮ್ ನಟನೆಯ ಮಹಿಳಾ ಪ್ರಧಾನ ಸಿನಿಮಾ 'ಯಶೋಧ' ಪ್ರೇಕ್ಷಕರ ಮುಂದೆ ಬರುವ ಸಮಯ ಹತ್ತಿರ ಬರ್ತಿದೆ. ಆಗಸ್ಟ್ 12ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ತಡವಾಗ್ತಿದ್ದು, ಸೆಪ್ಟೆಂಬರ್ 9ಕ್ಕೆ ಟೀಸರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಆದಷ್ಟು ಬೇಗ ಸಿನಿಮಾ ತೆರೆಗಪ್ಪಳಿಸಲಿದೆ.

  English summary
  Actress Samantha Ruth Prabhu Sets New Conditions To Sign Films. Know More.
  Friday, September 2, 2022, 19:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X