Samantha: ವಿದೇಶದಲ್ಲಿ ಐಸ್ ಕ್ರೀಂಗಾಗಿ ಮಾರುದ್ದದ ಸರತಿ ಸಾಲಿನಲ್ಲಿ ನಿಂತ ನಟಿ ಸಮಂತಾ ರುತ್ ಪ್ರಭು!
ಕಳೆದ ಆಗಸ್ಟ್ ತಿಂಗಳಿನಿಂದ ಪ್ರವಾಸದಲ್ಲಿರುವ ನಟಿ ಸಮಂತಾ ರುತ್ ಪ್ರಭು, 'ಖುಷಿ' ಸಿನಿಮಾ ಬಿಡುಗಡೆ ವೇಳೆಯಲ್ಲಿಯೂ ದೇಶಕ್ಕೆ ಬಂದಿರಲಿಲ್ಲ. ಬಳಿಕ ಮಧ್ಯದಲ್ಲಿ ಒಂದೆರಡು ದಿನ ಬಂದಿದ್ದ ಅವರು ಈಗ ಮತ್ತೆ ಪ್ರವಾಸ ಮುಂದುವರೆಸಿದ್ದಾರೆ. ತನಗೆ ಇಷ್ಟವಾಗುವ ಎಲ್ಲಾ ಜಾಗಗಳನ್ನು ಸುತ್ತುತ್ತಿರುವ ಅವರು ತಮ್ಮ ಅಭಿಮಾನಿಗಳಿಗಾಗಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸದ್ಯಕ್ಕೆ ನಟಿ ಸಮಂತಾ, ಇಟಲಿಯ ರೋಮ್ಯಾಂಟಿಕ್ ಪ್ರದೇಶ ವೆನಿಸ್‌ನಲ್ಲಿ ತಮ್ಮ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಹಕ್ಕಿಯಂತೆ ಹಾರಾಡುತ್ತಿರುವ ಅವರು, ಅನೇಕ ಸಾಹಸಮಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವುಗಳನ್ನು ಕೂಡ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.

ಐಸ್‌ಕ್ರೀಂಗಾಗಿ ಕ್ಯೂ ನಿಂತ ನಟಿ ಸಮಂತಾ
ನಟಿ ಸಮಂತಾ ಕೇವಲ ತಮ್ಮ ಅದ್ಭುತ ಅಭಿನಯದಿಂದ ಮಾತ್ರವಲ್ಲ ಸಸ್ಯಾಹಾರಿ ಜೀವನಶೈಲಿಗೂ ಹೆಸರುವಾಸಿ. ಸಮಂತಾ ಉತ್ತಮ ಪೌಷ್ಠಿಕ ಆಹಾರ ತೆಗೆದುಕೊಳ್ಳುವುದು, ಆರೋಗ್ಯ ಕಾಪಾಡಿಕೊಳ್ಳುವುದು ಮತ್ತು ಫಿಟ್‌ನೆಸ್‌ನಿಂದಲೂ ಕೂಡ ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಾರೆ.
ಸಮಂತಾ ಇತ್ತೀಚೆಗೆ ತನ್ನ ಇಟಾಲಿಯನ್ ಪ್ರವಾಸದ ಸಮಯದ ಫೋಟೋವೊಂದನ್ನು Instagram ಸ್ಟೋರಿಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸುಂದರ ನಗರ ವೆನಿಸ್‌ನ ಹೃದಯಭಾಗದಲ್ಲಿ ಇರುವ ಜೆಲಾಟೊಟೆಕಾ ಸುಸೊ ಮುಂದೆ ಆಕೆ ನಿಂತಿದ್ದಾರೆ. ಈ ರೆಸ್ಟೋರೆಂಟ್‌ನ ಖ್ಯಾತ ಐಸ್‌ಕ್ರೀಂ ಸವಿಯಲು ಸಮಂತಾ ಕಾಯುತ್ತಿದ್ದಾರೆ.
ಜೆಲಾಟೊಟೆಕಾ ಸುಸೊ ಐಸ್‌ಕ್ರೀಂ ಪಾರ್ಲರ್ ಮುಂದೆ ಮಾರುದ್ದದ ಸರತಿ ಸಾಲಿನಲ್ಲಿ ನಿಂತಿರುವ ಅವರು, ಸರತಿ ಸಾಳಿನ ಫೋಟೋ ಹಂಚಿಕೊಂಡು "ತಾಳ್ಮೆಯಿಂದ ಕಾಯುವವರಿಗೆ ಒಳ್ಳೆಯದು ಆಗಲಿದೆ" ಎಂದು ಶೀರ್ಷಿಕೆ ನೀಡಿದ್ದಾರೆ.

ಸಮಂತಾ ರುತ್ ಪ್ರಭು ಅವರ ವೆನಿಸ್ ಪ್ರವಾಸವು ಕೇವಲ ಸುಂದರವಾದ ಸ್ಥಳಗಳನ್ನು ನೋಡುವುದಷ್ಟೆ ಅಲ್ಲದೆ ಪ್ರಪಂಚದ ಅತ್ಯಂತ ರುಚಿಕರ ಊಟಗಳನ್ನು ಸವಿಯುವುದರ ಬಗ್ಗೆಯೂ ಆಗಿದೆ. ಆರೋಗ್ಯಕರ ಜೀವನಶೈಲಿಗೆ ಅವರ ಬದ್ಧತೆ, ಜೊತೆಗೆ ಅವರು ಹೋದಲ್ಲೆಲ್ಲಾ ಅತ್ಯುತ್ತಮ ಸಸ್ಯಾಹಾರಿ ರೆಸ್ಟೋರೆಂಟ್‌ಗಳನ್ನು ಹುಡುಕುವ ಕೆಲಸ ಕೂಡ ಅಭಿಮಾನಿಗಳಿಗೆ ಹೆಚ್ಚು ಖುಷಿ ನೀಡುತ್ತದೆ.
ನಟಿ ಸಮಂತಾ ಅವರ ಮುಂದಿನ ಸಿನಿಮಾಗಳು
ನಟಿ ಸಮಂತಾ ಸದ್ಯ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಅವರ ತೆಲುಗು ಸಿನಿಮಾ ಖುಷಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ನಟ ವಿಜಯ್ ದೇವರಕೊಂಡ ಅವರ ಜೊತೆಗೆ ನಾಯಕಿಯಾಗಿ ನಟಿಸಿದ್ದ ಖುಷಿಯಲ್ಲಿ ಇಬ್ಬರ ಕೆಮಿಸ್ಟ್ರಿ ಸಕತ್ ವರ್ಕ್ ಆಗಿತ್ತು. ಸಿನಿಮಾಗೆ ಫ್ಯಾನ್ಸ್ ಕಡೆಯಿಂದ ಉತ್ತಮ ರೆಸ್ಪಾನ್ಸ್ ಬಂದಿತ್ತು. ಸದ್ಯ ಖುಷಿ ಸಿನಿಮಾ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕರಯಲ್ಲಿ ಬಿಡುಗಡೆಯಾಗಿದೆ.
ಇದರ ಜೊತೆಗೆ ಸಮಂತಾ ಅಭಿಮಾನಿಗಳು ಆಕೆಯ ಮುಂಬರುವ 'ಸಿಟಾಡೆಲ್ ಇಂಡಿಯಾ'ಗಾಗಿ ಕಾಯುತ್ತಿದ್ದಾರೆ. ಇದು ಅದೇ ಹೆಸರಿನ ಜನಪ್ರಿಯ ಅಮೇರಿಕನ್ ಸರಣಿಯ ಭಾರತೀಯ ಅವತರಣಿಕೆ. ರಾಜ್ ಮತ್ತು ಡಿಕೆ ನಿರ್ದೇಶನದ ಸಿಟಾಡೆಲ್ ಚಿತ್ರದಲ್ಲಿ ವರುಣ್ ಧವನ್ ನಾಯಕನಾಗಿ ನಟಿಸಿದ್ದಾರೆ.


Click it and Unblock the Notifications











