ಮುರಿದ ಮದುವೆ.. ಕೈಕೊಟ್ಟ ಆರೋಗ್ಯ.. ಸಾಲು ಸಾಲು ಸಿನಿಮಾಗಳ ಸೋಲು.. ಅಬ್ಬಬ್ಬಾ.. ನಟಿ ಸಮಂತಾ ನೋವು ಯಾರಿಗೂ ಬೇಡ!

ಸಾಮಾನ್ಯವಾಗಿ ಹಿರೋಯಿನ್‌ಗಳ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಿರುತ್ತದೆ. ಅದರಲ್ಲೂ ಆಕೆ ಡೈವೋರ್ಸ್ ತೆಗೆದುಕೊಂಡಿದ್ದರೇ, ಅನಾರೋಗ್ಯಕ್ಕೆ ಒಳಗಾಗಿದ್ದರೇ, ತಮ್ಮದೆ ಕೆಲವು ಊಹೆಗಳಲ್ಲಿ ಆಕೆಯನ್ನು ಅಳೆದು ತೂಗುತ್ತಾರೆ. ಇದನ್ನೆಲ್ಲಾ ಮೆಟ್ಟಿ ನಿಲ್ಲುವ ಸಾಮರ್ಥ್ಯ ಕೆಲವರಿಗೆ ಮಾತ್ರ ಇರುತ್ತದೆ. ಅಂತಹ ನಟಿಯರ ಸಾಲಿನಲ್ಲಿ ನಟಿ ಸಮಂತಾ ರುತ್ ಪ್ರಭು ಕೂಡ ಸೇರುತ್ತಾರೆ.

ನಟಿ ಸಮಂತಾ ಬಾಲಿವುಡ್‌ನಲ್ಲಿ ಕೆರಿಯರ್ ಆರಂಭಿಸಿ, ವೃತ್ತಿಜೀವನದಲ್ಲಿ ಮುಂದೆ ನುಗ್ಗುತ್ತಿರುವಾಗ ಎದುರಿಸಿದ ದೊಡ್ಡ ಸಮಸ್ಯೆ ಎಂದರೇ ಆಕೆಯ ವಿಚ್ಛೇಧನ. ನಟ ನಾಗಚೈತನ್ಯ ಜೊತೆಗಿನ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್‌ ಸ್ಟಾಪ್ ಇಟ್ಟಿದ್ದರು. ಇದು ಅನೇಕ ವದಂತಿಗಳಿಗೂ ಕಾರಣವಾಗಿತ್ತು. ಅಲ್ಲು ಅರ್ಜುನ್ ನಟನೆಯ ಪುಷ್ಪಾ ಮೊದಲ ಭಾಗದಲ್ಲಿ ಸಮಂತಾ ಅವರ ಐಟಂ ಡ್ಯಾನ್ಸ್, ಫಾಮಿಲಿ ಮ್ಯಾನ್‌ನಲ್ಲಿನ ಬೋಲ್ಡ್ ಸೀನ್‌ಗಳು ಕಾರಣ ಎನ್ನಲಾಗಿತ್ತು. ಇನ್ನು, ನಟಿ ಸಂದರ್ಶನವೊಂದರಲ್ಲಿ ಮೊದಲ ಬಾರಿಗೆ ಮನಬಿಚ್ಚಿ ತಮ್ಮ ನೋವನ್ನು ಹೊರಹಾಕಿದ್ದಾರೆ.

Actress Samantha Ruth Prabhu talks about her failed marriage, health and career

'ತ್ರಿವಳಿ ಹೊಡೆತ'ದ ಬಗ್ಗೆ ಮಾತನಾಡಿದ ಸಮಂತಾ!

ಸಿನಿಮಾಗಳಿಂದ ಸದ್ಯಕ್ಕೆ ಬ್ರೇಕ್ ತೆಗೆದುಕೊಂಡಿರುವ ನಟಿ ಸಮಂತಾ ರುತ್ ಪ್ರಭು ಅವರು ವಿವಿಧ ಸಂದರ್ಶನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಮುರಿದ ಮದುವೆ, ಅನಾರೋಗ್ಯದ ಭಯ ಮತ್ತು ಸಿನಿಮಾಗಳ ಬಾಕ್ಸ್ ಆಫೀಸ್ ವೈಫಲ್ಯದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಹಾರ್ಪರ್ಸ್ ಬಜಾರ್ ಇಂಡಿಯಾಕ್ಕೆ ನೀಡಿರುವ ಹೊಸ ಸಂದರ್ಶನದಲ್ಲಿ ಮಾತನಾಡಿರುವ ಸಮಂತಾ ಕಳೆದೆರಡು ವರ್ಷಗಳಲ್ಲಿ ತಾವು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. "ನನಗೆ ಒಟ್ಟಿಗೆ ಮುರಿದ ದಾಂಪತ್ಯ, ನನ್ನ ಅನಾರೋಗ್ಯ ಮತ್ತು ಸಾಲು ಸಾಲು ಬಾಕ್ಸ್ ಆಫೀಸ್ ಸೋಲುಗಳು ತೀವ್ರ ಪರಿಣಾಮ ಬೀರಿತ್ತು. ಅದು ಒಟ್ಟಿಗ ಎಂದ ತ್ರಿವಳಿ ಹೊಡೆತದಂತಿತ್ತು. ಬೂಮ್, ಬೂಮ್, ಬೂಮ್" ಎಂದಿದ್ದಾರೆ.

Actress Samantha Ruth Prabhu talks about her failed marriage, health and career

"ನಿಮಗೆ ಗೊತ್ತಾ, ಜನರು ಕುಸಿಯುತ್ತಾರೆ ನಿಜ. ಆದರೆ, ಕಳೆದ ಎರಡು ವರ್ಷಗಳಿಂದ ನಾನು ಅನುಭವಿಸಿದ್ದು ಅದಕ್ಕಿಂತ ಹೆಚ್ಚು. ಆ ಸಮಯದಲ್ಲಿ, ನಾನು ಆರೋಗ್ಯ ಸಮಸ್ಯೆಗಳ ಜೊತೆಗೆ ಹೋರಾಡಿದ ಕಲಾವಿದರ ಬಗ್ಗೆ ಓದಿದ್ದೇನೆ. ಏಕೆಂದರೆ ಟ್ರೋಲಿಂಗ್ ಅಥವಾ ಆತಂಕವನ್ನು ಎದುರಿಸಲು ಅವರ ಕಥೆಗಳನ್ನು ಓದುವುದು ನನಗೆ ಸಹಾಯ ಮಾಡಿತು" ಎಂದು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, "ಈ ದೇಶದಲ್ಲಿ ಅಷ್ಟು ಜನರು ಪ್ರೀತಿಸುವ ನಟಿಯಾಗುವುದು ದೊಡ್ಡ ಉಡುಗೊರೆ . ಹೀಗಾಗಿ ಅದಕ್ಕೆ ಜವಾಬ್ದಾರರಾಗಿ, ಪ್ರಾಮಾಣಿಕವಾಗಿ ಮತ್ತು ನೈಜವಾಗಿರಬೇಕು. ನಮ್ಮ ಕಥೆಯನ್ನು ಹೇಳಬೇಕು. ಯಾವಾಗಲು ಎಷ್ಟು ಸೂಪರ್ ಹಿಟ್‌ಗಳು ಮತ್ತು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದ್ದೇವೆ, ಎಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದೇವೆ, ಅತ್ಯಂತ ಸುಂದರವಾದ ಬಟ್ಟೆಗಳಿವೆ ಎಂಬುದಲ್ಲ. ನೋವು, ಕಷ್ಟಗಳನ್ನು ಹೇಳಿಕೊಳ್ಳಬೇಕು" ಎಂದಿದ್ದಾರೆ.

ಸಮಂತಾ ವಿಚ್ಛೇದನ

ಸಮಂತಾ ರುತ್ ಪ್ರಭು ಅವರು ಅಕ್ಟೋಬರ್ 2017 ರಲ್ಲಿ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ಸುಮಾರು ನಾಲ್ಕು ವರ್ಷಗಳ ನಂತರ ಅಕ್ಟೋಬರ್ 2021 ರಲ್ಲಿ ಬೇರೆಯಾದರು. ಅಂದಿನಿಂದ ನಟಿ ಸಮಂತಾ ತನ್ನ ಆರೋಗ್ಯ ಮತ್ತು ಕೆಲಸದ ಬಗ್ಗೆ ಗಮನಹರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

More from Filmibeat

English summary
Samantha opened up about challenges she faced, personally and professionally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X