For Quick Alerts
  ALLOW NOTIFICATIONS  
  For Daily Alerts

  ಸಮಂತಾ ಪೋಸ್ಟ್.. ಹೇಗಿದ್ದೀರಾ ಎಂದ ಫ್ಯಾನ್ಸ್? ಕೆಲವರಿಗೆ ಇನ್ನೂ ಡೌಟ್!

  |

  ಸೋಶಿಯಲ್ ಮೀಡಿಯಾ ಜಮಾನದಲ್ಲಿ ಲಾಗಿನ್ ಆಗ್ದೇ ಇದ್ರೆ, ಪೋಸ್ಟ್ ಮಾಡದೇ ಇದ್ರೆ ಸತ್ತೇ ಹೋಗ್ಬಿಟ್ರಾ ಎಂದು ಅನುಮಾನ ಪಡುವ ಕಾಲ ಇದು. ಯಾವಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಿದ್ದ ಸಮಂತಾ ಇತ್ತೀಚೆಗೆ ಸೈಲೆಂಟ್ ಆಗ್ಬಿಟ್ಟಿದ್ದರು. ಇದರ ಬೆನ್ನಲ್ಲೇ ಆಕೆಯ ಬಗ್ಗೆ ಸಾಕಷ್ಟು ವದಂತಿಗಳು ಕೇಳಿಬಂದಿತ್ತು. ಸ್ಪಷ್ಟನೆ ಸಿಗದ ಕಾರಣಕ್ಕೆ ಗಾಳಿಸುದ್ದಿ ಮತ್ತಷ್ಟು ಸದ್ದು ಮಾಡಿತ್ತು. ಕೊನೆಗೂ ಸಮಂತಾ ಸೋಶಿಯಲ್ ಮೀಡಿಯಾಗೆ ವಾಪಸ್ ಬಂದಿದ್ದಾರೆ.

  ಸಮಂತಾ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿ, ಸ್ಟೋರಿ ಹಾಕಿ 2 ತಿಂಗಳಾಗ್ತಾ ಬಂತು. ನಡುವೆ ತಮ್ಮ ಸಿನಿಮಾಗಳ ಬಗ್ಗೆ ಒಂದೆರಡು ಪೋಸ್ಟ್ ಮಾಡಿದ್ರು ಅಭಿಮಾನಿಗಳ ಅನುಮಾನ ಮಾತ್ರ ಬಗೆಹರಿದಿರಲಿಲ್ಲ. "ಸಮಂತಾ ಆರೋಗ್ಯ ಸಮಸ್ಯೆ ಎದುರಾಗಿದೆ", "ಚರ್ಮದ ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಮ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೀತ್ತಾರಂತೆ", "2ನೇ ಮದುವೆ ಆಗಲೂ ಮನಸ್ಸು ಮಾಡಿದ್ದಾರೆ" ಹೀಗೆ ಆಕೆಯ ಬಗ್ಗೆ ಸಾಕಷ್ಟು ಗಾಳಿಸುದ್ದಿ ಹರಿದಾಡಿತ್ತು. ಇತ್ತೀಚೆಗೆ ಆಕೆಯ ಮ್ಯಾನೇಜರ್ ಇದೆಲ್ಲಾ ಗಾಳಿಸುದ್ದಿ ಇದನ್ನು ನಂಬಬೇಡಿ ಎಂದು ಹೇಳಿದ್ದರು.

  'ಶಾಕುಂತಲೆ' ಸಮಂತಾಗೆ ಸಿಕ್ಕ ದುಷ್ಯಂತ ಯಾರು? ಸಿನಿಮಾ ರಿಲೀಸ್ ಯಾವಾಗ?'ಶಾಕುಂತಲೆ' ಸಮಂತಾಗೆ ಸಿಕ್ಕ ದುಷ್ಯಂತ ಯಾರು? ಸಿನಿಮಾ ರಿಲೀಸ್ ಯಾವಾಗ?

  ಸದ್ಯ ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಗುಣಶೇಖರ್ ನಿರ್ಮಿಸಿ ನಟಿಸ್ತಿರೋ ಈ ಪೌರಾಣಿಕ ಕಥಾಹಂದರದ ಚಿತ್ರದಲ್ಲಿ ಸ್ಯಾಮ್ ಶಾಕುಂಲತೆಯಾಗಿ ಬಣ್ಣ ಹಚ್ಚಿದ್ದಾರೆ. ನವೆಂಬರ್ 4ಕ್ಕೆ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಮೋಷನ್ ಪೋಸ್ಟರ್ ಸಮೇತ ಇದನ್ನು ಚಿತ್ರತಂಡ ಘೋಷಿಸಿದೆ. ಈ ವಿಚಾರವನ್ನು ಸಮಂತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಹಂಚಿಕೊಂಡಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಹೇಗಿದ್ದೀರಾ ಸಮಂತಾ? ಆರೋಗ್ಯವಾಗಿದ್ದೀರಾ ? ಎಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

  ಈ ಪೋಸ್ಟ್ ನೋಡಿ ಕೂಡ ಕೆಲವರು ಸ್ವತಃ ಸ್ಯಾಮ್ ಈ ಪೋಸ್ಟ್ ಮಾಡಿದ್ರಾ? ಇಲ್ಲ ಆಕೆಯ ಪರವಾಗಿ ಬೇರೆ ಯಾರಾದರೂ ಪೋಸ್ಟ್ ಮಾಡಿದ್ರಾ? ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲೂ ಇದನ್ನೇ ಕೇಳುತ್ತಿದ್ದಾರೆ. ಡೈವೋರ್ಸ್‌ ನಂತರ ಸಮಂತಾ 'ಪುಷ್ಪ' ಚಿತ್ರದಲ್ಲಿ ಬಿಂದಾಸ್ ಆಗಿ ಕುಣಿದಿದ್ದರು. ಆ ಸಾಂಗ್‌ನಿಂದ ಸಮಂತಾ ಕ್ರೇಜ್ ಡಬಲ್ ಆಗಿತ್ತು. ಆ ನಂತರ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಚೆನ್ನೈ ಚೆಲುವೆ ಸದ್ದು ಮಾಡಿದ್ದರು. ದಿನಕ್ಕೆ ಒಂದಾದರೂ ಪೋಸ್ಟ್ ಮಾಡದೇ ಸ್ಯಾಮ್ ನಿದ್ದೆ ಮಾಡುತ್ತಿರಲಿಲ್ಲ. ಅಂತಾದ್ರಲ್ಲಿ ಸಮಂತಾ ಇಷ್ಟು ದಿನಗಳ ಕಾಲ ಪೋಸ್ಟ್ ಮಾಡದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿತ್ತು. 2 ಎರಡು ತಿಂಗಳಲ್ಲಿ 'ಯಶೋಧ' ಟೀಸರ್ ಶೇರ್ ಮಾಡಿದ್ದು ಬಿಟ್ಟರೆ ಬೇರೆ ಪೋಸ್ಟ್ ಮಾಡಲಿಲ್ಲ.

  Actress Samantha ruth prabu is back on social media

  ಸಮಂತಾ ನಟನೆಯ 'ಯಶೋಧ' ಹಾಗೂ 'ಶಾಕುಂತಲಂ' ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳು. ಸಮಂತಾ ಪಾತ್ರದ ಸುತ್ತಾ ಈ ಸಿನಿಮಾಗಳ ಕಥೆ ಸುತ್ತಲಿದೆ. 'ಯಶೋಧ' ಚಿತ್ರದಲ್ಲಿ ಈ ಸಸ್ಪೆನ್ಸ್ ಥ್ರಿಲ್ಲರ್‌ ಚಿತ್ರದಲ್ಲಿ ಗರ್ಭಿಣಿ ಮಹಿಳೆಯ ಕಷ್ಟವನ್ನು ಅನಾವರಣಗೊಳಿಸಲಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳ ಕುರಿತು ಚರ್ಚಿಸಲಾಗಿದೆ. ಹರಿ ಹಾಗೂ ಹರೀಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉನ್ನಿ ಮುಕುಂದನ್, ವರಲಕ್ಷ್ಮಿ ಶರತ್‌ಕುಮಾರ್, ಮುರಳಿ ಶರ್ಮಾ, ಸಂಪತ್ ರಾಜ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

  English summary
  Actress Samantha ruth prabu is back on social media. Know More.
  Friday, September 23, 2022, 16:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X