For Quick Alerts
  ALLOW NOTIFICATIONS  
  For Daily Alerts

  ನಂಬರ್ 1 ಸ್ಥಾನಕ್ಕಾಗಿ ನಾನು ಲಂಚ ಕೊಟ್ಟೆ: ಸಮಂತಾ ಶಾಕಿಂಗ್ ಹೇಳಿಕೆ!

  |

  ಸೌತ್‌ ಬ್ಯೂಟಿ ಸಮಂತಾ ಕ್ರೇಜ್‌ಗೆ ಬ್ರೇಕ್‌ ಹಾಕೋರೆ ಇಲ್ಲ. ಅದ್ಯಾವ್ ಗಳಿಗೆಯಲ್ಲಿ ಸ್ಯಾಮ್ 'ಪುಷ್ಪ' ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ರೋ ಗೊತ್ತಿಲ್ಲ. ಅದೃಷ್ಟ ಖುಲಾಯಿಸಿಬಿಡ್ತು. ಚೆನ್ನೈ ಚೆಲುವೆ ಸಿನಿ ಕರಿಯರ್‌ನ 'ಹೂಂ ಅಂಟಾವಾ ಮಾವ' ಸಾಂಗ್‌ಗೂ ಮುಂಚೆ ನಂತ್ರ ಅಂತ ಬಿಡಿಸಿ ಹೇಳುವ ಮಟ್ಟಿಗೆ ಆ ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿಬಿಡಿದ್ದು ಸುಳ್ಳಲ್ಲ. ಅದೊಂದು ಸಾಂಗ್‌ನಿಂದ ಬಾಲಿವುಡ್ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಬಾಲಿವುಡ್‌ ನಟಿಯರನ್ನು ಹಿಂದಿಕ್ಕಿ ಸಮಂತಾ ಕ್ರೇಜ್ ಧಕ್ಕಿಸಿಕೊಂಡಿದ್ದಾರೆ. ಸದ್ಯ ಹಾಲಿವುಡ್‌ ಪ್ರಾಜೆಕ್ಟ್‌ನಲ್ಲೂ ಸಮಂತಾ ನಟಿಸ್ತಿದ್ದು, ಮತ್ತೊಂದ್ಕಡೆ ವರ್ಕೌಟ್, ಗ್ಲಾಮರ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡ್ತಿರ್ತಾರೆ. ಆ ಫೋಟೊಗಳು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿವೆ.

  <br> ವಿಚ್ಚೇದನದ ಬಳಿಕ 250 ಕೋಟಿ ಜೀವನಾಂಶ ಪಡೆದರೇ ಸಮಂತಾ! ಬೆಡಗಿ ಹೇಳಿದ್ದೇನು?
  ವಿಚ್ಚೇದನದ ಬಳಿಕ 250 ಕೋಟಿ ಜೀವನಾಂಶ ಪಡೆದರೇ ಸಮಂತಾ! ಬೆಡಗಿ ಹೇಳಿದ್ದೇನು?

  ಇತ್ತೀಚೆಗೆ ಜನಪ್ರಿಯ ಮೀಡಿಯಾ ಏಜೆನ್ಸಿ ಓರ್ಮ್ಯಾಕ್ಸ್ ನಡೆಸಿದ ಸಮೀಕ್ಷೆಯಲ್ಲಿ ಜೂನ್ ತಿಂಗಳ ಬಹು ಜನಪ್ರಿಯ ನಟಿಯರ ಪಟ್ಟಿಯಲ್ಲಿ ಸಮಂತಾ ಮೊದಲ ಸ್ಥಾನ ಪಡೆದುಕೊಂಡಿದ್ದರು. ಪ್ರತಿ ತಿಂಗಳು ಈ ಏಜೆನ್ಸಿ ಜನಪ್ರಿಯ ನಟ, ನಟಿ, ಸಿನಿಮಾ ವಿಭಾಗಗಳಲ್ಲಿ ಈ ರೀತಿ ಸಮೀಕ್ಷೆ ನಡೆಸುತ್ತಿರೋದು ಬಹಳ ಜನಪ್ರಿಯವಾಗಿದೆ. ಇನ್ನು ಆ ಪಟ್ಟಿಯಲ್ಲಿಆಲಿಯಾ ಭಟ್‌ಗೆ ಎರಡನೇ ಸ್ಥಾನ, ನಯನತಾರಾಗೆ ಮೂರನೇ ಸ್ಥಾನ, ದೀಪಿಕಾ ಪಡುಕೋಣೆಗೆ ನಾಲ್ಕನೇ ಸ್ಥಾನ ಸಿಕ್ಕಿತ್ತು. ಬಿಟೌನ್ ನಟಿಯರನ್ನೆಲ್ಲಾ ಹಿಂದಿಕ್ಕಿ ಸಮಂತಾ ಮೊದಲ ಸ್ಥಾನಕ್ಕೇರಿದ್ದು ಎಲ್ಲರಿಗೂ ಅಚ್ಚರಿ ಉಂಟುಮಾಡಿತ್ತು.

  ಇತ್ತೀಚೆಗೆ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಂತಾ ಡೈವೋರ್ಸ್ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತಾನಾಡಿದ್ದರು. ಒರ್ಮಾಕ್ಸ್‌ ಸಮೀಕ್ಷೆಯಲ್ಲಿ ನಂಬರ್ ವನ್ ಸ್ಥಾನವನ್ನು ನೀವು ಹೇಗೆ ಧಕ್ಕಿಸಿಕೊಂಡಿದ್ದು ಹೇಗೆ ಅನ್ನುವ ಪ್ರಶ್ನೆಯನ್ನು ಕರಣ್‌ ಜೋಹರ್, ಸಮಂತಾ ಮುಂದೆ ಇಟ್ಟಿದ್ದರು. ಅದಕ್ಕೆ ಆಕೆ ಇದಕ್ಕಾಗಿ 'ಆ ಸಂಸ್ಥೆಗೆ ಲಂಚ ಕೊಟ್ಟಿದ್ದೆ' ಅಂತ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

  ಸಮಂತಾ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬೇರೆ ನಟಿಯರ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿದ್ದಾರೆ. ಅಸಲಿಗೆ ವಿಷಯ ಏನು ಅಂದರೆ ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಸಮಂತಾ ತಮಾಷೆಯಾಗಿ ಆ ರೀತಿ ಉತ್ತರ ಕೊಟ್ಟಿದ್ದರು. ಆದರೆ ಅದು ಬೇರೆ ರೀತಿಯಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಬಾರಿ 'ಕಾಫಿ ವಿತ್ ಕರಣ್' ಓಟಿಟಿಯಲ್ಲಿ ಪ್ರಸಾರವಾಗುತ್ತಿದ್ದು, ಸಮಂತಾ ಜೊತೆಗೆ ಬಾಲಿವುಡ್ ಖಿಲಾಡಿ ಅಕ್ಷಯ್‌ ಕುಮಾರ್‌ ಸಹ ಭಾಗವಹಿಸಿದ್ದಾರೆ. ಇಬ್ಬರೂ ಶೋನಲ್ಲಿ 'ಹೂಂ ಅಂಟಾವಾ ಮಾವ' ಹಾಡಿಗೆ ಡ್ಯಾನ್ಸ್ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು.

   ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಮಂತಾ ನಟನೆ

  ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಮಂತಾ ನಟನೆ

  'ಪುಷ್ಪ' ಚಿತ್ರದ ಐಟಂ ಸಾಂಗ್ ನಂತರ 'ಕಾತುವಾಕುಲ ರೆಂಡು ಕಾದಲ್' ಅನ್ನುವ ತಮಿಳು ಸಿನಿಮಾದಲ್ಲಿ ಸಮಂತಾ ನಟಿಸಿದ್ದರು. ವಿಜಯ್ ಸೇತುಪತಿ ಹೀರೊ ಆಗಿ ನಟಿಸಿದ್ದ ಈ ಚಿತ್ರದಲ್ಲಿ ಸಮಂತಾ ಜೊತೆಗೆ ಮತ್ತೊಬ್ಬ ಹೀರೊಯಿನ್ ಆಗಿ ನಯನತಾರಾ ಮಿಂಚಿದ್ದರು. ಈ ರೊಮ್ಯಾಂಟಿಕ್‌ ಫನ್ ಎಂಟರ್‌ಟೈನರ್ ಸಿನಿಮಾ ಒಂದು ರೇಂಜಿಗೆ ಹಿಟ್ ಆಗಿತ್ತು. ಸದ್ಯ 'ಶಾಕುಂತಲಂ' ಮತ್ತು 'ಯಶೋದ' ಅನ್ನುವ ಎರಡು ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದಾರೆ. 'ಖುಷಿ' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ.

   ಡೈವೋರ್ಸ್ ಬಳಿಕ ಸ್ಯಾಮ್ ಕ್ರೇಜ್ ಡಬಲ್?

  ಡೈವೋರ್ಸ್ ಬಳಿಕ ಸ್ಯಾಮ್ ಕ್ರೇಜ್ ಡಬಲ್?

  ಆರೇಳು ವರ್ಷ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದ ಸಮಂತಾ- ನಾಗಚೈತನ್ಯಾ ದಂಪತಿ ಡೈವೋರ್ಸ್ ಘೋಷಿಸಿದ್ದಾಗ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಬ್ಬರು ಸೋಶಿಯಲ್ ಮೀಡಿಯಾ ಪೋಸ್ಟ್‌ ಮೂಲಕ ಇಬ್ಬರು ದೂರಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಡೈವೋರ್ಸ್ ನಂತ್ರ ಸಮಂತಾ ಕ್ರೇಜ್ ಕಮ್ಮಿ ಆಗುತ್ತೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದೊಂದು ಸಾಂಗ್ ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡಿಬಿಡ್ತು.

   ಬಾಲಿವುಡ್ ಅಂಗಳಕ್ಕೆ ಸಮಂತಾ

  ಬಾಲಿವುಡ್ ಅಂಗಳಕ್ಕೆ ಸಮಂತಾ

  'ಫ್ಯಾಮಿಲಿಮ್ಯಾನ್- 2' ವೆಬ್ ಸೀರಿಸ್ ಬಿಟ್ರೆ ಸಮಂತಾ ಯಾವುದೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಸದ್ಯ ಬಾಲಿವುಡ್‌ನಿಂದ ಈ ಚೆನ್ನೈ ಚೆಲುವೆಗೆ ಸಾಕಷ್ಟು ಆಫರ್‌ಗಳು ಬರುತ್ತಿವೆ. ಇನ್ನು ಬಾಲಿವುಡ್ ಸೆಲೆಬ್ರೆಟಿಗಳ ಪಾರ್ಟಿಗಳಲ್ಲಿ ಸ್ಯಾಮ್ ಕಾಣಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಬಾಲಿವುಡ್ ಚಿತ್ರದಲ್ಲಿ ನಟಿಸೋದು ಗ್ಯಾರೆಂಟಿ.

   ಡೈವೋರ್ಸ್ ಕುರಿತು ಸಮಂತಾ ಮೊದಲ ಪ್ರತಿಕ್ರಿಯೆ

  ಡೈವೋರ್ಸ್ ಕುರಿತು ಸಮಂತಾ ಮೊದಲ ಪ್ರತಿಕ್ರಿಯೆ

  'ಕಾಫಿ ವಿತ್ ಕರಣ್' ಕಾರ್ಯಕ್ರಮದ ಹಿಂದಿನ ಎಪಿಸೋಡ್‌ನಲ್ಲಿ ಸಮಂತಾ ತಮ್ಮ ಡೈವೋರ್ಸ್ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದಿದ್ದರು. ಡೈವೋರ್ಸ್ ನಂತರ ಪರಿಸ್ಥಿತಿ ಹೇಗಿತ್ತು ಅನ್ನುವುದನ್ನು ವಿವರಿಸಿದ್ದರು. 'ಕೆಲ ಕಾಲ ಬಹಳ ಕಷ್ಟವಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದ್ದು, ಹಿಂದೆಂದಿಗಿಂತಲೂ ಹೆಚ್ಚು ಬಲಶಾಲಿಯಾಗಿದ್ದೀನಿ' ಎಂದು ಸಮಂತಾ ಹೇಳಿದ್ದರು.

  English summary
  Actress Samantha Shocking Comments In Koffee Karan Show About Ormax Survey. Know More.
  Monday, July 25, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X