ಆಸ್ಪತ್ರೆಯಲ್ಲಿ ಸಮಂತಾ: ತಡವಾಗಲಿದೆ ಚೇತರಿಕೆ, ಸಮಸ್ಯೆ ಏನು?

ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದ ನಟಿ ಸಮಂತಾ, ಹಠಾತ್ತನೆ ಮೌನಕ್ಕೆ ಜಾರಿಬಿಟ್ಟರು. ಸಮಂತಾಗೆ ಏನಾಯಿತು ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಸಮಂತಾಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂಬ ಸುದ್ದಿ ಸಹ ಹರಿದಾಡಿತ್ತು. ಇದೀಗ ಅದನ್ನು ಸ್ವತಃ ಸಮಂತಾ ಖಾತ್ರಿಪಡಿಸಿದ್ದಾರೆ.

ಸಮಂತಾ ನಟನೆಯ 'ಯಶೋಧ' ಸಿನಿಮಾದ ಟ್ರೈಲರ್ ಎರಡು ದಿನ ಹಿಂದಷ್ಟೆ ಬಿಡುಗಡೆ ಆಗಿದೆ. ಟ್ರೈಲರ್‌ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ತಮ್ಮ ಸಿನಿಮಾದ ಟ್ರೈಲರ್ ಅನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಮಂತಾ ಧನ್ಯವಾದ ಹೇಳಿದ್ದಾರೆ. ಆದರೆ ಅದರ ಜೊತೆಗೆ ತಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ ಸಮಂತಾ ಹೇಳಿಕೊಂಡಿದ್ದು, ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಚಿತ್ರವನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಜೊತೆಗೆ ಅಭಿಮಾನಿಗಳಿಗಾಗಿ ಪತ್ರವನ್ನೂ ಬರೆದಿದ್ದಾರೆ.

ಮಯೋಸಿಟ್ಸ್‌ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ

ಮಯೋಸಿಟ್ಸ್‌ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ

''ನನ್ನ 'ಯಶೋಧ' ಸಿನಿಮಾದ ಟ್ರೈಲರ್‌ಗೆ ನೀವು ನೀಡಿರುವ ಪ್ರೀತಿ ಖುಷಿ ತಂದಿದೆ. ನೀವು ತೋರಿಸುವ ಈ ಪ್ರೀತಿಯೇ ನನ್ನನ್ನು ಗಟ್ಟಿಗೊಳಿಸುತ್ತದೆ. ಜೀವನವು ನನಗೆ ಎದುರು ಮಾಡುವ ಕಷ್ಟಗಳೊಟ್ಟಿಗೆ ಹೋರಾಡಲು ಧೈರ್ಯ ತುಂಬುತ್ತದೆ. ಕೆಲವು ತಿಂಗಳ ಹಿಂದಿನಿಂದ ನಾನು ಮಯೋಸಿಟ್ಸ್ ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದೇನೆ. ಇದರಿಂದ ಹೊರಬಂದ ಬಳಿಕ ನಿಮ್ಮೊಂದಿಗೆ ವಿಷಯ ಹಂಚಿಕೊಳ್ಳೋಣ ಎಂದಿದ್ದರೆ ಆದರೆ ಗುಣಮುಖವಾಗುವುದು ತಡವಾಗುತ್ತಿದೆ'' ಎಂದಿದ್ದಾರೆ ಸಮಂತಾ.

ಚೇತರಿಸಿಕೊಳ್ಳುತ್ತಿದ್ದೇನೆ: ಸಮಂತಾ

ಚೇತರಿಸಿಕೊಳ್ಳುತ್ತಿದ್ದೇನೆ: ಸಮಂತಾ

''ಸದಾ ಧೈರ್ಯವಾಗಿ ಮುನ್ನುಗ್ಗುತ್ತ, ಗಟ್ಟಿಯಾಗಿ ಇರುತ್ತಿದ್ದ ನನಗೆ ನನ್ನ ದುರ್ಬಲತೆಗಳನ್ನು ಒಪ್ಪಿಕೊಳ್ಳುವುದು ಈಗಲೂ ಕಷ್ಟವೆ. ನಾನು ಸಂಪೂರ್ಣವಾಗಿ ಈ ಕಾಯಿಲೆಯಿಂದ ಗುಣಮುಖವಾಗುತ್ತೇನೆ ಎಂಬ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ ಒಳ್ಳೆಯ ಹಾಗೂ ಕೆಟ್ಟ ಎರಡೂ ರೀತಿಯ ದಿನಗಳನ್ನು ನಾನು ಕಂಡಿದ್ದೇನೆ. ಒಂದು ಸಮಯವಿತ್ತು, ಇದನ್ನು ನನ್ನಿಂದ ಇನ್ನೊಂದು ಕ್ಷಣವೂ ಸಹಿಸಲಾಗುವುದಿಲ್ಲ ಎನಿಸಿತ್ತು. ಆದರೆ ಆ ಕೆಟ್ಟ ಗಳಿಗೆ ಈಗಿಲ್ಲ. ಚೇತರಿಸಿಕೊಳ್ಳುತ್ತಿದ್ದೇನೆ'' ಎಂದಿದ್ದಾರೆ ಸಮಂತಾ.

ಸಮಂತಾಗೆ ಮಯೋಸಿಟ್ಸ್ ಕಾಯಿಲೆ

ಸಮಂತಾಗೆ ಮಯೋಸಿಟ್ಸ್ ಕಾಯಿಲೆ

ಸಮಂತಾಗೆ ಮಯೋಸಿಟ್ಸ್ ಎಂಬ ಕಾಯಿಲೆ ಉಂಟಾಗಿದೆ. ಈ ಕಾಯಿಲೆಯಿಂದ ನಿಲ್ಲಲು ತೊಂದರೆ ಆಗುತ್ತದೆ, ತುಸು ಸಮಯ ನಿಂತರೆ ಸುಸ್ತೆನಿಸಿಬಿಡುತ್ತದೆ. ಕೂತರೆ ಏಳಲು ಬಹಳ ತ್ರಾಸ ಪಡಬೇಕಾಗುತ್ತದೆ. ಕೈಗಳನ್ನು ಮೇಲೆತ್ತಲು ಸಹ ಬಹಳ ಕಷ್ಟಪಡಬೇಕಾಗುತ್ತದೆ. ಏನನ್ನಾದರು ನುಂಗಲು ಕಷ್ಟ, ಉಸಿರಾಟವೂ ಕಷ್ಟವಾಗುತ್ತದೆ. ಕೆಲವು ವಾರಗಳ ವರೆಗೆ ಮೈ-ಕೈ ನೋವು ಇರುತ್ತದೆ. ಮಯೋಸಿಟ್ಸ್ ನಲ್ಲಿ ಬೇರೆ-ಬೇರೆ ವಿಧಾನಗಳಿವೆ ಆದರೆ ಸಮಂತಾಗೆ ಯಾವ ವಿಧದ ಮಯೋಸಿಟ್ಸ್ ಆಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಹಲವು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

ಹಲವು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

ಸಮಂತಾ ನಟನೆಯ 'ಯಶೋಧ' ಸಿನಿಮಾದ ಟ್ರೈಲರ್ ಎರಡು ದಿನದ ಹಿಂದೆ ಬಿಡುಗಡೆ ಆಗಿದ್ದು, ಥ್ರಿಲ್ಲರ್ ಕತೆಯನ್ನು ಸಿನಿಮಾ ಒಳಗೊಂಡಿದೆ. ಬಾಡಿಗೆ ತಾಯಿಯ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಇದರ ಹೊರತಾಗಿ ಹಲವು ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ. 'ಶಾಕುಂತಲಂ' ಸಿನಿಮಾ ಬಹುತೇಕ ಮುಗಿದಿದೆ. ವಿಜಯ್ ದೇವರಕೊಂಡ ಜೊತೆಗೆ 'ಖುಷಿ' ಸಿನಿಮಾದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇಂಗ್ಲೀಷ್‌ನ 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿಯೂ ಸಮಂತಾ ನಟಿಸುತ್ತಿದ್ದಾರೆ.

More from Filmibeat

English summary
Actress Samantha said she is suffering from Myositis. She is on the way of recovery. She is in hospital now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X