ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಫ್ಯಾನ್ಸ್ ನಡುವೆ ಬೆಂಕಿ ಹಚ್ಚಿದ ಶಕೀಲಾ

ಚಿತ್ರರಂಗದಲ್ಲಿ ಫ್ಯಾನ್ಸ್ ವಾರ್ ಸರ್ವೆ ಸಾಮಾನ್ಯ. ನೆಚ್ಚಿನ ನಟನ ವಿಚಾರದಲ್ಲಿ ಅಭಿಮಾನಿಗಳು ಕಿತ್ತಾಡುವುದು ಕೇವಲ ಒಂದು ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿಲ್ಲ. ಫ್ಯಾನ್ಸ್ ವಾರ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಇದೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಇಬ್ಬರ ಸ್ಟಾರ್ ನಟರ ಅಭಿಮಾನಿಗಳ ವಾರ್ ತಾರಕ್ಕೇರಿತ್ತು. ಸ್ಯಾಂಡಲ್ ವುಡ್ ನಲ್ಲಿ ಇದು ತಣ್ಣಗಾಗುತ್ತಿದ್ದಂತೆ ಈಗ ಪಕ್ಕದ ರಾಜ್ಯದಲ್ಲಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಕಿತ್ತಾಟಕ್ಕೆ ಇಳಿದಿದ್ದಾರೆ.

ಹೌದು, ಇತ್ತೀಚಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಪ್ರಿನ್ಸ್ ಮಹೇಶ್ ಬಾಬು ನಡುವಿನ ಕಿತ್ತಾಟ ಜೋರಾಗಿದೆ. ಸಂಕ್ರಾಂತಿ ಸಮಯದಲ್ಲಿ ತೆರೆಗೆ ಬಂದ ಸರಿಲೇರು ನೀಕೆವ್ವರು ಮತ್ತು ಅಲಾ ವೈಕುಂಠಪುರಂಲೋ ಸಿನಿಮಾ ನಂತರ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ನಡೆಸುತ್ತಿದ್ದಾರೆ.

ಈ ನಡುವೆ ದಕ್ಷಿಣ ಭಾರತದ ನಟಿ ಶಕೀಲಾ ನೀಡಿರುವ ಹೇಳಿಕೆ, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗಿದೆ. ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ಶಕೀಲಾ ಇಬ್ಬರು ನಟರ ಅಭಿಮಾನಿಗಳ ನಡುವೆ ಬೆಂಕಿ ಇಟ್ಟಿದ್ದಾರೆ.

ಶಕೀಲಾ ಹೇಳಿದ್ದೇನು?

ಶಕೀಲಾ ಹೇಳಿದ್ದೇನು?

ದಕ್ಷಿಣ ಭಾರತದ ನಟಿ, ವಯಸ್ಕ ಚಿತ್ರಗಳ ನಾಯಕಿ ಶಕೀಲಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಬಗ್ಗೆ ಮಾತನಾಡಿದ್ದಾರೆ. ನಿರೂಪಕರು ಶಕೀಲಾಗೆ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಶಕೀಲಾ ಮಹೇಶ್ ಬಾಬು ನನ್ನ ಸಹೋದರನಂತೆ. ಜೂ.ಎನ್ ಟಿ ಆರ್ ಉತ್ತಮ ಡ್ಯಾನ್ಸರ್, ಅಲ್ಲು ಅರ್ಜುನ್ ನನಗೆ ಗೊತ್ತಿಲ್ಲ ಎಂದಿದ್ದಾರೆ.

ವೈರಲ್ ಆಗಿದೆ ವಿಡಿಯೋ

ವೈರಲ್ ಆಗಿದೆ ವಿಡಿಯೋ

ಶಕೀಲಾ ಹೇಳಿರುವ ಈ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲು ಮಹೇಶ್ ಬಾಬು ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಶೇರ್ ಮಾಡುತ್ತಿದ್ದಾರೆ. ಈ ಹೇಳಿಕೆಯನ್ನೆ ಇಟ್ಟುಕೊಂಡು ಅಭಿಮಾನಿಗಳು ಅಲ್ಲು ಅರ್ಜುನ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ. ಇತ್ತ ಅಲ್ಲು ಅಭಿಮಾನಿಗಳು ಶಕೀಲಾ ಸಹೋದರ ಮಹೇಶ್ ಬಾಬು, ಶಾಕೀಲಾ ಬಾಬು ಎಂದು ಹೆಸರು ಬದಲಾಯಿಸಿ ಟ್ರೋಲ್ ಮಾಡುತ್ತಿದ್ದಾರೆ.

ಗರಂ ಆದ ಅಲ್ಲು ಫ್ಯಾನ್ಸ್

ಗರಂ ಆದ ಅಲ್ಲು ಫ್ಯಾನ್ಸ್

ಇದರಿಂದ ಸಿಟ್ಟಿಗೆದ್ದಿರುವ ಅಲ್ಲು ಅಭಿಮಾನಿಗಳು ವಿಡಿಯೋ ಶೇರ್ ಮಾಡಿ ವೈರಲ್ ಮಾಡುವವರಿವ ವಿರುದ್ಧ ಗರಂ ಆಗಿದ್ದಾರೆ. ಅಲ್ಲು ಅರ್ಜುನ್ ಬಗ್ಗೆ ಕೇವಲ ತೆಲುಗಿನಲ್ಲಿ ಅಥವಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ. ವಿದೇಶದಲ್ಲೂ ಅಲ್ಲುಗೆ ಪ್ಯಾನ್ಸ್ ಇದ್ದಾರೆ. ದೊಡ್ಡ ಸ್ಟಾರ್ ನಟನ ಬಗ್ಗೆ ಗೊತ್ತಿರದೆ ಇರುವುದಕ್ಕೆ ಸಾಧ್ಯವಿಲ್ಲ. ಉದ್ದೇಶ ಪೂರ್ವಕವಾಗಿಯೆ ಶಕೀಲಾ ಹೀಗೆ ಹೇಳಿದ್ದಾರೆ ಎನ್ನುವುದು ಅಲ್ಲು ಅಭಿಮಾನಿಗಳ ವಾದವಾಗಿದೆ.

ಬನ್ನಿ-ಪ್ರಿನ್ಸ್ ಅಭಿಮಾನಿಗಳ ಸಂಬಂಧ ಹಳಸಿದೆ

ಬನ್ನಿ-ಪ್ರಿನ್ಸ್ ಅಭಿಮಾನಿಗಳ ಸಂಬಂಧ ಹಳಸಿದೆ

ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಅಭಿಮಾನಿಗಳ ನಡುವಿನ ಸಂಬಂಧ ಹಳಸಿದೆ. ಅಲಾ ವೈಕುಂಠಪುರಂಲೋ ಮತ್ತು ಸರಿಲೇರು ನೀಕೆವ್ವರು ಸಿನಿಮಾಗಳ ಕಲೆಕ್ಷನ್ ವಿಚಾರವಾಗಿ ಇಬ್ಬರು ಅಭಿಮಾನಿಗಳ ನಡುವೆ ಚರ್ಚೆ ಜೋರಾಗಿ ನಡೆದಿದ್ದು. ಸರಿಲೇರು ನೀಕೆವ್ವರು ಸಿನಿಮಾ ಕಲೆಕ್ಷನ್ ಫೇಕ್ ಎಂದು ಅಲ್ಲು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದರು. ಈ ಎರಡು ಸಿನಿಮಾಗಳು ರಿಲೀಸ್ ನಂತರ ಅಭಿಮಾನಿಗಳು ಆಗಾಗ ಕಿತ್ತಾಡಿಕೊಳ್ಳುತ್ತಿದ್ದಾರೆ.

More from Filmibeat

English summary
Actress Shakeela said that Mahesh babu is my brother and I do not know Allu Arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X