'ಬಿಗ್ ಬಾಸ್'ಗೆ ಎಂಟ್ರಿ ಕೊಡ್ತಾರೆ ಎಂದಿದ್ದಕ್ಕೆ ಸಿಟ್ಟಾದ ನಟಿ ಶ್ರದ್ಧಾ ಹೇಳಿದ್ದೇನು?
ಕೊರೊನಾ ಆತಂಕದ ನಡುವೆಯೂ ಬಿಗ್ ಬಾಸ್ ರಿಯಾಲಿಟಿ ಶೋಗೆ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೆ ಹಿಂದಿ ಮತ್ತು ತೆಲುಗಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಬಿಗ್ ಬಾಸ್ ಪ್ರಾರಂಭವಾಗುತ್ತೆ ಎನ್ನುತ್ತಿದ್ದಂತೆ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿರುತ್ತೆ.
Recommended Video
ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಸಾಕಷ್ಟು ಸಂಭಾವ್ಯ ಪಟ್ಟಿಗಳು ಹರಿದಾಡುತ್ತಿರುತ್ತವೆ. ಈಗಾಗಲೆ ತೆಲುಗಿನಲ್ಲಿ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಸಂಭಾವ್ಯ ಪಟ್ಟಿಯಲ್ಲಿ ನಟಿ ಶ್ರದ್ಧಾ ದಾಸ್ ಹೆಸರು ಕೂಡ ಕೇಳಿ ಬರುತ್ತಿದೆ. ಈ ಬಾರಿಯ ಬಿಗ್ ಬಾಸ್-4ನಲ್ಲಿ ಶ್ರದ್ಧಾ ದಾಸ್ ಭಾಗಿಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ...

ಗರಂ ಆದ ಶ್ರದ್ಧಾ ದಾಸ್
ಬಿಗ್ ಬಾಸ್ ಸಂಭಾವ್ಯ ಪಟ್ಟಿ ನೋಡಿ ನಟಿ ಶ್ರದ್ಧಾ ದಾಸ್ ಫುಲ್ ಗರಂ ಆಗಿದ್ದಾರೆ. ಗಾಳಿ ಸುದ್ದಿ ಹಬ್ಬಿಸಿದವರ ವಿರುದ್ಧ ಸಿಟ್ಟಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶ್ರದ್ಧಾ ನಾನು ಬಿಗ್ ಬಾಸ್ ಹೊಗುತ್ತಿಲ್ಲ, ಯಾರು ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.

ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ
"ಬಿಗ್ ಬಾಸ್ ತೆಲುಗಿಗೆ ನನ್ನನ್ನು ಯಾರು ಸಂಪರ್ಕ ಮಾಡಿಲ್ಲ. ನಾನು ಬಿಗ್ ಬಾಸ್ ಗೆ ಹೋಗುತ್ತಿಲ್ಲ. ಅನೇಕರು ನನ್ನನ್ನು ಕೇಳುತ್ತಿದ್ದಾರೆ. ಈ ಬಗ್ಗೆ ತುಂಬಾ ಮೆಸೇಜ್ ಗಳು ಬರುತ್ತಿವೆ. ಈಗಾಗಲೆ ನಾನು ಸ್ಪಷ್ಟಪಡಿಸಿದ್ದೀನಿ. ಈ ರೀತಿಯ ಸುದ್ದಿಗಳನ್ನು ಹಬ್ಬಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಕೊನೆಯ ಬಾರಿ ಸ್ಪಷ್ಟಪಡಿಸುತ್ತಿದ್ದೇನೆ. ಅಭಿಮಾನಿಗಳು ಈ ಸುದ್ದಿ ಕೇಳಿ ನಿರಾಸೆಗೊಂಡಿದ್ದಾರೆ. ಅಲ್ಲದೆ ಕೆಲವರು ಅಂತಹ ವದಂತಿಗಳ ವಿರುದ್ಧ ಮುಂದೆ ಹೋಗಿ ದೂರು ನೀಡುವಂತೆ ಹೇಳುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಹೋಗ್ತಾರಾ ನಟ ತರುಣ್?
ನಟ ತರುಣ್ ಬಿಗ್ ಬಾಸ್-4ಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಮೊದಲು ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ತರುಣ್ ಬಿಗ್ ಬಾಸ್ ಗೆ ಹೋಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಡಲಿದ್ದಾರೆ ಬಿಗ್ ಬಾಸ್-4
ತೆಲುಗು ಬಿಗ್ ಬಾಸ್-4ಗೆ ಈಗಾಗಲೆ ಭರ್ಜರಿ ತಯಾರಿ ನಡೆಯುತ್ತಿದೆ. ಬಿಗ್ ಬಾಸ್-4 ಲೋಗೊ ಕೂಡ ರಿಲೀಸ್ ಮಾಡಲಾಗಿದೆ. ಈ ಬಾರಿಯ ಬಿಗ್ ಬಾಸ್ ಯಾರು ನಡೆಸಿಕೊಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ಅಕ್ಕಿನೇನಿ ನಾಗಾರ್ಜುನ್ ಅವರೆ ನಡೆಸಿಕೊಡಲಿದ್ದಾರೆ ಎಂದು ಬಹಿರಂಗಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.


Click it and Unblock the Notifications











